ನಿಗದಿತ ಅವಧಿಯೊಳಗೆ ಪಿಂಚಣ ಸೌಲಭ್ಯ ಒದಗಿಸಿ
ಹಾಸನ

ನಿಗದಿತ ಅವಧಿಯೊಳಗೆ ಪಿಂಚಣ ಸೌಲಭ್ಯ ಒದಗಿಸಿ

June 15, 2018

ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್‍ಗಳಿಗೆ ಸಚಿವ ಹೆಚ್.ಡಿ.ರೇವಣ್ಣ ಸೂಚನೆ

ಹಾಸನ: ‘ಮುಂದಿನ ಎರಡು ತಿಂಗಳೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲ ಸಾಮಾಜಿಕ ಭದ್ರತಾ ಪಿಂಚಣ ಗಳು ಬಿಪಿಎಲ್ ಕಾರ್ಡ್‍ಗಳ ವಿತರಣೆ ಪೂರ್ಣ ಗೊಳಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ ರಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರತಿ ಗ್ರಾಮವಾರು ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನಕ್ಕೆ ಬಾಕಿ ಇರುವ ಅರ್ಹರನ್ನು ಪತ್ತೆ ಮಾಡಿ ಅವರೆಲ್ಲರಿಗೂ ಎರಡು ತಿಂಗಳೊಳಗೆ ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜಿಸಿ ಸ್ಥಳದಲ್ಲೆ ಪಿಂಚಣಿ ಮಂಜೂರು ಮಾಡಿ ಆದೇಶ ಪ್ರತಿ ನೀಡಬೇಕು ಎಂದು ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರದ ಅರ್ಹರನ್ನು ಪತ್ತೆ ಮಾಡಿ ಅವರಿಗೂ ಶೀಘ್ರವೇ ಕಾರ್ಡ್ ವಿತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಪರಿಹಾರ ವಿತರಿಸಲು ಕ್ರಮವಹಿಸಿ: ಕೃಷಿ ವಿಷಯದ ಬಗ್ಗೆ ಮಾಹಿತಿ ಪಡೆದ ಸಚಿವ ರೇವಣ್ಣ ಅವರು, ಜಿಲ್ಲೆಯಲ್ಲಿ ರೈತರ ಹಿತ ಕಾಯಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು. ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ ಯಿಂದ ಹಾನಿಗೀಡಾಗಿರುವ ಬೆಳೆ, ಮನೆ ಗಳಿಗೆ ತಕ್ಷಣವೇ ಪರಿಹಾರ ವಿತರಣೆ ಯಾಗಬೇಕು ಎಂದು ಸೂಚಿಸಿದರು.

ಮಳೆ ಪ್ರಮಾಣ ಹೆಚ್ಚಿರುವ ಪ್ರದೇಶ ಗಳಲ್ಲಿ ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕೃಷಿ, ತೋಟಗಾರಿಕೆ, ಚೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ನಿರಂತರ ನಿಗಾವಹಿಸಬೇಕು. ಪ್ರತಿದಿನ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ಮಾಡಬೇಕು. ತುರ್ತು ಪರಿಹಾರ ಕ್ರಮಗಳಿಗೆ ಸದಾ ಸನ್ನದ್ಧ ರಾಗಿರಬೇಕು. ಜಿಲ್ಲೆಯಲ್ಲಿ ಮಿಶ್ರ ಬೇಸಾಯ ದಿಂದ ದೊರೆಯುವ ಲಾಭದ ಬಗ್ಗೆ ರೈತರಿಗೆ ಅರಿವು ಮೂಡಿಸಿ ಸೌಲಭ್ಯವನ್ನು ಒದಗಿಸಬೇಕು ಎಂದು ತಿಳಿಸಿದರು.

ನರೇಗಾ ಅನುಷ್ಠಾನಕ್ಕೆ ಸೂಚನೆ: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಪಿಡಿಓಗಳು ಜಿಲ್ಲೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳು ಸಮರ್ಥ ವಾಗಿ ಅನುಷ್ಟಾನಗೊಳಿಸಬೇಕು. ಸರ್ಕಾರಿ ಸ್ವತ್ತುಗಳು ಸೃಷ್ಠಿಯಾಗಬೇಕು. ಜೊತೆಗೆ ಗ್ರಾಮ ಪಂಚಾಯಿತಿಗಳಲ್ಲಿ ಹಣ್ಣಿನ ಗಿಡಗಳ ವಿತರಣೆ ತೋಟಗಾರಿಕಾ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಚಿಂತಿಸಿ ಕಾರ್ಯ ಪ್ರವೃತ್ತ ರಾಗಬೇಕು ಎಂದು ನಿರ್ದೇಶನ ನೀಡಿದರು.

ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗಳು ಅನುಷ್ಠಾನವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ದೂರ ದೃಷ್ಟಿ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದು ತಿಳಿಸಿದರು. ಶಾಸಕ ಹೆಚ್.ಕೆ ಕುಮಾರ ಸ್ವಾಮಿ ಮಾತನಾಡಿ, ನಗರ-ಪಟ್ಟಣ ಪ್ರದೇಶ ಗಳಲ್ಲಿ ಎಲ್ಲಿಯೂ ಖಾಲಿ ಜಾಗ ಉಳಿಯುತ್ತಿಲ್ಲ. ಕೃಷಿ ಜಾಗವು ಭೂ ಪರಿವರ್ತನೆ, ನಿವೇ ಶನಗಳ ನಿರ್ಮಾಣ ಮಾರಾಟ ನಡೆ ಯುತ್ತಿದೆ. ಈ ಬಗ್ಗೆ ನಿಯಂತ್ರಣ ತರ ಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಸಿ.ಎನ್.ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ಪ್ರೀತಂ ಜೆ.ಗೌಡ ಅವರು ಮಾತನಾಡಿ, ಪ್ರತಿ ಹೋಬಳಿ ಕೇಂದ್ರದಲ್ಲಿ 5 ರಿಂದ 10 ಎಕರೆ ಜಾಗ ಕಾಯ್ದಿರಿಸಿ ಕಸ ವಿಲೇವಾರಿಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಹಾಸನ ನಗರದ ಕುಡಿಯುವ ನೀರಿನ ಯೋಜನೆ, ರಸ್ತೆ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಹಾಸನಕ್ಕೆ ಕುಡಿ ಯುವ ನೀರು ಪೂರೈಕೆ ಯೋಜನೆಗೆ ನಡೆಯುತ್ತಿರುವ ಕಾಮಗಾರಿಗಳಿಗೆ ದೂರ ದೃಷ್ಟಿ ಚಿಂತನೆಗಳು ಅಗತ್ಯ. ಹಾಗಾಗಿ, ಭೂ ಸ್ವಾಧೀನ ಪ್ರಕಿಯೆ ನಡೆಸಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವುದು ಪ್ರಯೋಜ ನಕಾರಿ ಎಂದು ಶಾಸಕರಾದ ಪ್ರೀತಂ ಗೌಡ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಜಾಫರ್ ಮಾತನಾಡಿ, ಪಿಂಚಣಿ ಮಂಜೂರಾತಿಗಾಗಿ ಪ್ರತಿ ಹೋಬಳಿ ಮಟ್ಟದಲ್ಲಿ ವಿಶೇಷ ಆಂದೋಲನ ನಡೆಸಿ ಸ್ಥಳದಲ್ಲಿ ವೈದ್ಯಾಧಿಕಾರಿಗಳು, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಹಾಗೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಅಗತ್ಯ ದೃಢೀಕರಣಗಳನ್ನು ನೀಡಬೇಕು. ಈ ಬಗ್ಗೆ ಎಲ್ಲಾ ತಹಶೀಲ್ದಾರರು ಯೋಜಿತವಾಗಿ ಕಾರ್ಯಾನುಷ್ಠಾನ ಗೊಳಿಸಬೇಕು ಎಂದರು.

ಜಿ.ಪಂ ಸಿಇಓ ಜಿ.ಜಗದೀಶ್ ಮಾತನಾಡಿ, ಹಾಸನ ನಗರದಲ್ಲಿ 110 ಕೋಟಿ ರೂಪಾಯಿ ಅಂದಾಜು ಮೊತ್ತದ ರಸ್ತೆ ಕಾಮಗಾರಿ ಗಳಿಗೆ ಸಿ.ಆರ್.ಎಫ್ ನಿಧಿಯಿಂದ ಮಂಜೂ ರಾತಿ ನೀಡಲಾಗಿದೆ. ಉಳಿದಂತೆ ನಗರದ ಇತರ ಅಭಿವೃದ್ಧಿ ಕಾರ್ಯಗಳು ಶೀಘ್ರ ವಾಗಿ ಚಾಲನೆಗೊಳ್ಳಲಿವೆ ಎಂದರು.ಬೇಲೂರು ಪಟ್ಟಣದಲ್ಲಿ ಕೊಳಚೆನೀರು ನದಿಗೆ ಹರಿಯ ಬಿಡುತ್ತಿರುವ ಬಗ್ಗೆ ಶಾಸಕÀ ಕೆ.ಎಸ್.ಲಿಂಗೇಶ್ ಪ್ರಸ್ತಾಪಿಸಿ ಕೂಡಲೇ ಪರಿಹಾರ ಕ್ರಮಕ್ಕೆ ಮನವಿ ಮಾಡಿದರು.

ಶಾಸಕ ಹೆಚ್.ಕೆ.ಕುಮರಸ್ವಾಮಿ ಮಾತ ನಾಡಿ, ಹೇಮಾವತಿ ನದಿಯ ಪ್ರವಾಹದಿಂದ ಸಕಲೆಶಪುರದ ಆಜಾದ್ ನಗರದ ನಿವಾಸಿ ಗಳು ಅನುಭವಿಸುತ್ತಿರುವ ಸಂಕಷ್ಟ ಹಾಗೂ ಮಳೆ ಹಾನಿಗೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ ಮನವಿ ಮಾಡಿದರು.

ಸಚಿವ ರೇವಣ್ಣ ಮಾತನಾಡಿ, ಈ ಸಂಬಂಧ ಪಟ್ಟ ಪುರಸಭೆ ಹಾಗೂ ನಗರ ನೀರು ಸರಬರಾಜು ಇಲÁಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಪದವಿ ಶಿಕ್ಷಣ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಫಲಿತಾಂಶ ಪ್ರಮಾಣ ಹೆಚ್ಚಿಸಲು ಕ್ರಮವಹಿಸಬೇಕು. ಪದವಿ ಕಾಲೇಜುಗಳ ಉಪನ್ಯಾಸಕರ ಹುದ್ದೆ ಶೀಘ್ರ ವಾಗಿ ಭರ್ತಿ ಮಾಡಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆ ಆಯುಕ್ತರು ಆಗಿದ್ದ ಜಿಲ್ಲಾಧಿಕಾರಿ ಡಾ.ಜಾಫರ್ ಅವರು ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಈಗಾಗಲೇ, ಕೈಗೊಂಡಿರುವ ಕ್ರಮ ಹಾಗೂ ಮುಂದಿನ ಯೋಜನೆಗಳ ಕುರಿತು ತಿಳಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಶ್ರೀನಿವಾಸ್, ಎಸ್‍ಪಿ ರಾಹುಲ್‍ಕುಮಾರ್ ಶಹಪುರ ವಾಡ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Translate »