ನೈತಿಕ ಶಿಕ್ಷಣದಿಂದ ಗೌರವ ಇಮ್ಮಡಿ
ಚಾಮರಾಜನಗರ

ನೈತಿಕ ಶಿಕ್ಷಣದಿಂದ ಗೌರವ ಇಮ್ಮಡಿ

August 9, 2018

ಚಾಮರಾಜನಗರ:  ಜ್ಞಾನದ ಜತೆ ನೈತಿಕ ಶಿಕ್ಷಣವನ್ನು ಪಡೆದಾಗ ಸಿಗುವ ಗೌರವ ಇಮ್ಮಡಿಯಾಗಲಿದೆ ಎಂದು ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜಿ.ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದ ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ನಡೆದ ‘ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಹಮ್ಮಿ ಕೊಂಡಿದ್ದ’ ಸ್ವಾಗತ ಕಾರ್ಯಕ್ರಮ (ಫ್ರೆಶರ್ಸ್ ಡೇ)ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿ, ಅಭ್ಯಾಗತರನ್ನು ಸತ್ಕರಿಸುವ ಸಂಪ್ರದಾಯ ಭಾರತೀಯ ಸಂಸ್ಕøತಿಯಲ್ಲಿ ಶತಶತಮಾನಗಳಿಂದಲೂ ಹಾಸುಹೊಕ್ಕಾಗಿದೆ, ಇದನ್ನು ಪ್ರತಿವರ್ಷ ಕಾಲೇಜಿನಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ, ಶಿಕ್ಷಣ ಎಂದರೆ ಅದು ಜ್ಞಾನಾರ್ಜನೆಗೆ ಮಾತ್ರ ಸೀಮಿತವಲ್ಲ. ಅದು ನಮ್ಮ ಜೀವನ ರೂಪಿಸುವ ನೈತಿಕ ಶಿಕ್ಷಣವಾಗಬೇಕು, ಇದನ್ನೇ ಮಾಜಿ ರಾಷ್ಟ್ರಪತಿ ದಿ.ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಕನಸು ಕಾಣುವುದಾದರೆ ದೊಡ್ಡದೊಡ್ಡ ಕನಸು ಕಾಣಬೇಕು ಎಂಬ ನೀತಿ ಪಾಠವನ್ನು ಅವರು ಭಾಗವಹಿಸಿದ ಸಭೆ, ಸಮಾರಂಭಗಳಲ್ಲಿ ಹೇಳುತ್ತಿದ್ದರು, ವಿದ್ಯಾರ್ಥಿಗಳು ಅವರ ಹಾದಿಯಲ್ಲೇ ನಡೆಯಬೇಕು, ಆರಂಭದ ಶಿಕ್ಷಣದಲ್ಲೇ ದೊಡ್ಡದಾದ ಗುರಿಯಿಟ್ಟು ಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೆಎಸ್‍ಎಸ್ ಶಿಕ್ಷಣ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಮಾತನಾಡಿ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಗುರುವಿಗೆ ವಿಧೇಯರಾಗಿ ನಡೆಯುವುದು ವಿದ್ಯಾರ್ಥಿನಿ ಯರ ಆದ್ಯ ಕರ್ತವ್ಯವಾಗಬೇಕು, ಸುಂದರವಾದ ಉಡುಪು ನಿಮ್ಮ ವ್ಯಕ್ತಿತ್ವ ರೂಪಿಸಿದರೆ, ಸುಂದರವಾದ ಗುಣ ನಿಮ್ಮ ಬದುಕನ್ನೇ ಸುಂದರವಾಗಿಸುತ್ತದೆ, ಹೊಸದಾಗಿ ಕಾಲೇಜಿಗೆ ದಾಖಲಾಗಿರುವ ವಿದ್ಯಾರ್ಥಿನಿಯರು, ಹಿರಿಯ ವಿದ್ಯಾರ್ಥಿ ನಿಯರ ಸಹಕಾರ ಪಡೆಯುವುದನ್ನು ಮರೆಯಬೇಡಿ ಎಂದರು.

ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಮಹಾಲಿಂಗಪ್ಪ ಮಾತನಾಡಿದರು.

ವಾಣಿಜ್ಯ ವಿಭಾಗದ ಪ್ರಥಮ ಪಿಯು ವಿದ್ಯಾರ್ಥಿನಿಯರನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಗುಲಾಬಿ ಹೂ ನೀಡುವುದರ ಮೂಲಕ ಆತ್ಮೀಯವಾಗಿ ಸ್ವಾಗತಿ ಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುಧಾ ಸೇರಿದಂತೆ ಇತರೇ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಜರಿದ್ದರು.

Translate »