ಜಿಪಂ ಸಾಮಾನ್ಯ ಸಭೆ ಮುಂದೂಡಿಕೆ
ಚಾಮರಾಜನಗರ

ಜಿಪಂ ಸಾಮಾನ್ಯ ಸಭೆ ಮುಂದೂಡಿಕೆ

September 10, 2018

ಚಾಮರಾಜನಗರ: ಜಿಪಂ ಅಧ್ಯಕ್ಷರಾದ ಶಿವಮ್ಮ ಅಧ್ಯಕ್ಷತೆಯಲ್ಲಿ ಸೆ.10 ರಂದು ನಿಗದಿಯಾಗಿದ್ದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ.

ಸೆ.10 ರಂದು ಭಾರತ್ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಅಂದು ಜಿಪಂ ಸದಸ್ಯರು ಇನ್ನಿತರ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸಾಮಾನ್ಯ ಸಭೆಗೆ ಹಾಜರಾಗಲು ಕಷ್ಟಕರವಾಗಬಹುದೆಂದು ಸಾಮಾನ್ಯ ಸಭೆಯನ್ನು ಮುಂದೂಡುವಂತೆ ಜಿಲ್ಲಾ ಪಂಚಾ ಯತ್ ಅಧ್ಯಕ್ಷರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 10 ರಂದು ನಿಗದಿ ಯಾಗಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ತಿಳಿಸಿದ್ದಾರೆ.

Translate »