ಅ.25ರಿಂದ ವನವಾಸಿ ರಾಜ್ಯಮಟ್ಟದ ಕ್ರೀಡಾಸ್ಪರ್ಧೆ
ಚಾಮರಾಜನಗರ

ಅ.25ರಿಂದ ವನವಾಸಿ ರಾಜ್ಯಮಟ್ಟದ ಕ್ರೀಡಾಸ್ಪರ್ಧೆ

October 17, 2018

ಗುಂಡ್ಲುಪೇಟೆ: ಇದೇ 25ರಿಂದ 28ರವರೆಗೆ ಪಟ್ಟಣದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯಿಂದ ರಾಜ್ಯ ಮಟ್ಟದ ಬಿಲ್ಲುಗಾರಿಕೆ ತರಬೇತಿ ಹಾಗೂ ಕ್ರೀಡಾಸ್ಪರ್ಧೆ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಹೇಳಿದರು.

ಪಟ್ಟಣದ ವನವಾಸಿ ವಿದ್ಯಾರ್ಥಿ ನಿಲಯ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಆರ್‍ಎಸ್‍ಎಸ್‍ನ ಅಂಗ ಸಂಸ್ಥೆಯಾದ ವನವಾಸಿ ಕಲ್ಯಾಣ ಸಂಸ್ಥೆಯು ದೇಶದ ಎಲ್ಲೆಡೆ ನೆಲೆಸಿರುವ ಮೂಲವಾಸಿ ಗಳ ಅಭಿವೃದ್ಧಿಗೆ ಶ್ರಮಿಸಿ ಅವರಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುತ್ತಿದೆ. ವನವಾಸಿ ಗಳನ್ನು ದೇಶದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದು, ಒಲಂಪಿಕ್ ಕ್ರೀಡೆಯಲ್ಲಿ ಸ್ಪರ್ಧಿಸುವಂತೆ ಮಾಡಲು ಪಟ್ಟಣದಲ್ಲಿ ರಾಜ್ಯಮಟ್ಟದ ಬಿಲ್ಲುಗಾರಿಕೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ವನವಾಸಿ ಕಲ್ಯಾಣ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, 1652ರಲ್ಲಿ ಮಧ್ಯಪ್ರದೇಶದಲ್ಲಿ ಪ್ರಾರಂಭ ವಾದ ಈ ಸಂಸ್ಥೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ನೆಲೆಸಿರುವ ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವನ ವಾಸಿಗಳು ವಾಸಿಸುವ ಹಾಡಿಗಳಲ್ಲಿ ಉಚಿತ ಶಿಕ್ಷಣ, ಆಯ್ದ ಪಟ್ಟಣಗಳಲ್ಲಿ ಉಚಿತ ಹಾಸ್ಟೆಲ್, ಮನೆಪಾಠ, ಅಕ್ಷರಸ್ಥರಿಗೆ ಭಾರ ತೀಯ ಮೆಡಿಕಲ್ ಕೌನ್ಸಿಲ್ ವತಿಯಿಂದ ಆರೋಗ್ಯಮಿತ್ರ ತರಬೇತಿ, ಹಾಡಿಗಳ ಜನರಿಗೆ ಮೊಬೈಲ್ ವಾಹನದ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ವಿವರಿಸಿದರು.

ವನವಾಸಿಗಳು ದೈಹಿಕವಾಗಿ ಸದೃಢರಾ ಗಿದ್ದು ಸಮರ್ಪಕ ತರಬೇತಿ ನೀಡಿದರೆ ಒಲಂಪಿಕ್ಸ್‍ನಂತಹ ಅಂತಾರಾಷ್ಟ್ರೀಯ ಸ್ಪರ್ಧೆ ಗಳಲ್ಲಿ ದೇಶವನ್ನು ಪ್ರತಿನಿಧಿಸಿ ಜಯಗಳಿ ಸಲಿದ್ದಾರೆ. ಆದ್ದರಿಂದ ಪಾರಂಪರಿಕ ಬಿಲ್ಲು ವಿದ್ಯೆಯಲ್ಲಿ ಉತ್ತಮ ಸಾಧನೆ ಮಾಡಿರುವ 16 ಜಿಲ್ಲೆಗಳ ಸುಮಾರು 600ಯುವಕರಿಗೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ತರಬೇತಿ ನೀಡಿ ಅ.28ರಂದು ಬಿಲ್ಲುಗಾರಿಕೆ ಸ್ಪರ್ಧೆ ಆಯೋಜಿಸಿದೆ. ಇದಕ್ಕೆ ಸಾರ್ವ ಜನಿಕರು ಸಹಕಾರ ನೀಡಬೇಕು ಎಂದರು.

ಈ ವೇಳೆ ವನವಾಸಿ ಕಲ್ಯಾಣದಿಂದ ವನವಾಸಿ ವಿಕಾಸದ ಪರಿಚಯದ ಬ್ರೋಚರ್ ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ತಾಲೂಕು ಕಾರ್ಯದರ್ಶಿ ನಾಗೇಶ್, ಕೆ.ಎಲ್.ಮಹದೇವಸ್ವಾಮಿ, ಬಿಜೆಪಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಹಿರಿಯ ಮುಖಂಡ ಹುಚ್ಚೇಗೌಡ, ರಾಜಣ್ಣ, ಮಹೇಶ್ ಇದ್ದರು.

Translate »