ಸರ್ಕಾರದ ಸೌಲಭ್ಯ ಸದ್ಬಳಕೆಗೆ ಸಲಹೆ
ಚಾಮರಾಜನಗರ

ಸರ್ಕಾರದ ಸೌಲಭ್ಯ ಸದ್ಬಳಕೆಗೆ ಸಲಹೆ

September 9, 2018

ಸಂತೇಮರಹಳ್ಳಿ:  ಸಮೀಪದ ತೆಳ್ಳ ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಅಡುಗೆ ಮನೆಯನ್ನು ಪ್ರಾಥ ಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅಡುಗೆ ಮನೆಯು 3.97 ಲಕ್ಷ ರೂ. ವೆಚ್ಚದಡಿ ನಿರ್ಮಾಣ ವಾಗಿದೆ. ಸರ್ಕಾರದ ಯೋಜನೆಗಳಲ್ಲಿ ಬಿಸಿ ಯೂಟ ಕಾರ್ಯಕ್ರಮವು ಪ್ರಮುಖವಾ ಗಿದ್ದು, ಇದನ್ನು ಮಕ್ಕಳು ಸರಿಯಾದ ರೀತಿ ಯಲ್ಲಿ ಉಪಯೋಗಿಸಿಕೊಂಡು ಶಿಕ್ಷಣವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗುವಂತಹ ಯೋಜನೆಗಳನ್ನು ಜಾರಿಗೊಳಿ ಸಿದೆ. ಅದನ್ನು ಯಾವುದೇ ರೀತಿ ಕುಂದುಕೊ ರತೆ ಉಂಟಾಗದೇ ಅಧಿಕಾರಿಗಳು ನೋಡಿ ಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಉತ್ತಮವಾದ ಪೌಷ್ಟಿಕ ಆಹಾರವನ್ನು ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರವೀಶ್, ಗ್ರಾಪಂ ಉಪಾಧ್ಯಕ್ಷ ಕುಮಾರ್, ಸದಸ್ಯರಾದ ತಾಯಮ್ಮ, ಜಯಮ್ಮ, ಡಿಡಿಪಿಐ ಮಂಜುಳ, ಬಿಇಒ ಲಕ್ಷ್ಮಿಪತಿ, ಅಕ್ಷರ ದಾಸೋಹ ಅಧಿಕಾರಿ ಉದಯ್ ಕುಮಾರ್, ಸೋಮಣ್ಣೇಗೌಡ, ಎಸ್‍ಡಿ ಎಂಸಿ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಗುರುರಾಜ ಚಾರ್, ಮುಖಂಡರಾದ ಮಾದಪ್ಪ, ಜಯಶಂಕರ್, ಶಾಂತರಾಜ್, ಸುಗಂಧರಾಜ್, ರಾಮಸ್ವಾಮಿ, ಮಲ್ಲೇಶ್, ಕಮರವಾಡಿ ಮಹದೇವಸ್ವಾಮಿ, ಟಿ.ಕೆ.ರಂಗಯ್ಯ, ವೆಂಕಟೇಶ್, ಲೋಕೇಶ್, ಸಿಆರ್‍ಪಿ ಚಂದ್ರು, ಶಿಕ್ಷಕರು ಇದ್ದರು.

Translate »