ಗುಂಡ್ಲುಪೇಟೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಚಾಮರಾಜನಗರ

ಗುಂಡ್ಲುಪೇಟೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

October 20, 2018

ಗುಂಡ್ಲುಪೇಟೆ:  ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಮತ್ತಿತರೆ ಅಭಿವೃದ್ಧಿ ಕಾಮಗಾರಿ ಗಳನ್ನು ಶಾಸಕ ಸಿ.ಎಸ್.ನಿರಂಜನ ಕುಮಾರ್ ಪರಿಶೀಲನೆ ನಡೆಸಿದರು.

ಪಟ್ಟಣದ ದ.ರಾ.ಬೇಂದ್ರೆನಗರದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಕಾಮ ಗಾರಿಗಳನ್ನು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣ ವನ್ನು ಮಾದರಿಯನ್ನಾಗಿಸಲು ಶ್ರಮಿಸುತ್ತಿದ್ದೇನೆ. ಈಗ ಕೇವಲ 5 ತಿಂಗಳು ಮಾತ್ರ ನನ್ನ ಅಧಿಕಾರ ಕಳೆದಿದೆ. ಪಟ್ಟಣದ ಜನತೆಗೆ ಯಾವ ಯಾವ ಸೌಲಭ್ಯಗಳು ಅಗತ್ಯವಾಗಿ ಆಗಬೇಕಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರು ಮತ್ತು ಸದಸ್ಯ ರಿಂದ ಮಾಹಿತಿಯನ್ನು ಪಡೆದಿದ್ದೇನೆ. ಸದ್ಯದಲ್ಲೇ ವಸತಿರಹಿತರಿಗೆ ಮನೆ ಕಟ್ಟಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗು ವುದು ಮತ್ತು ಪಟ್ಟಣದಲ್ಲಿನ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗು ವುದು. ಇದರೊಂದಿಗೆ ಈಗಾಗಲೇ ಪಟ್ಟಣದ ಹಲವು ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದರ ಪ್ರಗತಿಯನ್ನು ಖುದ್ದಾಗಿ ಪರಿಶೀಲನೆ ನಡೆಸು ವುದರೊಂದಿಗೆ ಗುಣಮಟ್ಟವನ್ನು ಕಾಪಾ ಡಲು ಸೂಚನೆ ನೀಡಿದ್ದೇನೆ ಎಂದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿ ರುವ ಕಾಗೆಹಳ್ಳದ ಅಭಿವೃದ್ಧಿಯು ತ್ವರಿತವಾಗಿ ನಡೆಯುತ್ತಿದ್ದು, ಸದ್ಯದಲ್ಲೇ ಈ ರಾಜ ಕಾಲುವೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿ ನಡೆಸ ಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ದುರ್ನಾತ ಮತ್ತು ಕೊಳಚೆ ಮುಕ್ತವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ರಮೇಶ್, ಎಸ್.ಗೋವಿಂದರಾಜನ್, ವೀಣಾ ಮಂಜುನಾಥ್, ಕುಮಾರ್, ಮಲ್ಲರಾಜು, ಪುಷ್ಪಾವೆಂಕಟೇಶ್, ಸುರೇಶ್ ಕಾರ್ಗಳ್ಳಿ, ಮುಖಂಡರಾದ ಕಣ್ಣನ್, ಪ್ರಣಯ್, ಎಚ್.ಸಿ.ಮಂಜುನಾಥ್, ಸತೀಶ್, ಮಲ್ಲಿಕಾರ್ಜುನ್, ಮಡಳ್ಳಿರಾಜಣ್ಣ ಸೇರಿ ದಂತೆ ಹಲವು ಹಾಜರಿದ್ದರು.

Translate »