ರೈಲಿನಿಂದ ಆಯತಪ್ಪಿ ಬಿದ್ದು ಯುವತಿ ಸಾವು
ಹಾಸನ

ರೈಲಿನಿಂದ ಆಯತಪ್ಪಿ ಬಿದ್ದು ಯುವತಿ ಸಾವು

June 15, 2018

ಹಾಸನ: ಸಂಚರಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೀಸಾವೆ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

ದಿವ್ಯಶ್ರೀ ಅಲಿಯಾಸ್ ಮೇಘನಾ (21) ಮೃತಪಟ್ಟ ಯುವತಿ. ಮಂಡ್ಯ ಜಿಲ್ಲೆಯ ಮೇಟಿಮೆಳ್ಳಲ್ಲಿ ಮೇಘನಾ ಅವರು ನಿನ್ನೆ(ಬುಧವಾರ) ಶ್ರವಣಬೆಳಗೊಳದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ ಹಿರೀಸಾವೆ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಇದರಿಂದ ಮೇಘನಾ ಅವರಿಗೆ ತೀವ್ರ ಪೆಟ್ಟಾಯಿತು. ಕೂಡಲೇ ಅವರನ್ನು ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮೇಘನಾ ಡಿಪ್ಲೊಮಾ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

Translate »