ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯತಿಯ 18 ವಾರ್ಡ್ ಗಳಿಗೆ ಅ.28 ರಂದು ನಡೆಯುವ ಚುನಾ ವಣೆಗೆ ಬಿಜೆಪಿ ಪಕ್ಷದಿಂದ 19, ಕಾಂಗ್ರೆಸ್ ಪಕ್ಷದಿಂದ 14, ಜೆಡಿಎಸ್ ಪಕ್ಷದಿಂದ 4, ಪಕ್ಷೇತರರು 19, ಎಸ್‍ಡಿಪಿಐ 4, ಸಿಪಿಐಎಂ 1, ವೆಲ್ಪರ್ ಪಾರ್ಟಿ 4 ಅಭ್ಯರ್ಥಿಗಳು ಇಂದು ತಾಲೂಕು ಕಛೇರಿಯ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ತಹಶಿಲ್ದಾರ್ ಆರ್. ಗೋವಿಂದರಾಜ್ ಹಾಗೂ ಪಟ್ಟಣ ಪಂಚಾ ಯಿತಿಯಲ್ಲಿ ಚಾಲ್ರ್ಸ್‍ಡಿಸೋಜ ಅವರಿಗೆ ನಾಮಪತ್ರ ಸಲ್ಲಿಸಿದರು.
ವಾರ್ಡ್ ನಂ.1, ಚರ್ಚ್ ರಸ್ತೆ, ವಾರ್ಡ್ 2 ದೇವಾಂಗ ಬೀದಿ, ವಾರ್ಡ್ 3 ಅರಸು ನಗರ, ವಾರ್ಡ್ 4 ತೆಲುಗರ ಬೀದಿ, 5ನೇ ವಾರ್ಡ್ ಮೊಗರಗಲ್ಲಿ, 6ನೇ ವಾರ್ಡ್ ಹರಿ ಕೇರಿ, ವಾರ್ಡ್ ನಂ.7 ನೆಹರುನಗರ, ವಾರ್ಡ್ 8 ನೆಹರುನಗರ[2] ವಾರ್ಡ್ 9 ಸುಭಾಷ್ ನಗರ, 10ನೇ ವಾರ್ಡ್ ನಿಸರ್ಗ ಬಡಾವಣೆ, ವಾರ್ಡ್ 11 ಪಂಜರಪೇಟೆ, ವಾರ್ಡ್ 12 ಮೀನುಪೇಟೆ, 13ನೇ ವಾರ್ಡ್ ಮೀನು ಪೇಟೆ[2] ವಾರ್ಡ್ 14 ಗೌರಿಕೆರೆ, 15ನೇ ವಾರ್ಡ್ ಗಾಂಧಿನಗರ, ವಾರ್ಡ್ 16 ಚಿಕ್ಕ ಪೇಟೆ, ವಾರ್ಡ್ 17 ಮೈಕ್ರೋವೇವ್, ವಾರ್ಡ್ 18 ಶಿವಕೇರಿ ಸೇರಿದಂತೆ 18 ವಾರ್ಡ್‍ಗಳಿಗೆ ಒಟ್ಟು 65 ಅಭ್ಯರ್ಥಿಗಳು ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಸಹಾಯಕ ಚುನಾವಣಾಧಿಕಾರಿಗಳಾದ ನಟೇಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಶಿವರಾಜ್ ಮತ್ತು ಬಿಜೆಪಿ ಮುಖಂಡ ರಾದ ಪಿ.ರಘುನಾಣಯ್ಯ, ಶಶಿ ಸುಬ್ರ ಮಣಿ, ರಿನಾ ಪ್ರಕಾಶ್, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ, ಜೆಡಿಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸಂಕೇತ್ ಪೂವಯ್ಯ ಸೇರಿದಂತೆ ಇತರ ಪಕ್ಷಗಳ ಮುಖಂಡರುಗಳು ಭಾಗವಹಿಸಿದ್ದರು. ಪಟ್ಟಣ ಪಂಚಾಯಿತಿಯಲ್ಲಿ ಈ ಹಿಂದಿನ ಆಡಳಿದಲ್ಲಿದ್ದ ಹಿರಿಯ ಸದಸ್ಯ ಎಸ್.ಹೆಚ್. ಮೈನೂದ್ದಿನ್, ಎಸ್.ಹೆಚ್.ಮತೀನ್, ಇ.ಸಿ. ಜೀವನ್, ಎಂ.ಕೆ.ದೇಚಮ್ಮ, ತಸ್ನಿಂ ಅಕ್ತರ್, ಸಚಿನ್ ಕುಟ್ಟಯ್ಯ, ಬಿ.ಡಿ.ಸುನಿತ, ರಂಜಿ ಪೂಣಚ್ಚ, ಡಿ.ಪಿ.ರಜೇಶ್, ಮಹ್ಮದ್ ರಫಿ ಅವ ರುಗಳು ಸಹ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ.