ಕುಶಾಲನಗರ ಪಪಂ ಚುನಾವಣೆ: 16 ವಾರ್ಡ್‍ಗೆ 66 ಅಭ್ಯರ್ಥಿ
ಕೊಡಗು

ಕುಶಾಲನಗರ ಪಪಂ ಚುನಾವಣೆ: 16 ವಾರ್ಡ್‍ಗೆ 66 ಅಭ್ಯರ್ಥಿ

October 17, 2018

ಕುಶಾಲನಗರ: ಕುಶಾಲನಗರ ಪಪಂ 16 ವಾರ್ಡ್‍ಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 66 ಮಂದಿ ಅಭರ್ಥಿಗಳು 68 ನಾಮ ಪತ್ರಗಳನ್ನು ಮಂಗಳವಾರ ಚುನಾವಣಾ ಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಅ.16 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆವರೆಗೆ ನಾಮ ಪತ್ರ ಸಲ್ಲಿಸಲು ಏಕ ದಿನವನ್ನು ಮಾತ್ರ ಚುನಾವಣಾ ಆಯೋಗ ನಿಗದಿ ಪಡಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ಸಲ್ಲಿಸಿದ ಇಬ್ಬರ ನಾಮಪತ್ರ ಹೊರತು ಪಡಿಸಿ ಉಳಿದ 65 ಮಂದಿ ಒಂದೇ ದಿನ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ 48 ಮಂದಿ ಅಭ್ಯ ರ್ಥಿಗಳು ಹಾಗೂ ಎಸ್‍ಡಿಪಿಐನಿಂದ 3 ಮಂದಿ ಹಾಗೂ ಪಕ್ಷೇತರರಾಗಿ 15 ಮಂದಿ ನಾಮಪತ್ರ ಸಲ್ಲಿಕೆ. 3ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಕೆ.ಎನ್.ದೇವರಾಜ್ ಹಾಗೂ 7ನೇ ವಾರ್ಡ್ ಅಭ್ಯರ್ಥಿ ಎಂ.ಬಿ. ಸುರೇಶ್ ಅವರು ತಲಾ ಎರಡು ನಾಮ ಪತ್ರ ಸಲ್ಲಿಕೆಯಾಗಿದೆ.

ಚುನಾವಣಾಧಿಕಾರಿಗಳಾಗಿ ತೋಟಗಾ ರಿಕಾ ಇಲಾಖೆ ಸಹಾಯಕ ನಿರ್ದೇಶಕ ರಾದ ಪ್ರಮೋದ್, ವರದರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ, ಶಿಕ್ಷಣ ಇಲಾಖೆಯ ರಾಜೇಶ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಪಪಂ ಮುಖ್ಯಾಧಿಕಾರಿ ಸುಜೇಯ್ ಕುಮಾರ್, ಸಿಬ್ಬಂದಿ ಸತೀಶ್, ಶಿವರಾಜ್, ಸದಾಶಿವ ಮೂರ್ತಿ ಇದ್ದರು.

Translate »