ಚಾಮರಾಜನಗರ: ಪೌಷ್ಠಿಕ ಆಹಾ ರಗಳನ್ನು ಸೇವಿಸುವುದರಿಂದ ಆರೋ ಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ರೋಗಗಳಿಂದ ದೂರವಿರಬಹುದು ಎಂದು ಚಾಮರಾಜನಗರ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ತಿಳಿಸಿದರು. ನಗರದ ಸರ್ಕಾರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಪೌಷ್ಠಿಕತೆ ವಾರ” ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ಮನುಷ್ಯನಿಗೆ…
ಎಸ್‍ಸಿವಿಟಿ ಪರೀಕ್ಷೆ: ನಿಷೇಧಾಜ್ಞೆ
September 10, 2018ಚಾಮರಾಜನಗರ: ಎಸ್‍ಸಿವಿಟಿ ಪರೀಕ್ಷೆ ಸಂಬಂಧ ಮರಿಯಾಲದ ಜೆಎಸ್‍ಎಸ್ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 10 ರಿಂದ 14 ರವರೆಗೆ ಥಿಯರಿ ಪರೀಕ್ಷೆಗಳು ಮತ್ತು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 15 ರಿಂದ 18 ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆ ಯಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ದಿನಗಳಂದು ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ಅಂಗಡಿಗಳನ್ನು ಬೆಳಿಗ್ಗೆ…
ಜಿಪಂ ಸಾಮಾನ್ಯ ಸಭೆ ಮುಂದೂಡಿಕೆ
September 10, 2018ಚಾಮರಾಜನಗರ: ಜಿಪಂ ಅಧ್ಯಕ್ಷರಾದ ಶಿವಮ್ಮ ಅಧ್ಯಕ್ಷತೆಯಲ್ಲಿ ಸೆ.10 ರಂದು ನಿಗದಿಯಾಗಿದ್ದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಸೆ.10 ರಂದು ಭಾರತ್ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಅಂದು ಜಿಪಂ ಸದಸ್ಯರು ಇನ್ನಿತರ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸಾಮಾನ್ಯ ಸಭೆಗೆ ಹಾಜರಾಗಲು ಕಷ್ಟಕರವಾಗಬಹುದೆಂದು ಸಾಮಾನ್ಯ ಸಭೆಯನ್ನು ಮುಂದೂಡುವಂತೆ ಜಿಲ್ಲಾ ಪಂಚಾ ಯತ್ ಅಧ್ಯಕ್ಷರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 10 ರಂದು ನಿಗದಿ ಯಾಗಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ಕಡೇ ಶ್ರಾವಣ ಶನಿವಾರ: ದೇವಾಲಯದಲ್ಲಿ ವಿಶೇಷ ಪೂಜೆ
September 9, 2018ಚಾಮರಾಜನಗರ: ಕಡೆಯ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲಾದಂತ್ಯ ಶನಿವಾರ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿತ್ತು. ಬೆಳಿಗ್ಗೆಯಿಂದಲೇ ಸಾರ್ವಜನಿಕರು ದೇವಾ ಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಗರದ ಚಾಮರಾಜೇಶ್ವರಸ್ವಾಮಿ ದೇವ ಸ್ಥಾನ, ಕೊಳದಬೀದಿ ಗಣಪತಿ, ಆಂಜ ನೇಯ ಸ್ವಾಮಿ, ಆದಿಶಕ್ತಿ, ವೀರಭದ್ರೇಶ್ವರ ಸ್ವಾಮಿ, ಮಂಟೇಸ್ವಾಮಿ ದೇವಸ್ಥಾನದಲ್ಲಿ ಹಾಗೂ ಮಲೆಮಹದೇಶ್ವರಸ್ವಾಮಿ ಬೆಟ್ಟ, ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ, ಸೇರಿ ದಂತೆ ವಿವಿಧ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.ತಾಲೂಕಿನ ಅಮಚವಾಡಿ ಗ್ರಾಮದ ಚನ್ನಪ್ಪಪುರ ಮಾರ್ಗದಲ್ಲಿರುವ ಶ್ರೀ ಹೆಬ್ಬಾಳ್ ಶನೇಶ್ವರಸ್ವಾಮಿ…
ಸರ್ಕಾರದ ಸೌಲಭ್ಯ ಸದ್ಬಳಕೆಗೆ ಸಲಹೆ
September 9, 2018ಸಂತೇಮರಹಳ್ಳಿ: ಸಮೀಪದ ತೆಳ್ಳ ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಅಡುಗೆ ಮನೆಯನ್ನು ಪ್ರಾಥ ಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಡುಗೆ ಮನೆಯು 3.97 ಲಕ್ಷ ರೂ. ವೆಚ್ಚದಡಿ ನಿರ್ಮಾಣ ವಾಗಿದೆ. ಸರ್ಕಾರದ ಯೋಜನೆಗಳಲ್ಲಿ ಬಿಸಿ ಯೂಟ ಕಾರ್ಯಕ್ರಮವು ಪ್ರಮುಖವಾ ಗಿದ್ದು, ಇದನ್ನು ಮಕ್ಕಳು ಸರಿಯಾದ ರೀತಿ ಯಲ್ಲಿ ಉಪಯೋಗಿಸಿಕೊಂಡು ಶಿಕ್ಷಣವನ್ನು ಪಡೆಯಬೇಕು ಎಂದು ಸಲಹೆ ನೀಡಿದರು. ಸರ್ಕಾರ ಮಕ್ಕಳ…
ಉಪಹಾರ ಸೇವಿಸಿದ 42 ಮಕ್ಕಳು ಅಸ್ವಸ್ಥ
September 9, 2018ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವರು, ಸಂಸದರ ಸೂಚನೆ ಯಳಂದೂರು: ಬೆಳಗಿನ ಉಪಹಾರ ಸೇವಿಸಿ 42 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಮೆಲ್ಲಹಳ್ಳಿ ಗೇಟ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಉಪಾ ಹಾರಕ್ಕೆ ತಯಾರಿಸಿದ ಉಪ್ಪಿಟ್ಟು ಮತ್ತು ಕೇಸರಿಬಾತ್ ತಿಂದಿದ್ದಾರೆ. ತಿಂದ ಸ್ವಲ್ಪ ಸಮಯದಲ್ಲಿಯೇ ವಿದ್ಯಾರ್ಥಿಗಳಿಗೆ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಶಿಕ್ಷಕರು ಮಕ್ಕಳನ್ನು…
ಬೈಕ್‍ಗೆ ಈಚರ್ ವಾಹನ ಡಿಕ್ಕಿ: ಶಿಕ್ಷಕ ಸಾವು
September 9, 2018ನೆಚ್ಚಿನ ಶಿಕ್ಷಕನ ಅಗಲಿಕೆಯಿಂದ ಕಣ್ಣೀರಿಟ್ಟ ವಿದ್ಯಾರ್ಥಿಗಳು, ಚಂದಕವಾಡಿಯಲ್ಲಿ ಶಿಕ್ಷಕನ ಅಂತ್ಯಕ್ರಿಯೆ ಚಾಮರಾಜನಗರ: ಬೈಕ್‍ಗೆ ಈಚರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಮೀಪದ ಸೋಮವಾರಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲಿರುವ ಕ್ಲಬ್‍ನ ಮುಂಭಾಗ ಶನಿವಾರ ಬೆಳಿಗ್ಗೆ ನಡೆದಿದೆ. ರಾಮಸಮುದ್ರದಲ್ಲಿ ವಾಸವಿದ್ದ ಬಿಸಲವಾಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹೆಚ್.ಎಸ್. ಭೀಮೇಶ್ (40) ಮೃತಪಟ್ಟ ಶಿಕ್ಷಕ. ಘಟನೆಯ ವಿವರ: ಭೀಮೇಶ್ ಅವರು ಶನಿವಾರವಾಗಿದ್ದ ಕಾರಣ ಮುಂಜಾನೆ ತರಗತಿಗೆ ಚಾಮರಾಜನಗರದಿಂದ ಬಿಸಲವಾಡಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಸೋಮ…
ಗ್ರಂಥಾಲಯ ಸೇವೆ ಸದ್ಬಳಕೆಗೆ ಸಲಹೆ
September 8, 2018ಚಾಮರಾಜನಗರ: ಜ್ಞಾನ ಸಂಪಾ ದನೆಗೆ ಅಗತ್ಯವಾಗಿರುವ ಗ್ರಂಥಾಲಯಗಳ ಸೇವೆಯನ್ನು ಪ್ರತಿಯೊಬ್ಬರು ಸದುಪ ಯೋಗ ಮಾಡಿಕೊಳ್ಳಬೇಕೆಂದು ಸಂಸದ ಆರ್.ಧ್ರುವನಾರಾಯಣ ಸಲಹೆ ಮಾಡಿದರು. ನಗರದ ಜಿಲ್ಲಾ ನ್ಯಾಯಾಲಯ ಅವ ರಣದ ಸಂಕೀರ್ಣದಲ್ಲಿ ವಕೀಲರಿಗಾಗಿ ರಾಜ್ಯ ಸರ್ಕಾರದ ಅನುದಾನದಡಿ ವ್ಯವಸ್ಥೆ ಮಾಡಲಾಗಿರುವ ಇ-ಲೈಬ್ರರಿ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಜ್ಞಾನಾರ್ಜನೆಗೆ ಪೂರಕವಾಗಿರುವ ಗ್ರಂಥಾಲಯಗಳು ಪ್ರತಿ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲೆಡೆ ಇರಬೇಕು. ಆದರೆ ಗ್ರಂಥಾ ಲಯಗಳಿಗೆ ನಿರೀಕ್ಷಿತ ಅದ್ಯತೆಯನ್ನು ನೀಡ ಲಾಗುತ್ತಿಲ್ಲ. ಅಧ್ಯಯನಕ್ಕೆ ಗ್ರಂಥಾಲಯ ಗಳು ತುಂಬಾ ಅವಶ್ಯಕವಾಗಿದೆ. ಹೀಗಾಗಿ…
ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್, ಗಿರೀಶ್ ಕಾರ್ನಾಡ್ ವಿರುದ್ಧ ಬಿಜೆಪಿ ಪ್ರತಿಭಟನೆ
September 8, 2018ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆರ್‍ಎಸ್‍ಎಸ್ ಸಂಘಟನೆ ಬಗ್ಗೆ ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್ ಮತ್ತು ಗಿರೀಶ್ ಕಾರ್ನಾಡ್ ಅವರು ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಪಕ್ಷದ ನಗರ ಮಂಡಲ ಆಶ್ರಯದಲ್ಲಿ ಪಕ್ಷದ ಜಿಲ್ಲಾ ಕಾರ್ಯಾ ಲಯದ ಮುಂದೆ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದರು. ನಂತರ ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್, ಗಿರೀಶ್ ಕಾರ್ನಾಡ್ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿ ಭಟನಾ ಮೆರವಣಿಗೆಯನ್ನು ಆರಂಭಿಸಿದರು….
ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿಗೆ ಕ್ರಮ
September 8, 2018ಗುಂಡ್ಲುಪೇಟೆ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಳವಡಿಸಿದ್ದ ಬೀದಿದೀಪಗಳು ಮತ್ತು ಹೈಮಾಸ್ಟ್ ದೀಪಗಳಿಗೆ ನೀಡಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿಯೇ ಹೆದ್ದಾರಿ ಕಾಮಗಾರಿ ಮುಗಿದಿದ್ದರೂ ಸಹ ತಾಂತ್ರಿಕ ಕಾರಣ ಗಳಿಂದ ಬಳಕೆಗೆ ತರದೆ ಪಟ್ಟಣದ ಹೆದ್ದಾರಿಯು ಕಗ್ಗತ್ತಲಿನಿಂದ ಕೂಡಿತ್ತು. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದರು. ಪಟ್ಟಣದ ಸಮಗ್ರ ಅಭಿವೃದ್ಧಿಗೆ…