ರಕ್ತದಾನ ಮಾಡುವುದರಿಂದ ಯಾವ ದುಷ್ಪರಿಣಾಮವಿಲ್ಲ
ಹಾಸನ

ರಕ್ತದಾನ ಮಾಡುವುದರಿಂದ ಯಾವ ದುಷ್ಪರಿಣಾಮವಿಲ್ಲ

June 15, 2018

ಹಾಸನ:  ರಕ್ತದಾನ ಮಾಡುವು ದರಿಂದ ಯಾವುದೇ ದುಷ್ಪರಿಣಾಮ ಆಗು ವುದಿಲ್ಲ. ಹಲವು ಜನರಿಗೆ ರಕ್ತದಾನದ ಬಗ್ಗೆ ತಿಳುವಳಿಕೆ ಇಲ್ಲದೆ ತಪ್ಪು ಕಲ್ಪನೆ ಹೊಂದಿ ದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಹೇಳಿದರು.

ನಗರದ ಆದಿಚುಂಚನಗಿರಿ ಮಹಿಳಾ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಗುರುವಾರ ಸ್ವಯಂ ಪ್ರೇರಿತ ರಕ್ತ ದಾನಿಗಳ ಬಳಗ ಮತ್ತು ಹಾಸನ ರಕ್ತ ನಿಧಿ ಘಟಕದಿಂದ ನಡೆದ ರಕ್ತದಾನ ಶಿಬಿರ ದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ದಾನ ದಾನಕಿಂತ ಶ್ರೇಷ್ಠ ವಾದ ದಾನ ಅನ್ನದಾನ ಎಂದು ಕರೆಯ ಲಾಗುತ್ತಿತ್ತು. ಇಂದಿನ ಪರಿಸ್ಥಿತಿ ಬದಲಾಗಿ ರಕ್ತದಾನದ ಹೆಸರು ಕೇಳಿ ಬರುತ್ತಿದೆ. ಅನ್ನ ಇಲ್ಲದೆ ಕೆಲವು ದಿನ ಬದುಕಬಹುದು. ಆದರೆ, ರಕ್ತವಿಲ್ಲದೆ ಬದುಕಲು ಅಸಾಧ್ಯ ಎಂದರು.

ಭೂಮಿ ಮೇಲೆ ಎಲ್ಲಾವನ್ನು ತಯಾ ರಿಸಬಹುದು. ಆದರೆ, ರಕ್ತವನ್ನು ತಯಾರಿಸುವುದು ಸಾಧ್ಯವಿಲ್ಲ. ಮನುಷ್ಯನಿಂದಲೇ ಮತ್ತೊಬ್ಬ ಮನುಷ್ಯನಿಗೆ ರಕ್ತ ನೀಡಲು ಸಾಧ್ಯ. ರಕ್ತದಾನ ಮಹಾ ದಾನ ಎಂಬುದನ್ನು ಪ್ರತಿಯೊಬ್ಬರೂ ಅರಿತು ಸ್ವಯಂ ಪ್ರೇರಿತವಾಗಿ ರಕ್ತ ದಾನ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮೇಲ್ವಿಚಾರಕ ಬಿ.ಎಂ. ರವಿ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಕೊರತೆಯಿಂದ ಯಾರೂ ಸಾಯಬಾರದು. ಒಂದು ಬಾರಿ ರಕ್ತ ನೀಡಿದರೆ ಮೂರು ಜನರ ಪ್ರಾಣ ಉಳಿಸಬಹುದು. ರಕ್ತ ಇಲ್ಲದೆ ಎಷ್ಟೊ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿ ದ್ದಾರೆ. ಸ್ವಯಂಪ್ರೇರಿತವಾಗಿ ರಕ್ತ ಕೊಡು ವುದರ ಜೊತೆಗೆ ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಏಡ್ಸ್ ನಿಯಂತ್ರಣಾ ಧಿಕಾರಿ ಪಿ.ನಾಗೇಶ್ ಆರಾಧ್ಯ, ಬಿಜೆಪಿ ಮುಖಂಡ ಶರತ್, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಳಗ) ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಮುಖಂಡ ಪ್ರಕಾಶ್, ನಟರಾಜು ಹಾಜರಿದ್ದರು.

Translate »