ಚಾಮರಾಜನಗರ

ಮೋದಿಯನ್ನು ವಿಶ್ವವೇ ಒಪ್ಪುತ್ತದೆ… ಸಿದ್ದರಾಮಯ್ಯ, ಪಾಕಿಸ್ತಾನ ಒಪ್ಪುವುದಿಲ್ಲ
ಚಾಮರಾಜನಗರ

ಮೋದಿಯನ್ನು ವಿಶ್ವವೇ ಒಪ್ಪುತ್ತದೆ… ಸಿದ್ದರಾಮಯ್ಯ, ಪಾಕಿಸ್ತಾನ ಒಪ್ಪುವುದಿಲ್ಲ

August 10, 2018

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಒಪ್ಪುತ್ತದೆ. ಆದರೆ ಸಿದ್ದರಾಮಯ್ಯ ಮತ್ತು ಪಾಕಿಸ್ತಾನ ಮಾತ್ರ ಒಪ್ಪುವುದಿಲ್ಲ. ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರು, ದೇಶದ ರಕ್ಷಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪಾಕಿಸ್ತಾನದ ಗೂಂಡಾವರ್ತನೆಗೆ ಸರಿಯಾದ ರೀತಿಯಲ್ಲಿಯೇ ಉತ್ತರ ಕೊಡುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಸೈನಿಕನಿಗೂ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇಂದು ಭಾರತದ ಗೌರವವನ್ನು ಪ್ರಪಂಚಕ್ಕೆ ಕೊಂಡೊಯ್ದಿದ್ದಾರೆ. ಇಡೀ ವಿಶ್ವವೇ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

‘ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡನ ಕೂಡಾವಳಿಯಂತೆ ಸರ್ಕಾರ’
ಚಾಮರಾಜನಗರ

‘ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡನ ಕೂಡಾವಳಿಯಂತೆ ಸರ್ಕಾರ’

August 10, 2018

ಚಾಮರಾಜನಗರ: ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡ ಕೂಡಾವಳಿ ಮಾಡಿಕೊಂಡು ಜೀವನ ನಡೆಸುವಂತೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಕೂಡಾವಳಿ ಮಾಡಿಕೊಂಡಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದ ನಂದಿ ಭವನದಲ್ಲಿ ಗುರುವಾರ ನಡೆದ ಪಕ್ಷದ ಶಕ್ತಿ ಕೇಂದ್ರದ ಮೇಲ್ಪಟ್ಟ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಂಡತಿ ಸತ್ತ ಗಂಡ, ಗಂಡ ಸತ್ತ ಹೆಂಡತಿ ಕೂಡಿಕೊಂಡು ಜೀವನ ನಡೆಸುವಂತೆ ಜೆಡಿಎಸ್-ಕಾಂಗ್ರೆಸ್ ಕೂಡಿಕೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಈ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ರಾಜ್ಯದ…

ಜಿಲ್ಲಾಸ್ಪತ್ರೆಗೆ ಎಂಸಿಐ ಅಧಿಕಾರಿಗಳ ತಂಡ ಭೇಟಿ
ಚಾಮರಾಜನಗರ

ಜಿಲ್ಲಾಸ್ಪತ್ರೆಗೆ ಎಂಸಿಐ ಅಧಿಕಾರಿಗಳ ತಂಡ ಭೇಟಿ

August 10, 2018

ಚಾಮರಾಜನಗರ: ನಗರದ ಮೆಡಿಕಲ್ ಕಾಲೇಜಿಗೆ ಮುಂದಿನ ವರ್ಷದ ಪ್ರವೇಶಾತಿಗೆ ಅನುಮತಿ ನೀಡುವ ಹಿನ್ನಲೆಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ದ ಮೂರು ಜನರ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗುರುವಾರ ಪರಿಶೀಲಿಸಿತು. ದೆಹಲಿಯಿಂದ ಆಗಮಿಸಿದ್ದ ಎಂಸಿಐ ಮೂವರು ಅಧಿಕಾರಿಗಳ ತಂಡ, ಜಿಲ್ಲಾ ಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಐಸಿಯು, ವಾರ್ಡ್‍ಗಳು ಹಾಗೂ ಆಸ್ಪತ್ರೆಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ನಂತರ ಯಡಬೆಟ್ಟದ ತಪ್ಪಲಿನಲ್ಲಿ ಇರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು….

ನಾಳೆಯಿಂದ ಚಾ.ನಗರ, ಕೊಳ್ಳೇಗಾಲ ನಗರಸಭೆಗೆ ನಾಮಪತ್ರ ಸಲ್ಲಿಕೆ ಆರಂಭ
ಚಾಮರಾಜನಗರ

ನಾಳೆಯಿಂದ ಚಾ.ನಗರ, ಕೊಳ್ಳೇಗಾಲ ನಗರಸಭೆಗೆ ನಾಮಪತ್ರ ಸಲ್ಲಿಕೆ ಆರಂಭ

August 9, 2018

ಚಾಮರಾಜನಗರ:  ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆಗೆ ದಿನಾಂಕ ನಿಗದಿ ಆಗುತ್ತಿದ್ದಂತೆಯೇ ಸ್ಥಳೀಯ ರಾಜಕೀಯ ಚುರುಕುಗೊಂಡಿದೆ. ನಾಮಪತ್ರ ಸಲ್ಲಿಕೆ ಆ.10ರಿಂ ಆರಂಭವಾಗಲಿದ್ದು, ನಂತರ ಸ್ಥಳೀಯ ರಾಜಕೀಯ ಮತ್ತಷ್ಟು ಚುರುಕುಗೊಳ್ಳಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆ ದಾರರು ಹಾಗೂ ಲೇವಾದೇವಿದಾರರು ಅಭ್ಯರ್ಥಿಗಳಾಗಲು ಉತ್ಸಾಹ ತೋರಿದ್ದಾರೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಒಂದೊಂದು ವಾರ್ಡ್‍ಗೆ ಮೂರು-ನಾಲ್ಕು ಮಂದಿ ಆಕಾಂಕ್ಷಿಗಳು ಇರುವುದು ಆ ಪಕ್ಷದ ವರಿಷ್ಠರಿಗೆ ತಲೆ ಬಿಸಿ ತರಿಸಿದೆ. ಕೊಳ್ಳೇಗಾಲದಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ…

ಹರವೆಯಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಣೆ
ಚಾಮರಾಜನಗರ

ಹರವೆಯಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಣೆ

August 9, 2018

ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದಲ್ಲಿ ಮಂಗಳವಾರ 26ನೇ ಜಾಗತಿಕ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಯಿತು. ಚಾಮರಾಜನಗರ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಹರವೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸಪ್ತಾಹವನ್ನು ಆಚ ರಿಸಲಾಯಿತು. ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ತಾಯಿಯ ಎದೆ ಹಾಲಿನ ಮಹತ್ವವನ್ನು ತಿಳಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. 53 ಮಂದಿ…

ದಂಟಳ್ಳಿ ಬಳಿ ಕಡವೆ ಮಾಂಸ ವಶ
ಚಾಮರಾಜನಗರ

ದಂಟಳ್ಳಿ ಬಳಿ ಕಡವೆ ಮಾಂಸ ವಶ

August 9, 2018

ಹನೂರು:  ಕಡವೆಯನ್ನು ಕೊಂದು ಮಾಂಸವನ್ನು ಒಣಗಿ ಸಿಟ್ಟಿರುವ ಘಟನೆ ಕೌದಳ್ಳಿ ವನ್ಯಜೀವಿ ವಲಯದಲ್ಲಿ ನಡೆದಿದೆ. ವಲಯದ ದಂಟಳ್ಳಿ ಶಾಖೆಯಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಮಾಂಸ ಒಣಗಿಸಿಟ್ಟಿರುವುದು ಕಂಡು ಬಂದ ತಕ್ಷಣ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಸುಮಾರು 30 ಕೆ.ಜಿ.ಯಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ಅವರು ಪರಿ ಶೀಲನೆ ನಡೆಸಿದ್ದಾರೆ. ಬೇಟೆಗಾರರು ತಮಿಳುನಾಡಿನ ಮೂಲದವರಾಗಿದ್ದು ನದಿ ದಾಟಿ ಬಂದು ಬೇಟೆಯಾಡಿದ ಮಾಂಸವನ್ನು ಒಣಗಿಸುವ ವೇಳೆ ಗಸ್ತುನಲ್ಲಿದ್ದ ಅರಣ್ಯ ಸಿಬ್ಬಂದಿ…

ಇಂದು ಬಂಡೀಪುರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ಚಾಮರಾಜನಗರ

ಇಂದು ಬಂಡೀಪುರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

August 9, 2018

ಗುಂಡ್ಲುಪೇಟೆ:  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯ ಸಹಯೋದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾ ನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆ.9 (ಗುರುವಾರ) ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾ.ಬಾಬು ತಿಳಿಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಗಸ್ಟ್ 9 ರಂದು ಬೆಳಗ್ಗೆ…

ನೈತಿಕ ಶಿಕ್ಷಣದಿಂದ ಗೌರವ ಇಮ್ಮಡಿ
ಚಾಮರಾಜನಗರ

ನೈತಿಕ ಶಿಕ್ಷಣದಿಂದ ಗೌರವ ಇಮ್ಮಡಿ

August 9, 2018

ಚಾಮರಾಜನಗರ:  ಜ್ಞಾನದ ಜತೆ ನೈತಿಕ ಶಿಕ್ಷಣವನ್ನು ಪಡೆದಾಗ ಸಿಗುವ ಗೌರವ ಇಮ್ಮಡಿಯಾಗಲಿದೆ ಎಂದು ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜಿ.ಶಿವಕುಮಾರ್ ಅಭಿಪ್ರಾಯಪಟ್ಟರು. ನಗರದ ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ನಡೆದ ‘ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಹಮ್ಮಿ ಕೊಂಡಿದ್ದ’ ಸ್ವಾಗತ ಕಾರ್ಯಕ್ರಮ (ಫ್ರೆಶರ್ಸ್ ಡೇ)ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿ, ಅಭ್ಯಾಗತರನ್ನು ಸತ್ಕರಿಸುವ ಸಂಪ್ರದಾಯ ಭಾರತೀಯ ಸಂಸ್ಕøತಿಯಲ್ಲಿ ಶತಶತಮಾನಗಳಿಂದಲೂ ಹಾಸುಹೊಕ್ಕಾಗಿದೆ, ಇದನ್ನು ಪ್ರತಿವರ್ಷ ಕಾಲೇಜಿನಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ, ಶಿಕ್ಷಣ ಎಂದರೆ…

ಗುಂಡ್ಲುಪೇಟೆ-ತಮಿಳುನಾಡು ಗಡಿ ಭಾಗದಲ್ಲಿ ವಾಹನಗಳಿಗೆ ತಡೆ
ಚಾಮರಾಜನಗರ

ಗುಂಡ್ಲುಪೇಟೆ-ತಮಿಳುನಾಡು ಗಡಿ ಭಾಗದಲ್ಲಿ ವಾಹನಗಳಿಗೆ ತಡೆ

August 9, 2018

ಗುಂಡ್ಲುಪೇಟೆ:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಿಂದ ತಮಿಳುನಾಡಿನತ್ತ ತೆರಳುವ ಎಲ್ಲಾ ವಾಹನಗಳನ್ನೂ ಕರ್ನ ಟಕದ ಗಡಿಭಾಗವಾದ ಕೆಕ್ಕನಹಳ್ಳ ಪ್ರದೇಶದಲ್ಲಿ ಸಂಜೆಯವರೆವಿಗೂ ತಡೆ ಹಿಡಿಯಲಾಯಿತು. ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನ ಹಳ್ಳ ಚೆಕ್ ಪೋಸ್ಟ್ ಬಳಿ ಬೆಳಗ್ಗಿನಿಂದಲೇ ಎಲ್ಲಾ ವಾಹನಗಳನ್ನೂ ತಡೆ ಹಿಡಿಯಲಾಯಿತು. ಇದರಿಂದ ಸುಮಾರು ಮೂರು ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳನ್ನು ತಡೆದಿದ್ದರಿಂದ ಈ ಮಾರ್ಗದಲ್ಲಿ ಹೊರಟಿದ್ದ ಪ್ರವಾಸಿಗರು ಆಹಾರಕ್ಕಾಗಿ ಪರದಾಡುವಂತಾಯಿತು. ಸಾರಿಗೆ ಬಸ್ಸುಗಳ…

ಮೈಕೊಡವಿ ಎದ್ದ ಸಂಚಾರಿ ಠಾಣೆ ಪೊಲೀಸರು: ಅಡ್ಡಾದಿಡ್ಡಿ ಬೈಕ್ ನಿಲುಗಡೆಗೆ ಬ್ರೇಕ್, ಫುಟ್‍ಪಾತ್‍ಗಳ ತೆರವು
ಚಾಮರಾಜನಗರ

ಮೈಕೊಡವಿ ಎದ್ದ ಸಂಚಾರಿ ಠಾಣೆ ಪೊಲೀಸರು: ಅಡ್ಡಾದಿಡ್ಡಿ ಬೈಕ್ ನಿಲುಗಡೆಗೆ ಬ್ರೇಕ್, ಫುಟ್‍ಪಾತ್‍ಗಳ ತೆರವು

August 8, 2018

ಚಾಮರಾಜನಗರ:  ಜಿಲ್ಲಾ ಕೇಂದ್ರ ವಾದ ಚಾಮರಾಜನಗರದಲ್ಲಿ ವಾಹನ ಮಾಲೀಕರೇ, ನಿಮ್ಮ ಬೈಕ್-ಮೊಪೆಡನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸಬೇಡಿ, ನಿಲ್ಲಿಸಿದರೆ ನಿಮ್ಮ ವಾಹನ ಪೊಲೀಸರ ವಶವಾಗಲಿದೆ. ಅಂಗಡಿ ಮಾಲೀಕರೇ, ಫುಟ್‍ಪಾತ್ ಮೇಲೆ ಯಾವುದೇ ವಸ್ತುಗಳನ್ನು ಇಡಬೇಡಿ. ಇಟ್ಟರೆ ನಿಮ್ಮ ಪದಾರ್ಥಕ್ಕೆ ದಂಡ ತೆರಬೇಕಾಗುತ್ತದೆ. ತಳ್ಳುವ ಗಾಡಿ ವ್ಯಾಪಾರಿಗಳೇ ಎಲ್ಲೆಂದಲ್ಲಿ ನೀವೂ ಸಹ ನಿಲ್ಲುವಂತಿಲ್ಲ… ಜೋಕೆ….ಜೋಕೆ…. ಚಾಮರಾಜನಗರದಲ್ಲಿ ಕಳೆದ ಒಂದು ವಾರದಿಂದ ಸಂಚಾರ ಠಾಣೆ ಪೊಲೀ ಸರು ಮೈಕೊಡವಿ ಎದ್ದಿದ್ದಾರೆ. ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಜೋಡಿ…

1 94 95 96 97 98 141
Translate »