ಹಾಸನ

ಜಿಲ್ಲೆಗೆ ಹೊಸ ತೋಟಗಾರಿಕಾ ಕಾಲೇಜು ಲೋಕೋಪಯೋಗಿ ಸಚಿವ ರೇವಣ್ಣ ಭರವಸೆ
ಹಾಸನ

ಜಿಲ್ಲೆಗೆ ಹೊಸ ತೋಟಗಾರಿಕಾ ಕಾಲೇಜು ಲೋಕೋಪಯೋಗಿ ಸಚಿವ ರೇವಣ್ಣ ಭರವಸೆ

June 16, 2018

ಹಾಸನ: ಜಿಲ್ಲೆಯಲ್ಲಿ ಹೊಸ ದಾಗಿ ತೋಟಗಾರಿಕಾ ಕಾಲೇಜು ಹಾಗೂ ಸೋಮನಹಳ್ಳಿ ಕಾವಲ್‍ನ ಆಲೂಗೆಡ್ಡೆ ಸಂಶೋಧನಾ ಕೇಂದ್ರದಲ್ಲಿ ಚಿಪ್ಸ್ ತಯಾ ರಿಕಾ ಘಟಕ ಪ್ರಾರಂಭಿಸಲು ನಿರ್ಧರಿಸಿದ್ದು, ಶೀಘ್ರದಲ್ಲಿ ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಇಲಾಖಾವಾರು ಅಧಿ ಕಾರಿಗಳ ಸಭೆ ನಡೆಸಿದ ಅವರು, ಹತ್ತು ಹಲವು ಹೊಸ ಉದ್ದೇಶಿತ ಅಭಿವೃದ್ಧಿ ಯೋಜನೆಗಳನ್ನು ಸಭೆ ಮುಂದಿಟ್ಟರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ತಮ್ಮ ಆದ್ಯತೆಯಾಗಿದ್ದು, ಎಲ್ಲಾ ಅಧಿಕಾರಿಗಳು ಇದಕ್ಕೆ…

ಖದೀಮನ ಬಂಧನ; 18ಲಕ್ಷ ರೂ.ಮೌಲ್ಯದ ವಾಹನ ವಶ
ಹಾಸನ

ಖದೀಮನ ಬಂಧನ; 18ಲಕ್ಷ ರೂ.ಮೌಲ್ಯದ ವಾಹನ ವಶ

June 16, 2018

ಅರಸೀಕೆರೆ: ದ್ವಿಚಕ್ರ ಸೇರಿ ದಂತೆ ವಿವಿಧ ವಾಹನಗಳ ಖದೀಮನನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, 18 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ಅಧೀಕ್ಷ ನಾರಾಯಣ ತಿಳಿಸಿದರು. ಟಿಪ್ಪುಸುಲ್ತಾನ್ ಎಂಬಾತ ಬಂಧಿತ ಆರೋಪಿ. ನಗರದ ಪೊಲೀಸ್ ಠಾಣೆ ಆವರಣದಲ್ಲಿ ಕಳುವಾಗಿದ್ದ ವಾಹನಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷ ನಾರಾಯಣ ಅವರು, ಶಿವಮೊಗ್ಗ ನಗರ ವ್ಯಾಪ್ತಿಯ 21 ಪ್ರಕರಣಗಳು ಸಂಬಂಧಿಸಿದಂತೆ ಕಳುವಾಗಿದ್ದ ಒಟ್ಟು ರೂ, 6,50,00 ಮೌಲ್ಯದ…

ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಹಾಸನ

ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

June 16, 2018

ಬೇಲೂರು: ಬಾಗಿನ ಅರ್ಪಿಸಲು ಹೋಗಿ ಕೆರೆಯಲ್ಲಿ ಮುಳುಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮದಲ್ಲಿ ನಡೆದಿದೆ. ರಂಗಶೆಟ್ಟಿ(46) ಮೃತರು. ಗ್ರಾಮದ ದೊಡ್ಡಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಹೋಗಿದ್ದ ರಂಗಶೆಟ್ಟಿ ನೀರುಪಾಲಾಗಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಿಪಿಐ ಯೋಗೇಶ್ ಆಗಮಿಸಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಕ್ಕಾಗಿ ಶೋಧ ಕಾರ್ಯಾದಲ್ಲಿ ತೊಡಗಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಲೇರೋ ಪಿಕ್‍ಅಪ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಹಾಸನ

ಬೊಲೇರೋ ಪಿಕ್‍ಅಪ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

June 16, 2018

ಬೇಲೂರು: ಬಾಗಿನ ಅರ್ಪಿಸಲು ಹೋಗಿ ಕೆರೆಯಲ್ಲಿ ಮುಳುಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮದಲ್ಲಿ ನಡೆದಿದೆ. ರಂಗಶೆಟ್ಟಿ(46) ಮೃತರು. ಗ್ರಾಮದ ದೊಡ್ಡಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಹೋಗಿದ್ದ ರಂಗಶೆಟ್ಟಿ ನೀರುಪಾಲಾಗಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಿಪಿಐ ಯೋಗೇಶ್ ಆಗಮಿಸಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಕ್ಕಾಗಿ ಶೋಧ ಕಾರ್ಯಾದಲ್ಲಿ ತೊಡಗಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಗದಿತ ಅವಧಿಯೊಳಗೆ ಪಿಂಚಣ ಸೌಲಭ್ಯ ಒದಗಿಸಿ
ಹಾಸನ

ನಿಗದಿತ ಅವಧಿಯೊಳಗೆ ಪಿಂಚಣ ಸೌಲಭ್ಯ ಒದಗಿಸಿ

June 15, 2018

ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್‍ಗಳಿಗೆ ಸಚಿವ ಹೆಚ್.ಡಿ.ರೇವಣ್ಣ ಸೂಚನೆ ಹಾಸನ: ‘ಮುಂದಿನ ಎರಡು ತಿಂಗಳೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲ ಸಾಮಾಜಿಕ ಭದ್ರತಾ ಪಿಂಚಣ ಗಳು ಬಿಪಿಎಲ್ ಕಾರ್ಡ್‍ಗಳ ವಿತರಣೆ ಪೂರ್ಣ ಗೊಳಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ ರಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರತಿ ಗ್ರಾಮವಾರು ವೃದ್ಯಾಪ್ಯ ವೇತನ, ವಿಧವಾ ವೇತನ,…

ರಕ್ತದಾನ ಮಾಡುವುದರಿಂದ ಯಾವ ದುಷ್ಪರಿಣಾಮವಿಲ್ಲ
ಹಾಸನ

ರಕ್ತದಾನ ಮಾಡುವುದರಿಂದ ಯಾವ ದುಷ್ಪರಿಣಾಮವಿಲ್ಲ

June 15, 2018

ಹಾಸನ:  ರಕ್ತದಾನ ಮಾಡುವು ದರಿಂದ ಯಾವುದೇ ದುಷ್ಪರಿಣಾಮ ಆಗು ವುದಿಲ್ಲ. ಹಲವು ಜನರಿಗೆ ರಕ್ತದಾನದ ಬಗ್ಗೆ ತಿಳುವಳಿಕೆ ಇಲ್ಲದೆ ತಪ್ಪು ಕಲ್ಪನೆ ಹೊಂದಿ ದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಹೇಳಿದರು. ನಗರದ ಆದಿಚುಂಚನಗಿರಿ ಮಹಿಳಾ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಗುರುವಾರ ಸ್ವಯಂ ಪ್ರೇರಿತ ರಕ್ತ ದಾನಿಗಳ ಬಳಗ ಮತ್ತು ಹಾಸನ ರಕ್ತ ನಿಧಿ ಘಟಕದಿಂದ ನಡೆದ ರಕ್ತದಾನ ಶಿಬಿರ ದಲ್ಲಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ದಾನ ದಾನಕಿಂತ ಶ್ರೇಷ್ಠ ವಾದ…

ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಹಾಸನಕ್ಕೆ ವಿಸ್ತರಣೆ
ಹಾಸನ

ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಹಾಸನಕ್ಕೆ ವಿಸ್ತರಣೆ

June 15, 2018

ಶ್ರವಣಬೆಳಗೊಳ: ಸೊಲ್ಲಾಪುರದಿಂದ ಯಶವಂತಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಸಂಚರವನ್ನು ಹಾಸನದವರೆಗೆ ವಿಸ್ತರಿಸಲಾಗಿದ್ದು, ಈ ರೈಲಿಗೆ ಶ್ರವಣಬೆಳಗೊಳದ ರೈಲ್ವೆ ನಿಲ್ದಾಣದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪೂರ್ಣಕುಂಭ ಸ್ವಾಗತ ಕೋರಿದರು. ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭಗವಾನ್ ಬಾಹುಬಲಿ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರಿಶ್ರಮದಿಂದ ಮತ್ತೊಂದು ರೈಲು ಸಂಚಾರಕ್ಕೆ ಚಾಲನೆ ದೊರೆತಿದ್ದು, ಈ ಭಾಗದ ಪ್ರವಾಸೋ ದ್ಯಮ ಬೆಳೆಯಲು ಸಾಧ್ಯವಾಗಲಿದೆ ಎಂದರು. ಮಂತ್ರಾಲಯ, ರಾಯಚೂರು, ಕಲ್ಬುರ್ಗಿ,…

ರೈಲಿನಿಂದ ಆಯತಪ್ಪಿ ಬಿದ್ದು ಯುವತಿ ಸಾವು
ಹಾಸನ

ರೈಲಿನಿಂದ ಆಯತಪ್ಪಿ ಬಿದ್ದು ಯುವತಿ ಸಾವು

June 15, 2018

ಹಾಸನ: ಸಂಚರಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೀಸಾವೆ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ದಿವ್ಯಶ್ರೀ ಅಲಿಯಾಸ್ ಮೇಘನಾ (21) ಮೃತಪಟ್ಟ ಯುವತಿ. ಮಂಡ್ಯ ಜಿಲ್ಲೆಯ ಮೇಟಿಮೆಳ್ಳಲ್ಲಿ ಮೇಘನಾ ಅವರು ನಿನ್ನೆ(ಬುಧವಾರ) ಶ್ರವಣಬೆಳಗೊಳದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ ಹಿರೀಸಾವೆ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಇದರಿಂದ ಮೇಘನಾ ಅವರಿಗೆ ತೀವ್ರ ಪೆಟ್ಟಾಯಿತು. ಕೂಡಲೇ ಅವರನ್ನು ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೇಘನಾ ಡಿಪ್ಲೊಮಾ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ…

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು
ಹಾಸನ

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

June 15, 2018

ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಸುಪ್ರಿಯಾ ಬಾರ್ ಮುಂದೆ ವ್ಯಕ್ತಿ ಓರ್ವ ಅನುಮಾನಸ್ಪದವಾಗಿ ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಸುಪ್ರಿಯಾ ಬಾರ್ ಮುಂದೆ ಕುಳಿತಿದ್ದ ಯತೀಶ್ ಎಂಬುವವರು ಸಾವನಪ್ಪಿದ್ದು, ರಾತ್ರಿ ಕಂಠಪೂರ್ತಿ ಕುಡಿದು ಹೃದಯಾಘಾತದಿಂದ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ತಾಲೂಕಿನ ಬೂವನಹಳ್ಳಿ ನಿವಾಸಿ ಯತೀಶ್ (32) ಎಂದು ತಿಳಿದು ಬಂದಿದೆ. ವಿಷಯ ತಿಳಿದ ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಚಿತ ಬಸ್‍ಪಾಸ್‍ಗಾಗಿ ಎಸ್‍ಎಫ್‍ಐ ಪ್ರತಿಭಟನೆ
ಹಾಸನ

ಉಚಿತ ಬಸ್‍ಪಾಸ್‍ಗಾಗಿ ಎಸ್‍ಎಫ್‍ಐ ಪ್ರತಿಭಟನೆ

June 14, 2018

ಹಾಸನ:  ರಾಜ್ಯದಲ್ಲಿ ಉನ್ನತ ಶಿಕ್ಷಣದವರೆಗೂ ಸಾರ್ವತ್ರಿಕವಾಗಿ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್‍ಎಫ್‍ಐ ನೇತೃತ್ವ ದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳು, ಘೋಷಣೆ ಗಳನ್ನು ಕೂಗುವ ಮೂಲಕ ಬೇಡಿಕೆ ಈಡೇ ರಿಕೆಗೆ ಆಗ್ರಹಿಸಿದರು. ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡ ಬೇಕೆಂದು ಹಿಂದಿನಿಂದಲೂ ಎಸ್‍ಎಫ್‍ಐ ಸಂಘಟನೆ ಹೋರಾಡುತ್ತಾ ಬಂದಿದೆ. ರಾಜ್ಯ ಕಳೆದ ಮೂರು ವರ್ಷಗಳಿಂದ ತೀವ್ರ ಬರ ಎದುರಿಸುತ್ತಿದೆ. ಇದರಿಂದ ಪೋಷಕರು ಶಾಲಾ…

1 119 120 121 122 123 133
Translate »