ಜಿಲ್ಲೆಗೆ ಹೊಸ ತೋಟಗಾರಿಕಾ ಕಾಲೇಜು ಲೋಕೋಪಯೋಗಿ ಸಚಿವ ರೇವಣ್ಣ ಭರವಸೆ
ಹಾಸನ

ಜಿಲ್ಲೆಗೆ ಹೊಸ ತೋಟಗಾರಿಕಾ ಕಾಲೇಜು ಲೋಕೋಪಯೋಗಿ ಸಚಿವ ರೇವಣ್ಣ ಭರವಸೆ

June 16, 2018

ಹಾಸನ: ಜಿಲ್ಲೆಯಲ್ಲಿ ಹೊಸ ದಾಗಿ ತೋಟಗಾರಿಕಾ ಕಾಲೇಜು ಹಾಗೂ ಸೋಮನಹಳ್ಳಿ ಕಾವಲ್‍ನ ಆಲೂಗೆಡ್ಡೆ ಸಂಶೋಧನಾ ಕೇಂದ್ರದಲ್ಲಿ ಚಿಪ್ಸ್ ತಯಾ ರಿಕಾ ಘಟಕ ಪ್ರಾರಂಭಿಸಲು ನಿರ್ಧರಿಸಿದ್ದು, ಶೀಘ್ರದಲ್ಲಿ ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಇಲಾಖಾವಾರು ಅಧಿ ಕಾರಿಗಳ ಸಭೆ ನಡೆಸಿದ ಅವರು, ಹತ್ತು ಹಲವು ಹೊಸ ಉದ್ದೇಶಿತ ಅಭಿವೃದ್ಧಿ ಯೋಜನೆಗಳನ್ನು ಸಭೆ ಮುಂದಿಟ್ಟರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ತಮ್ಮ ಆದ್ಯತೆಯಾಗಿದ್ದು, ಎಲ್ಲಾ ಅಧಿಕಾರಿಗಳು ಇದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸ ಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿರುವ ಆಲೂಗೆಡ್ಡೆ ಬೆಳೆ ಹಾನಿ ಬಗ್ಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ, ಕೃಷಿಕರಿಗೆ ಪರಿಹಾರ ಒದಗಿಸಿ ಎಂದ ಸಚಿವರು, ತೋಟಗಾರಿಕೆ ಸಸಿಗಳ ಅಭಿವೃದ್ಧಿ ಹಾಗೂ ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿ, ಅದರ ಅನುದಾನಕ್ಕೆ ರೈತರಿಗೆ ಸೂಕ್ತ ಮಾಹಿತಿ ಒದಗಿಸುವಂತೆ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ಇಲಾಖಾ ಕಾರ್ಯಕ್ರಮಗಳನ್ನು ಒಟ್ಟು ಗೂಡಿಸಿ ಲಾಭದಾಯಕ ತೋಟಗಾರಿಕಾ ಸಸಿಗಳನ್ನು ಬೆಳೆದು ರೈತರಿಗೆ ವಿತರಿಸಿ. ಜೊತೆಗೆ ಸಾಮಾಜಿಕ ಅರಣ್ಯ ಇಲಾಖೆಯು ಇದಕ್ಕೆ ಪೂರಕ ಕಾರ್ಯಕ್ರಮಗಳನ್ನು ಅನು ಷ್ಠಾನಗೊಳಿಸಬೇಕು ಎಂದು ಕೃಷಿ, ತೋಟ ಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಶಾಸಕ ರಾದ ಕೆ.ಎಂ.ಶಿವಲಿಂಗೇಗೌಡ, ಹೆಚ್.ಕೆ ಕುಮಾರಸ್ವಾಮಿ, ಸಿ.ಎನ್.ಬಾಲಕೃಷ್ಣ. ಕೆ.ಎಸ್.ಲಿಂಗೇಶ್ ಅವರು ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿನ ವಿಳಂಬದ ಬಗ್ಗೆ ಪ್ರಸ್ತಾಪಿಸಿ, ರೈತರಿಗೆ ತೀವ್ರ ತೊಂದರೆ ಯಾಗುತ್ತಿದ್ದು, ವಿಮೆ ಕಂಪನಿ ಹಣ ಕಟ್ಟಿಸಿ ಕೊಳ್ಳುವಾಗಲೇ ರೈತರಿಂದ ಪೂರ್ಣ ದಾಖಲೆ ಪಡೆಯದೆ ಈಗ ಸರಿಯಾದ ವಿವರಗಳು ಲಭ್ಯವಿಲ್ಲ ಎಂಬ ಕಾರಣ ಪರಿಹಾರ ನೀಡಲು ವಿಳಂಬ ಮಾಡು ತ್ತಿದೆ. ತಕ್ಷಣ ಪರಿಹಾರ ಬಿಡುಗಡೆ ಗೊಳಿಸ ಬೇಕು ಎಂದು ಒತ್ತಾಯಿಸಿದರು.

ಜಂಟಿ ಕೃಷಿ ನಿರ್ದೇಶಕ ಮಧು ಸೂದನ್ ಸಭೆಗೆ ಮಾಹಿತಿ ನೀಡಿ, 2016ನೇ ಸಾಲಿನಲ್ಲಿ ಬೆಳೆ ವಿಮೆ ಪರಿಹಾರ ಬಂದಿದ್ದು, 8,000 ರೈತರ ಬ್ಯಾಂಕ್ ಖಾತೆ ಬಗ್ಗೆ ಕೆಲ ವಿವರಗಳು ಅಗತ್ಯವಿದೆ. ವಿಮಾ ಸಂಸ್ಥೆ ಅವುಗಳನ್ನು ಸಂಗ್ರಹಿಸುತ್ತಿದೆ. 2017ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ 1,667 ಲಕ್ಷ ರೂ. ಬೆಳೆ ಪರಿಹಾರ ಹಣ ಬಂದಿದ್ದು, ಇದರಲ್ಲಿ 8.25 ಲಕ್ಷ ರೂ.ವಿತರಿಸಲಾಗಿದೆ. ಬಾಕಿಯನ್ನು ವಾರದೊಳಗೆ ವಿತರಣೆ ಮಾಡಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ಕೂಡಲೇ ಎಲ್ಲಾ ಬೆಳೆ ಪರಿಹಾರ ಮೊತ್ತ ವನ್ನು ರೈತರಿಗೆ ತಲುಪಿಸುವ ಕೆಲಸ ಮಾಡಿ ಎಂದರಲ್ಲದೆ, ರೈತರಿಗೆ ಸರಿಯಾಗಿ ಸಕಾಲದಲ್ಲಿ ಸಾಲ ವಿತರಿಸದೆ ಇರುವ ಹಾಗೂ ಬೆಳೆ ಪರಿಹಾರ ಹಣ ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಳ್ಳುವ ಬ್ಯಾಂಕ್‍ಗಳ ವ್ಯವಸ್ಥಾಪಕರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಇದೇ ವೇಳೆ ಸಚಿವರು ಎಚ್ಚರಿಸಿದರು.

ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಾಣ ಕುರಿತಂತೆ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಪ್ರಸ್ತಾಪಿಸಿದರು. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುಷ್ಠಾನಕ್ಕೆ ಮನವಿ ಸಲ್ಲಿಸಿ ಪ್ರಯತ್ನಿಸಲಾಗುವುದು ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಅರಣ್ಯ ಜಮೀನಿನಲ್ಲಿ ಹಿಂದಿನಿಂದ ಮನೆ ಕಟ್ಟಿಕೊಂಡಿರುವ ಬಡವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಬೇಕು. ಅದರ ಬದಲು ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.

ಸಚಿವ ರೇವಣ್ಣ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಒಂದೊಂದು ದಿನ ಒಂದು ತಾಲೂಕಿಗೆ ಭೇಟಿ ನೀಡಿ, ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ರೈತರಿಗೆ ಇರುವ ಸಮಸ್ಯೆಗಳನ್ನು ಪರಿಹರಿಸಿ ಕೊಡನೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಬಾಕಿ ಇರುವ ಸರ್ವೇ ಕಾರ್ಯವನ್ನು ಆದಷ್ಟು ಬೇಗ ಮುಗಿಸ ಬೇಕು. ಸುಮ್ಮನೆ ಸಬೂಬು ಹೇಳುತ್ತಾ ರೈತರಿಗೆ ಸಂಕಷ್ಟ ನೀಡಬೇಡಿ. ಕಂದಾಯ ಇಲಾಖೆ ಜೊತೆಗೆ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಿ ಎಂದು ಸಚಿವ ರೇವಣ್ಣ ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಸಂಸ್ಥೆಗಳು, ವ್ಯಾಪಾರಿಗಳು, ಕಳಪೆ ರಸ ಗೊಬ್ಬರ ನಕಲಿ ಬಿತ್ತನೆ ಬೀಜ ಮಾರಾಟ ಮಾಡುವುದು, ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದರ ಪಡೆಯುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗು ವುದು ಎಂದರು. ಸಭೆಯಲ್ಲಿ ಶಾಸಕ ಪ್ರೀತಂ ಜೆ.ಗೌಡ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷÀ ಶ್ರೀನಿವಾಸ್, ಎಡಿಸಿ ಬಿ.ಆರ್. ಪೂರ್ಣಿಮಾ ಹಾಗೂ ವಿವಿಧ ಇಲಾಖಾ ಅಧಿಕಾರಿಗಳಿದ್ದರು.

Translate »