ಖದೀಮನ ಬಂಧನ; 18ಲಕ್ಷ ರೂ.ಮೌಲ್ಯದ ವಾಹನ ವಶ
ಹಾಸನ

ಖದೀಮನ ಬಂಧನ; 18ಲಕ್ಷ ರೂ.ಮೌಲ್ಯದ ವಾಹನ ವಶ

June 16, 2018

ಅರಸೀಕೆರೆ: ದ್ವಿಚಕ್ರ ಸೇರಿ ದಂತೆ ವಿವಿಧ ವಾಹನಗಳ ಖದೀಮನನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, 18 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ಅಧೀಕ್ಷ ನಾರಾಯಣ ತಿಳಿಸಿದರು.

ಟಿಪ್ಪುಸುಲ್ತಾನ್ ಎಂಬಾತ ಬಂಧಿತ ಆರೋಪಿ. ನಗರದ ಪೊಲೀಸ್ ಠಾಣೆ ಆವರಣದಲ್ಲಿ ಕಳುವಾಗಿದ್ದ ವಾಹನಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷ ನಾರಾಯಣ ಅವರು, ಶಿವಮೊಗ್ಗ ನಗರ ವ್ಯಾಪ್ತಿಯ 21 ಪ್ರಕರಣಗಳು ಸಂಬಂಧಿಸಿದಂತೆ ಕಳುವಾಗಿದ್ದ ಒಟ್ಟು ರೂ, 6,50,00 ಮೌಲ್ಯದ 11 ಅಟೋ ರಿಕ್ಷಾಗಳು, ರೂ. 4 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 8 ಬೈಕ್ ಗಳು ಹಾಗೂ ನಗರ ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ರೂ.7.50.000 ಮೌಲ್ಯದ 2 ಬೈಕ್ ಮತ್ತು ಸ್ಕಾರ್ಪಿಯೋ ಜೀಪ್ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಕಳ್ಳತನ ವಾದ ಮಾಲುಗಳು ಸುಮಾರು ರೂ.18 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ತಿಳಿಸಿ ದರಲ್ಲದೆ, ಅರಸೀಕೆರೆ ಪೊಲೀಸ್ ಉಪ ವಿಭಾಗದ ಡಿವೈಎಸ್‍ಪಿ ಸದಾನಂದ ತಿಪ್ಪಣ್ಣ ನವರ್ ನೇತೃತ್ವದಲ್ಲಿ ರಚಿಸಿದ್ದ ತಂಡ ಕಳವು ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಡಿವೈಎಸ್‍ಪಿ ತಿಪ್ಪಣ್ಣನವರ್ ಮಾತ ನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಮತ್ತು ಅಪರ ಜಿಲ್ಲಾ ಪೊಲೀಸ್ ಅಧೀಕ್ಷ ನಾರಾಯಣ ಅವರು, ಮಾರ್ಗದರ್ಶನ ದಂತೆ ನಮ್ಮ ಪೊಲೀಸ್ ತಂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪತ್ತೆ ಹಚ್ಚಿದೆ. ನಗರದ ಸ್ಟೇಡಿಯಂ ಬಳಿ ಅನು ಮಾನಾಸ್ಪದವಾಗಿ ಸಂಚರಿಸುತ್ತಿದ್ದ ಟಿಪ್ಪು ಸುಲ್ತಾನ್ ಎಂಬಾತನನ್ನು ಬೈಕ್ ಸಮೇತ ತನಿಖೆಗೆ ಒಳಪಡಿಸಿದಾಗ ಆರೋಪಿಯು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವು ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದರು.

ಕಾರ್ಯಾಚರಣೆಯಲ್ಲಿ ಎಸ್‍ಐ ಶಬ್ಬೀರ್ ಆಹ್ಮದ್, ಎಎಸ್‍ಐ ತಿಮ್ಮಪ್ಪ, ಸಿಬ್ಬಂದಿ ಮಂಜೇಗೌಡ, ರಘು, ಶಶಿಧರ್, ಗಿರೀಶ್, ಸಿದ್ದೇಶ್, ಹರೀಶ್, ರಂಗಸ್ವಾಮಿ ಭಾಗವಹಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಸಿದ್ರಾಮೇಶ್ ಇದ್ದರು.

Translate »