ಕೆರೆಯಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವು
ಕೊಡಗು

ಕೆರೆಯಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವು

June 16, 2018

ವೀರಾಜಪೇಟೆ:  ಕೆರೆಯ ಬದಿಯಲ್ಲಿರಿಸಿದ್ದ ಬೋಟ್‍ನಲ್ಲಿ ಆಟ ವಾಡಲು ಹೋದ ಕಾರ್ಮಿಕರಿಬ್ಬರು ನೀರಿನಲ್ಲಿ ಮುಳುಗಿ ದುರ್ಮಣಗೊಂಡಿರುವ ಘಟನೆ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೀರಾಜಪೇಟೆ ಸಮೀಪದ ಚೊಕಂ ಡಳ್ಳಿ ಗ್ರಾಮದ ಡಿ.ಹೆಚ್.ಮೈದು ಎಂಬು ವರ ಹೊಸಕೋಟೆಯ ತೋಟದಲ್ಲಿ ಕೂಲಿ ಕಾರ್ಮಿಕರಾಗಿದ್ದ ಮಹೇಶ್ ಅಲಿಯಾಸ್ ರಾಜು[39] ಎಂಬಾತ ಬೆಳಿಗ್ಗೆ 8-30 ರ ಸಮಯದಲ್ಲಿ ಕೆರೆಯಲ್ಲಿದ್ದ [ಮಕ್ಕಳ] ಬೋಟ್‍ನಲ್ಲಿ ಕುಳಿತು ತುಂಬಿದ ಕೆರೆಯ ನೀರಿನಲ್ಲಿ ಆಡಲು ಹೊರಟಾಗ ಸ್ವಲ್ಪ ದೂರ ದಲ್ಲಿಯೇ ಬೋಟ್ ಮಗುಚಿಕೊಂಡು ಮಹೇಶ್ ನೀರಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಪಣ ಎರವರ ಅಣ್ಣು (28) ಎಂಬಾತ ಮಹೇಶ್‍ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಇಬ್ಬರೂ ದಡಸೇರಲು ಸಾಧ್ಯವಾಗದೆ ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ ಮಹೇಶ್‍ನ ಪತ್ನಿ ಗೌರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಠಾಣಾಧಿ ಕಾರಿ ಬಸವರಾಜು ಅವರು ಸ್ಥಳ ಪರಿ ಶೀಲನೆ ನಡೆಸಿ ಎರಡು ಶವಗಳನ್ನು ಕೆರೆಯ ನೀರಿಂದ ಹೊರ ತೆಗೆದು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಮಹೇಶ್ ಎಂಬಾತ ಮೂರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾನೆ.

Translate »