ಕೃಷ್ಣರಾಜ ಅಣೆಕಟ್ಟೆಯಿಂದ ಎಡ, ಬಲದಂಡೆ ನಾಲೆಗೆ ನೀರು
ಹಾಸನ

ಕೃಷ್ಣರಾಜ ಅಣೆಕಟ್ಟೆಯಿಂದ ಎಡ, ಬಲದಂಡೆ ನಾಲೆಗೆ ನೀರು

June 26, 2018

ರಾಮನಾಥಪುರ: ಕಟ್ಟೆಪುರ ಕೃಷ್ಣರಾಜ ಅಣೆಕಟ್ಟೆಯ ಎಡ ಹಾಗೂ ಬಲದಂಡೆ ನಾಲೆಗಳಿಗೆ ಶೀರ್ಘವೇ ನೀರು ಹರಿಸಿ ಈ ಕೊಣನೂರು, ರಾಮನಾಥ ಪುರ ಭಾಗದ ನೂರಾರು ಕೆರೆ-ಕಟ್ಟೆಗಳಿಗೆ ತುಂಬಿಸಿ, ವ್ಯವಸಾಯಕ್ಕೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಶಾಸಕ ಡಾ. ಎ.ಟಿ. ರಾಮಸ್ವಾಮಿ ಭರವಸೆ ನೀಡಿದರು.

ರಾಮನಾಥಪುರ ಹೋಬಳಿ ಶಿರದನಹಳ್ಳಿಯಲ್ಲಿ ಗ್ರಾಮದ ಸಮಸ್ಯೆಗಳ ಕುರಿತು ಕಾರ್ಯಕರ್ತರರೊಂದಿಗೆ ಚರ್ಚಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು. ಜಿಲ್ಲೆಗೆ 10 ವರ್ಷಗಳ ಕಾಲ ಬರ ಆವರಿಸಿತ್ತು. ಆದರೆ ಈ ಬಾರಿ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ಮತ್ತು ಹೇಮಾವತಿ ನೀರಿನ ಮಟ್ಟ ಏರುತ್ತಿದೆ. ಜೂನ್ ತಿಂಗಳಲ್ಲೇ ಹೇಮಾವತಿ ಜಲಾಶಯದ ಬಲದಂಡೆ ಬೋರಣ್ಣಗೌಡ ನಾಲೆಗೆ ನೀರು ಬಿಟ್ಟಿದ್ದು, ಕಟ್ಟೇಪುರ ನಾಲೆಗಳಿಗೆ ಶ್ರೀಘವೇ ಸಂಬಂಧಮಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ನೀರು ಹರಿಸಲಾಗು ವುದು ಎಂದು ಹೇಳಿದರು. ಇದೇ ವೇಳೆ ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ರವಿಕುಮಾರ್, ತಾಪಂ ಸದಸ್ಯ ಬಿ.ಸಿ.ವೀರೇಶ್, ತಾಪಂ ಮಾಜಿ ಅಧ್ಯಕ್ಷ ಬಸವಪಟ್ಟಣ ಬಿ.ಆರ್.ಮಧುಕರ್, ಮಾಜಿ ಸದಸ್ಯ ರತ್ನಕುಮಾರಸ್ವಾಮಿ, ಮಾಜಿ ಸದಸ್ಯ ಗಂಗೂರು ಸಂಜೀವೇಗೌಡ, ವಕೀಲ ಬಸವಪಟ್ಟಣ ಪ್ರಸಾಂತ್, ಗ್ರಾಪಂ ಮಾಜಿ ಸದಸ್ಯ ಶಿರದನಹಳ್ಳಿ ತಿಪ್ಪೇಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜೆ.ಬಸವಪಟ್ಟಣ ಜೆ.ನಾಗರಾಜು ಮುಂತಾದವರಿದ್ದರು.

Translate »