ಗಾಂಜಾ ಸಾಗಣೆ; ಇಬ್ಬರ ಬಂಧನ
ಚಾಮರಾಜನಗರ

ಗಾಂಜಾ ಸಾಗಣೆ; ಇಬ್ಬರ ಬಂಧನ

October 20, 2018

ಹನೂರು: ಅಕ್ರಮ ವಾಗಿ ಸಾಗಾಣೆ ಮಾಡುತ್ತಿದ್ದ ಗಾಂಜಾ ವಶಪಡಿಸಿಕೊಂಡಿರುವ ರಾಮಾಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಹನೂರು ತಾಲೂಕಿನ ರಾಮಾಪುರ ಠಾಣೆ ಸರಹದ್ದಿನ ಕೊಪ್ಪ ಗ್ರಾಮದ ನಿವಾಸಿ ದಿನೇಶ್ ಮತ್ತು ತಮಿಳುನಾಡನ ಕೋಟೆಮಾಳ ಗ್ರಾಮದ ನಿವಾಸಿ ಮಲ್ಲಿಸೆಲ್ಲ ಬಂಧಿತರಾಗಿದ್ದು, 2 ಕೆಜಿ 100 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕೊಪ್ಪ ಗ್ರಾಮದ ನಿವಾಸಿ ದಿನೇಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ವನ್ನು ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸಿ ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ತಮಿಳು ನಾಡಿನ ಮಿಣ್ಯಂನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಮಿಳುನಾಡು ಕೋಟೆ ಮಾಳ ನಿವಾಸಿ ಮಲ್ಲಪ್ಪನ ಸಹಾಯದಿಂದ ತೆರಳುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಮಾಪುರ ಇನ್ಸ್ ಪೆಕ್ಟರ್ ಮನೋಜ್‍ಕುಮಾರ್, ಸಿಬ್ಬಂದಿ ಗಳಾದ ನಾಗೇಂದ್ರ, ನಂಜುಂಡ, ನವೀನ್, ರಘು, ಬೊಮ್ಮೇಗೌಡ, ಸುರೇಶ್ ದಾಳಿ ಮಾಡಿ ಗಾಂಜಾ ವಶಕ್ಕೆ ಪಡೆದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶದಲ್ಲಿ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಿಸಿಕೊಂಡು ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಿದರು.

Translate »