ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ
ಚಾಮರಾಜನಗರ

ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ

June 26, 2018

ಸಂತೇಮರಹಳ್ಳಿ: ‘ರೈತರು ರಾಸಾ ಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಸದಾಶಿವ ಮೂರ್ತಿ ಸಲಹೆ ನೀಡಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ನಡೆದ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶ ದಿಂದ ಸರ್ಕಾರ ಫಸಲ ಭೀಮ ಯೋಜನೆ ಜಾರಿಗೊಳಿಸಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಬೆಳೆಗಳಿಗೆ ಅನುಗುಣವಾಗಿ ರೈತರ ಖಾತೆಗಳಿಗೆ ವಿಮಾ ಹಣ ಜಮಾ ಮಾಡಲಾಗಿದೆ. ರೈತರಿಗಾಗಿ ಹಲವು ಜನಪರ ಯೋಜನೆಗಳನ್ನು ಸರ್ಕಾರ ಜಾರಿ ಗೊಳಿಸಿದೆ ಎಂದು ತಿಳಿಸಿದರು.

ಕಬ್ಬು ಬೆಳೆಗಾರರ ಜಿಲ್ಲಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದಂತಹ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯು ತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದು, ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಕೋರಿದರು.

ಕೇಂದ್ರ ಸರ್ಕಾರ ಈಗಾಗಲೇ ಉತ್ಪಾದನಾ ಘಟಕಗಳಿಗೆ 10ಕೋಟಿ ರೂ ಅನುದಾನ ನೀಡಿದ್ದಾರೆ. ಇದರಲ್ಲಿ ಯಾವುದೇ ತೆರಿಗೆ ವಿಧಿಸಿಲ್ಲ. ರಾಜ್ಯದಲ್ಲಿ 43 ಬೆಳೆಗಳ ಪೈಕಿ ಕೇವಲ 23 ಬೆಳೆಗಳಿಗೆ ಮಾತ್ರ ವಿಮಾ ಕಾಯ್ದೆ ಜಾರಿಯಲ್ಲಿದೆ. ಹಾಗಾಗಿ, ರೈತರು ಬೆಳೆ ವಿಮೆ ಇರುವ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ವ್ಯವಸಾಯ ಮಾಡ ಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಜೆ.ಯೋಗೆಶ್, ತಾಪಂ ಸದಸ್ಯರಾದ ಎಚ್.ವಿ. ಚಂದ್ರು, ರವೀಶ್, ನಿವೃತ್ತ ವಿಜ್ಞಾನಿ ಅರಸು, ಮುಖಂಡರಾದ ಮಲ್ಲಯ್ಯ, ಹೊನ್ನೂರು ಪ್ರಕಾಶ್, ಟಿ.ಎಸ್.ಕುಮಾರ್, ಮಲ್ಲೇಶಪ್ಪ, ಶಂಕರ್, ಟಿ.ಕೆ.ರಂಗಯ್ಯ, ಕೃಷಿ ಅಧಿಕಾರಿ ಗಳಾದ ಸುಂದ್ರಮ್ಮ, ಎ.ಸಿ.ಶೇಖರ್, ಗುರುಸ್ವಾಮಿ, ಕೃಷ್ಣ ಹಾಜರಿದ್ದರು.

Translate »