ಗುಲಾಂನಬಿ ಆಜಾದ್ ವಿರುದ್ಧ ಬಿಜೆಪಿ ಪ್ರತಿಭಟನೆ
ಚಾಮರಾಜನಗರ

ಗುಲಾಂನಬಿ ಆಜಾದ್ ವಿರುದ್ಧ ಬಿಜೆಪಿ ಪ್ರತಿಭಟನೆ

June 26, 2018

ಚಾಮರಾಜನಗರ:  ಕಾಂಗ್ರೆಸ್ ಹಿರಿಯ ನಾಯಕ ಗುಲಾಂನಬಿ ಆಜಾದ್ ಅವರು ಸೈನಿಕರ ವಿರುದ್ಧ ಅವ ಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಸೋಮವಾರ ಬಿಜೆಪಿಯ ಚಾಮರಾಜನಗರ ವಿಧಾನ ಸಭಾ ಘಟಕದಿಂದ ಪ್ರತಿಭಟನೆ ನಡೆಯಿತು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಭುವನೇಶ್ವರಿ ವೃತ್ತದವ ರೆಗೆ ಮೆರವಣಿಗೆ ನಡೆಸಿ ಗುಲಾಂ ನಬಿ ಆಜಾದ್ ವಿರುದ್ಧ ಘೋಷಣೆ ಕೂಗಿದರು.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹಕ್ಕೆ ಅಲ್ಲಿನ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಆಪ ರೇಷನ್ ಆಲೌಟ್ ಕಾರ್ಯಾಚರಣೆ ನಡೆ ಸಲು ಸೂಚನೆ ನೀಡಿದೆ. ಇದನ್ನು ಇಡೀ ದೇಶವೇ ಸ್ವಾಗತಿಸಿದೆ. ಆದರೆ, ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಭಾರತೀಯ ಸೈನಿಕರ ವಿರುದ್ಧ ಆರೋಪ ಮಾಡುವ ಮೂಲಕ ಸೈನಿಕರ ಆತ್ಮ ಸ್ಥೈರ್ಯ ಕುಂದಿಸಲು ಪ್ರಯತ್ನ ಮಾಡು ತ್ತಿದ್ದಾರೆ ಎಂದು ದೂರಿದರು.

ಸೈನಿಕ ಔರಂಗಜೇಬ್ ಹತ್ಯೆಯಾದಾಗ, ಸೈನಿಕರ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟವಾದಾಗ ಯಾವುದೇ ಹೇಳಿಕೆಗಳನ್ನು ನೀಡದೆ ಆತ್ಮ ಸಂತೋಷ ಪಟ್ಟಿಕೊಂಡಿದ್ದ ಗುಲಾಂ ನಬಿ ಆಜಾದ್ ಅವರು ಭಯೋ ತ್ಪಾದಕರ ವಿರುದ್ಧ ಕ್ರಮ ಕೈಗೊಂಡಾಗ ಪಾಕಿ ಸ್ತಾನದ ಮೂಲಭೂತವಾಸಿ ಸಂಘಟನೆ ಗಳ ಗೌರವಾಧ್ಯಕ್ಷರ ರೀತಿಯಲ್ಲಿ ವರ್ತಿಸು ತ್ತಿರುವುದು ದೇಶದಲ್ಲಿ ಕಾಂಗ್ರೆಸ್‍ನ ಬದ್ಧತೆ ಯನ್ನು ತೋರಿಸುತ್ತಿದೆ ಎಂದು ಟೀಕಿಸಿದರು.

ಅಬ್ಜಲ್ ಗುರು, ಕಸಬ್ ಅವರಂತ ಭಯೋ ತ್ಪಾದಕರಿಗೆ ಶಿಕ್ಷೆಯಾದಾಗ ಅವರ ಪರ ನಿಲ್ಲುವ ಗುಲಾಂನಬಿ ಆಜಾದ್ ಹಾಗೂ ಕಾಂಗ್ರೆಸ್ ನಾಯಕರು, ಸೈನಿಕ ಔರಂಗ ಜೇಬ್ ಅಪಹರಣವಾಗಿ ಹತ್ಯೆಯಾದರೂ ಸೌಜನ್ಯಕ್ಕಾದರೂ ಅವರ ಪರವಾಗಿ ಒಂದು ಹೇಳಿಕೆಯನ್ನು ನೀಡಲಿಲ್ಲ. ಈ ರೀತಿಯ ವರ್ತನೆ ದೇಶದ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೈನಿಕರ ವಿರುದ್ಧ ಹೇಳಿಕೆ ನೀಡಿರುವ ಗುಲಾಂನಬಿ ಆಜಾದ್ ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾ ಯಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರೊಂದು ಶೆಟ್ಟಿ, ನಾಗೇಂದ್ರಸ್ವಾಮಿ, ಪುಟ್ಟರಸು, ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಎಂ.ಬಸವಣ್ಣ, ಜಿಲ್ಲಾ ಉಪಾಧ್ಯಕ್ಷೆ ಮಂಗಳಮ್ಮ, ಶಕ್ತಿ ಕೇಂದ್ರದ ಅಧ್ಯಕ್ಷ ಕೂಸಣ್ಣ, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ರಾಜೇಶ್, ಶಿವಸ್ವಾಮಿ, ಉಪೇಂದ್ರ ಕುಮಾರ್, ದ್ರಾಕ್ಷಾಯಿಣ , ಮಹದೇವಪ್ಪ, ಪುರು ಷೋತ್ತಮ್, ಸುಂದರ್‍ರಾಜ್, ಪಂಚಾ ಕ್ಷರಿ, ರಾಜೇಂದ್ರ ಇತರರು ಪಾಲ್ಗೊಂಡಿದ್ದರು.

Translate »