171 ಕೋಟಿ ರೂ. ವೆಚ್ಚದಲ್ಲಿ ಹಿಮ್ಸ್ ಮೇಲ್ದರ್ಜೆಗೆ
ಹಾಸನ

171 ಕೋಟಿ ರೂ. ವೆಚ್ಚದಲ್ಲಿ ಹಿಮ್ಸ್ ಮೇಲ್ದರ್ಜೆಗೆ

June 26, 2018

ಹಾಸನ: ಹಾಸನಾಂಬ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆ ಮೇಲ್ದರ್ಜೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ 171 ಕೋಟಿ ರೂ.ಗಳ ಹೊಸ ಯೋಜನೆ ರೂಪಿಸಿದ್ದು, ಶೀಘ್ರವೇ ಅನುಮೋದನೆ ಪಡೆದು ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತು ವಾರಿಯೂ ಆದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸ್ಥಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಹಿಮ್ಸ್ ನಿರ್ದೇಶಕ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

7 ಅಂತಸ್ತಿನ ಯೋಜನೆ: ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು 7 ಅಂತಸ್ತಿಗೆ ಏರಿಸುವ ಯೋಜನೆ ಗೆ 135 ಕೋಟಿ ರೂ., ವೈದ್ಯಕೀಯ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡಗಳಿಗೆ 24 ಕೋಟಿ ಮತ್ತು ನರ್ಸ್‍ಗಳ ವಸತಿ ನಿಲಯ ನಿರ್ಮಾಣಕ್ಕೆ 12 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಿ ಅನುಷ್ಠಾನ ಗೊಳಿಸಲಾಗುವುದು ಎಂದು ಹೇಳಿದರು.

ಬೋಧಕ-ಬೋಧಕೇತರ ಹುದ್ದೆ ಭರ್ತಿ: ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯ ಒದಗಿಸಲಾಗುವುದು. ಕೊರತೆ ಇರುವ ಬೋಧಕ-ಬೋಧಕೇತರ ಹುದ್ದೆ ಭರ್ತಿ ಮಾಡಲಾಗುವುದು ಎಂದ ಸಚಿವರು, ಸುಳ್ಳು ನೆಪ ಹೇಳಿ ಸೂಕ್ತ ಚಿಕಿತ್ಸೆ ನೀಡದೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುವು ದನ್ನು ತಾವು ಸಹಿಸುವುದಿಲ್ಲ ಎಂದು ರೇವಣ್ಣ ಎಚ್ಚರಿಸಿದರು.

ಮುಖ್ಯಮಂತ್ರಿಯಲ್ಲಿ ಮನವಿ: ನಗರದ ಜಿಲ್ಲಾಸ್ಪತ್ರೆಯನ್ನು ರಾಜ್ಯಕ್ಕೆ ಮಾದರಿಯಾ ಗಿಸುವುದು ತಮ್ಮ ಬಯಕೆ. ಇದಕ್ಕೆ ಹಿಮ್ಸ್ ನಿರ್ದೇಶಕರು, ವೈದ್ಯಾಧಿಕಾರಿಗಳ ಸಹಕಾರ ಅಗತ್ಯ. ಸಾರ್ವಜನಿಕರು ಸಹ ಖಾಸಗಿ ಆಸ್ಪತ್ರೆಗೆ ತೆರಳದೆ ಅತ್ಯುತ್ತಮ ಸೌಲಭ್ಯ ಗಳಿರುವ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ಜಿಲ್ಲಾಸ್ಪತ್ರೆ ಮೇಲ್ದರ್ಜೆ ಗೇರಿಸುವ ಕುರಿ ತಂತೆ ಈಗಾಗಲೇ ಬೆಂಗಳೂರಿನಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದು, ಸಿಎಂ ಬಳಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಪ್ರತ್ಯೇಕ ಪಿಜಿ ಹಾಸ್ಟೆಲ್: ವೈದ್ಯಕೀಯ ಪಿಜಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುವುದು. ನರ್ಸ್‍ಗಳ ವಸತಿ ನಿಲಯವನ್ನು 48ಕ್ಕೆ ವಿಸ್ತರಿಸಲಾಗು ವುದು ಎಂದು ಯೋಜನೆ ವಿವರಿಸಿದ ಸಚಿವರು, `108’ ಆಂಬುಲೆನ್ಸ್‍ಗಳು ಖಾಸಗಿ ಆಸ್ಪತ್ರೆಗಳ ಪರ ಕೆಲಸ ಮಾಡಿದರೆ ಗಮನಕ್ಕೆ ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದರು.

ಲ್ಯಾಬ್ ವ್ಯವಸ್ಥೆಗೆ ಅನುದಾನ: ನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಲ್ಯಾಬ್ ವ್ಯವಸ್ಥೆಗೆ ಅನುದಾನ ಒದಗಿಸ ಲಾಗುವುದು. ಏರ್‍ಪೋರ್ಟ್‍ಗೆ ಅಗತ್ಯ ಭೂಮಿ ಒದಗಿಸುವ ಸಂಬಂಧ ಕಾರ್ಯ ಗಳನ್ನು ಚುರುಕುಗೊಳಿಸುದಲ್ಲದೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭದ ಬಗ್ಗೆಯೂ ಪ್ರಯತ್ನ ಮುಂದುವರೆಸಲಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಸುಸಜ್ಜಿತ ಹೆರಿಗೆ ಹಾಗೂ ನವಜಾತ ಶಿಶುಗಳ ವಾರ್ಡ್ ಘಟಕ ಸ್ಥಾಪಿಸುವ ಚಿಂತನೆ ಕೂಡ ಇದೆ ಎಂದು ಸಚಿವರು, ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹಿಮ್ಸ್ ನಿರ್ದೇಶಕ ಡಾ.ರವಿ ಕುಮಾರ್, ಆಡಳಿತಾಧಿಕಾರಿ ಚಿದಾನಂದ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್ ಮತ್ತಿತರರಿದ್ದರು.

Translate »