ಚಾಮರಾಜನಗರ

ಇಂದು ಬಸವ ಜಯಂತಿ ಆಚರಣೆ ಕಾರ್ಯಕ್ರಮ
ಚಾಮರಾಜನಗರ

ಇಂದು ಬಸವ ಜಯಂತಿ ಆಚರಣೆ ಕಾರ್ಯಕ್ರಮ

October 22, 2018

ಚಾಮರಾಜನಗರ: ಜಿಲ್ಲಾಡ ಳಿತ, ಜಿಲ್ಲಾ ಪಂಚಾ ಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಅಕ್ಟೋಬರ್ 22ರಂದು ಚಾ.ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಜಾನಪದ ಕಲಾತಂಡಗಳೊಡನೆ ಶ್ರೀ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ನಡೆಯಲಿರುವ ಸಮಾ ರಂಭದ ದಿವ್ಯ ಸಾನಿಧ್ಯವನ್ನು ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮಿಗಳು ವಹಿಸುವರು….

ಅ.24, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ
ಚಾಮರಾಜನಗರ

ಅ.24, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ

October 22, 2018

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.24ರಂದು ಚಾ.ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ನಡೆಯಲಿರುವ ಸಮಾ ರಂಭದ ಅಧ್ಯಕ್ಷತೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ವಹಿಸುವರು….

ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ
ಚಾಮರಾಜನಗರ

ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

October 21, 2018

ಹೂವಿನ ಅಲಂಕಾರಿಕ ಪ್ರತಿ ಕೃತಿ ನಿರ್ಮಾಣ, ಯುವಜನರ ಸೆಳೆಯುತ್ತಿರುವ ಸೆಲ್ಫಿ ಪಾಯಿಂಟ್, ಮಕ್ಕಳಿಗಾಗಿ ಕಾರಂಜಿ ನಿರ್ಮಾಣ ಚಾಮರಾಜನಗರ: ತೋಟ ಗಾರಿಕೆ ಇಲಾಖೆ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆರಂಭಗೊಂಡಿರುವ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ. ಅ. 22ರವರೆಗೆ ನಡೆಯಲಿರುವ ಫಲ ಪುಷ್ಪ ಪ್ರದರ್ಶನವು ಮೊದಲ ದಿನವೇ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿ ಯಾಗಿದೆ. ಉದ್ಘಾಟನೆಗೊಂಡ ಕೂಡಲೇ ಜಿಲ್ಲೆಯ ಜನರು ಆಕರ್ಷಕ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಮುಗಿಬಿದ್ದರು. ಈ ಸಾಲಿನ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಹೂವಿನ…

ವಿಶ್ವದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್: ಡಿಸಿ
ಚಾಮರಾಜನಗರ

ವಿಶ್ವದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್: ಡಿಸಿ

October 21, 2018

ಚಾಮರಾಜನಗರ: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಸಹೋದರತೆ ತತ್ವಗಳ ಆಧಾರದಲ್ಲಿ ಸಂವಿಧಾನ ರಚಿಸಿದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯಪಟ್ಟರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡತನದಲ್ಲಿ ಹುಟ್ಟಿ ಅನೇಕ ಶೋಷಣೆ, ದೌರ್ಜನ್ಯ…

ಮೈಸೂರು ಅರಮನೆಯಲ್ಲಿ ದಸರಾ ವೈಭೋಗ: ಚಾಮರಾಜನಗರದಲ್ಲಿ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಮನೆ ಅನಾಥ
ಚಾಮರಾಜನಗರ

ಮೈಸೂರು ಅರಮನೆಯಲ್ಲಿ ದಸರಾ ವೈಭೋಗ: ಚಾಮರಾಜನಗರದಲ್ಲಿ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಮನೆ ಅನಾಥ

October 20, 2018

ಚಾಮರಾಜನಗರ: ಮೈಸೂರಿನಲ್ಲಿ ನಡೆಯುವ ದಸರಾವನ್ನು ಇಡೀ ವಿಶ್ವವೇ ನೋಡಿದೆ. ಆದರೆ ಮೈಸೂರ ಅರಸರಾಗಿದ್ದ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳವಾದ ಚಾಮರಾಜನಗರದಲ್ಲಿರುವ ಜನನ ಮಂಟಪ ಭೂತಬಂಗಲೆಯಾಗಿ ಅನಾಥವಾಗಿದೆ. ಅಲ್ಲದೇ ಕುಡುಕರ ಆವಾಸ ಸ್ಥಾನ, ಕಸದ ಕೊಂಪೆ, ಮೂತ್ರ ವಿಸರ್ಜನೆಯ ತಾಣವಾಗಿರುವುದು ವಿಪರ್ಯಾಸ. ಮೈಸೂರು ರಾಜಮನೆತನಕ್ಕೂ, ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧವಿದೆ. ಮೈಸೂರು ಅರಸರಾಗಿದ್ದ ಚಾಮರಾಜೇಂದ್ರ ಒಡೆಯರ್ 1776ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ಈ ನೆನಪಿಗಾಗಿಯೇ ಇಲ್ಲಿ ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ವೇಳೆ ಅರಿಕುಠಾರ ಎಂದು ಕರೆಯುತ್ತಿದ್ದ ಈ ಊರಿಗೆ…

ಗುಂಡ್ಲುಪೇಟೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಚಾಮರಾಜನಗರ

ಗುಂಡ್ಲುಪೇಟೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

October 20, 2018

ಗುಂಡ್ಲುಪೇಟೆ:  ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಮತ್ತಿತರೆ ಅಭಿವೃದ್ಧಿ ಕಾಮಗಾರಿ ಗಳನ್ನು ಶಾಸಕ ಸಿ.ಎಸ್.ನಿರಂಜನ ಕುಮಾರ್ ಪರಿಶೀಲನೆ ನಡೆಸಿದರು. ಪಟ್ಟಣದ ದ.ರಾ.ಬೇಂದ್ರೆನಗರದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಕಾಮ ಗಾರಿಗಳನ್ನು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣ ವನ್ನು ಮಾದರಿಯನ್ನಾಗಿಸಲು ಶ್ರಮಿಸುತ್ತಿದ್ದೇನೆ. ಈಗ ಕೇವಲ 5 ತಿಂಗಳು ಮಾತ್ರ ನನ್ನ ಅಧಿಕಾರ ಕಳೆದಿದೆ. ಪಟ್ಟಣದ ಜನತೆಗೆ ಯಾವ ಯಾವ ಸೌಲಭ್ಯಗಳು ಅಗತ್ಯವಾಗಿ ಆಗಬೇಕಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರು ಮತ್ತು ಸದಸ್ಯ…

ಗಾಂಜಾ ಸಾಗಣೆ; ಇಬ್ಬರ ಬಂಧನ
ಚಾಮರಾಜನಗರ

ಗಾಂಜಾ ಸಾಗಣೆ; ಇಬ್ಬರ ಬಂಧನ

October 20, 2018

ಹನೂರು: ಅಕ್ರಮ ವಾಗಿ ಸಾಗಾಣೆ ಮಾಡುತ್ತಿದ್ದ ಗಾಂಜಾ ವಶಪಡಿಸಿಕೊಂಡಿರುವ ರಾಮಾಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಹನೂರು ತಾಲೂಕಿನ ರಾಮಾಪುರ ಠಾಣೆ ಸರಹದ್ದಿನ ಕೊಪ್ಪ ಗ್ರಾಮದ ನಿವಾಸಿ ದಿನೇಶ್ ಮತ್ತು ತಮಿಳುನಾಡನ ಕೋಟೆಮಾಳ ಗ್ರಾಮದ ನಿವಾಸಿ ಮಲ್ಲಿಸೆಲ್ಲ ಬಂಧಿತರಾಗಿದ್ದು, 2 ಕೆಜಿ 100 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕೊಪ್ಪ ಗ್ರಾಮದ ನಿವಾಸಿ ದಿನೇಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ವನ್ನು ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸಿ ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ತಮಿಳು ನಾಡಿನ ಮಿಣ್ಯಂನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಮಿಳುನಾಡು…

ಚಾಮರಾಜನಗರ ದಸರಾಕ್ಕೆ ಸಂಭ್ರಮದ ತೆರೆ
ಚಾಮರಾಜನಗರ

ಚಾಮರಾಜನಗರ ದಸರಾಕ್ಕೆ ಸಂಭ್ರಮದ ತೆರೆ

October 17, 2018

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ 4 ದಿನಗಳ ಕಾಲ ನಡೆದ ದಸರಾ ಮಹೋತ್ಸವ ಮಂಗಳವಾರ ಮುಕ್ತಾಯಗೊಂಡಿತು. ಮಹೋತ್ಸವದ ಅಂತಿಮ ದಿನವಾದ ಮಂಗಳವಾರ ಕೂಡ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ಮುಖ್ಯ ವೇದಿಕೆಯಲ್ಲಿ ಸ್ಥಳೀಯ, ರಾಜ್ಯ ಮಟ್ಟದ ಕಲಾವಿದರು ಹಾಗೂ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕದ ಸೊಬಗು ಅನಾವರಣಗೊಂಡಿತು. ಅಂತಿಮ ದಿನದ ಆಕರ್ಷಣೆಯಾಗಿದ್ದ ಖ್ಯಾತ ಗಾಯಕ ಹೇಮಂತ್ ಅವರ ಕನ್ನಡ ರಸಸಂಜೆ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು. ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ನೃತ್ಯ ರೂಪಕಕ್ಕೆ ನಗರದ ಜನತೆ ರೋಮಾಂಚನಗೊಂಡರು. ಪ್ರತಿದಿನ…

ಅ.25ರಿಂದ ವನವಾಸಿ ರಾಜ್ಯಮಟ್ಟದ ಕ್ರೀಡಾಸ್ಪರ್ಧೆ
ಚಾಮರಾಜನಗರ

ಅ.25ರಿಂದ ವನವಾಸಿ ರಾಜ್ಯಮಟ್ಟದ ಕ್ರೀಡಾಸ್ಪರ್ಧೆ

October 17, 2018

ಗುಂಡ್ಲುಪೇಟೆ: ಇದೇ 25ರಿಂದ 28ರವರೆಗೆ ಪಟ್ಟಣದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯಿಂದ ರಾಜ್ಯ ಮಟ್ಟದ ಬಿಲ್ಲುಗಾರಿಕೆ ತರಬೇತಿ ಹಾಗೂ ಕ್ರೀಡಾಸ್ಪರ್ಧೆ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಹೇಳಿದರು. ಪಟ್ಟಣದ ವನವಾಸಿ ವಿದ್ಯಾರ್ಥಿ ನಿಲಯ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಆರ್‍ಎಸ್‍ಎಸ್‍ನ ಅಂಗ ಸಂಸ್ಥೆಯಾದ ವನವಾಸಿ ಕಲ್ಯಾಣ ಸಂಸ್ಥೆಯು ದೇಶದ ಎಲ್ಲೆಡೆ ನೆಲೆಸಿರುವ ಮೂಲವಾಸಿ ಗಳ ಅಭಿವೃದ್ಧಿಗೆ ಶ್ರಮಿಸಿ ಅವರಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುತ್ತಿದೆ. ವನವಾಸಿ ಗಳನ್ನು ದೇಶದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದು, ಒಲಂಪಿಕ್ ಕ್ರೀಡೆಯಲ್ಲಿ ಸ್ಪರ್ಧಿಸುವಂತೆ…

ಅಕ್ರಮವಾಗಿ ಸಾಗಿಸುತ್ತಿದ್ದ ತೇಗದ ಮರ ವಶ
ಚಾಮರಾಜನಗರ

ಅಕ್ರಮವಾಗಿ ಸಾಗಿಸುತ್ತಿದ್ದ ತೇಗದ ಮರ ವಶ

October 17, 2018

ಹನೂರು:  ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ತೇಗದ ಮರಗಳನ್ನು ಅರಣ್ಯಾಧಿಕಾರಿಗಳು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಪಟ್ಟಣದ ಸಮೀಪ ನಡೆದಿದೆ. ಮೈಸೂರಿನಿಂದ ಹನೂ ರಿಗೆ ಅಕ್ರಮವಾಗಿ ಮರ ಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ವಲಯ ಅರಣ್ಯಾಧಿಕಾರಿ ರುಕಿಯಾ ಪರ್ವಿನ್ ವಾಹನ ತಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಬೇವು ಹಾಗೂ ತೇಗದ ಮರಗಳಿರುವುದು ಕಂಡು ಬಂದಿದೆ. ವಿಚಾರಿಸಿದಾಗ ಬೇವಿನ ಮರ ಖರೀದಿಸಿರುವುದಕ್ಕೆ ರಶೀದಿ ಇದ್ದು, ತೇಗದ ಮರಗಳಿಗೆ ರಶೀದಿ ಇಲ್ಲದಿರುವುದು ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ….

1 65 66 67 68 69 141
Translate »