ಹಾಸನ

ಜಮೀನು ಕಬಳಿಕೆ ಆಗಿದ್ದರೆ ತನಿಖೆ ಮಾಡಿಸಿಕೊಳ್ಳಲಿ
ಹಾಸನ

ಜಮೀನು ಕಬಳಿಕೆ ಆಗಿದ್ದರೆ ತನಿಖೆ ಮಾಡಿಸಿಕೊಳ್ಳಲಿ

September 20, 2018

ಹಾಸನ:  ನಾನು ಮತ್ತು ನನ್ನ ಕುಟುಂಬದವರು ಯಾರಾದರೂ ಅಕ್ರಮ ವಾಗಿ ಜಮೀನು ಕಬಳಿಕೆ ಮಾಡಿದ್ದರೆ ಯಾವ ತನಿಖೆ ಬೇಕಾದರೂ ಮಾಡಿಸಿ ಕೊಳ್ಳಲಿ ಎಂದು ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದರು. ನಗರದ ಚನ್ನಪಟ್ಟಣದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವಾಗಲಿ, ತಮ್ಮ ಕುಟುಂಬದ ಸದಸ್ಯರಾಗಲೀ ಅಕ್ರಮವಾಗಿ ಸರ್ಕಾರಿ ಜಮೀನು ಕಬಳಿಸಿದ್ದರೆ ಆ ಭೂಮಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು…

ಗುಂಪು ಘರ್ಷಣೆ: ಬೈಕ್ ಜಖಂ
ಹಾಸನ

ಗುಂಪು ಘರ್ಷಣೆ: ಬೈಕ್ ಜಖಂ

September 20, 2018

ಬೇಲೂರು: ಎರಡು ಗುಂಪುಗಳ ನಡುವೆ ಪರಸ್ಪರ ಜಗಳ ನಡೆದು, ಬೈಕ್ ಜಖಂ ಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಯುವಕರ ಗುಂಪಿನ ನಡುವೆ ಹೊಡೆದಾಟ ನಡೆದಿದೆ. ನಿಂತಿದ್ದ ಒಂದು ಗುಂಪಿನ ಮೇಲೆ ಬೈಕ್‍ನಲ್ಲಿ ಬಂದ ಮತ್ತೊಂದು ಗುಂಪು ದಾಳಿ ನಡೆಸಿದೆ. ಹೊಡೆದಾಟದ ವೇಳೆ ಬೈಕ್ ಜಖಂಗೊಂಡಿದೆ. ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಗಲಾಟೆ ನಡೆಸಿದ ಕಿಡಿಗೇಡಿಗಳ ಪತ್ತೆಗೆ ಪೆÇಲೀಸರು ಸಿಸಿ ಟಿವಿ ಫೂಟೇಜ್ ವಶಕ್ಕೆ ಪಡೆದಿದ್ದಾರೆ.

ಕಾರದ ಪುಡಿ ಎರಚಿ ರೌಡಿಶೀಟರ್ ಬರ್ಬರ ಹತ್ಯೆ
ಹಾಸನ

ಕಾರದ ಪುಡಿ ಎರಚಿ ರೌಡಿಶೀಟರ್ ಬರ್ಬರ ಹತ್ಯೆ

September 20, 2018

ಹಾಸನ:  ರೌಡಿ ಶೀಟರ್ ಓರ್ವ ಮನೆಯವರ ಎದುರೇ ಬರ್ಬರಬಾಗಿ ಕೊಲೆಗೀಡಾಗಿರುವ ಘಟನೆ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ನಗರದ ಬಂಬೂ ಬಜಾರ್‍ನಲ್ಲಿರುವ ಕಿರಣ್@ಗುಂಡ ಕೊಲೆಗೀಡಾಗಿರುವ ರೌಡಿಶೀಟರ್. ಬಂಬೂ ಬಜಾರ್ ನಿವಾಸಿಗಳಾದ ಸೀನ, ನಾಗ, ಮಂಜ, ತಿಮ್ಮಣ್ಣ ಮತ್ತು ಸುಶೀಲೇಗೌಡ ಹತ್ಯೆ ಮಾಡಿದವರು ಎನ್ನಲಾಗಿದೆ. ತಡರಾತ್ರಿ ಕಾರಿನಲ್ಲಿ ಬಂದು ಮನೆಗೆ ನುಗ್ಗಿದ್ದ ಇವರು ಏಕಾಏಕಿ ಮನೆ ಮಂದಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ನಂತರ ಕಿರಣ್‍ಗೆ ಇಟ್ಟಿಗೆಯಿಂದ ತಲೆ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಗೈದಿದ್ದಾರೆ ಎಂದು ತಿಳಿದುಬಂದಿದೆ….

ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮಸಮುದಾಯದ ಕೊಡುಗೆ ಅಪಾರ
ಹಾಸನ

ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮಸಮುದಾಯದ ಕೊಡುಗೆ ಅಪಾರ

September 18, 2018

ಹಾಸನ: ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಹಾಸನಾಂಬ ಕಲಾಭವನದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಮಹತ್ವ ಇದೆ. ಅದನ್ನು ಗೌರವಿಸಬೇಕು ಎಂದರು. ವಿಶ್ವಕರ್ಮ ಜನಾಂಗವಿಲ್ಲದೆ ಸಮಾಜ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ಅಭಿವೃದ್ಧಿಗೆ ಪೂರಕವಾದ ವಿಶ್ವಕರ್ಮ ಸಮಾಜದ ಕುಲ ಕಸುಬುಗಳಿವೆ. ಆದರೆ ಈ ಸಮುದಾಯ…

ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ
ಹಾಸನ

ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ

September 18, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಸೆ.23ರಂದು ವಿವಿಧ ಇಲಾಖೆಗಳ ಹತ್ತಾರು ಕಾಮಗಾರಿ ಗಳ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟಿಸುವಂತೆ ರಾಜ್ಯ ಮಿನರಲ್ ಕಾರ್ಪೋರೇಷನ್ ಲಿ. ವ್ಯವಸ್ಥಾಪಕ ನಿರ್ದೇಶಕರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೆ.23ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಹಾಗೂ ರಸ್ತೆಗಳು,…

ಸರಗಳ್ಳನ ಬಂಧನ
ಹಾಸನ

ಸರಗಳ್ಳನ ಬಂಧನ

September 18, 2018

ಬೇಲೂರು: ಸರಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪಟ್ಟಣ ಪೋಲಿಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ಕುಂಬಾರಬೀದಿ ನಿವಾಸಿ ಸುನೀಲ್(20) ಬಂಧಿತ. ಪಟ್ಟಣದ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದ ಈತನನ್ನು ಸಿಪಿಐ ಲೋಕೇಶ್, ಎಸ್‍ಐ ಜಗದೀಶ್ ಮತ್ತು ಸಿಬ್ಬಂದಿ ಜಮೃದ್ ಖಾನ್, ನಂದೀಶ್, ತಾಂಡವೇಶ್ವರನ್ನೊಳಗೊಂಡ ತಂಡ ಖದೀಮನನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದೆ. ಖದೀಮನಿಂದ ಅಂದಾಜು 1.80 ಲಕ್ಷ ರೂ. ಮೌಲ್ಯದ 48 ಗ್ರಾಂ. ಚಿನ್ನಾಭರಣ, ಹೀರೋ ಹೋಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ.

ವಯೋವೃದ್ಧ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ
ಹಾಸನ

ವಯೋವೃದ್ಧ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ

September 18, 2018

ಬೇಲೂರು: ವೃದ್ಧನೋರ್ವ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ತಾಲೂಕಿನ ಕಲ್ಲು ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರಾಮಮ್ಮ(60) ಹತ್ಯೆಗೀಡಾದವರು. ಹಂತಕ ಪತಿ ಮೂಡ್ಲುಗಿರಿ ಬೋವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸಾರದಲ್ಲಿ ಮೂರ್ನಾಲ್ಕು ತಿಂಗಳಿಂದಲೂ ಜಗಳ ನಡೆಯುತ್ತಿತ್ತು. ಇಂದು ಸಂಭವಿಸಿದ ಮಾತಿನ ಚಕಮಕಿ ತಾರಕ್ಕೇರಿ ವೃದ್ಧ ಮೂಡ್ಲುಗಿರಿ ಮಚ್ಚಿನಿಂದ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಹಳೇಬಿಡು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು
ಹಾಸನ

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

September 18, 2018

ಚನ್ನರಾಯಪಟ್ಟಣ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವರಾಜು(55) ಮೃತರು. ಪತ್ನಿ ಜತೆಯಲ್ಲಿ ಮಧ್ಯಾಹ್ನ ತೋಟದ ಕೆಲಸ ಮಾಡುತ್ತಿದ್ದ ವೇಳೆ ಮರದ ರೆಂಬೆ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ದೇವರಾಜು ಅವರ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದರು. ಹಿರೀಸಾವೆ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯರಾಜ್ಯದಲ್ಲಿ-7ನೇ-ತರಗತಿವರೆಗದಲ್ಲಿ 7ನೇ ತರಗತಿವರೆಗೆ ಸಿಬಿಎಸ್‌ಸಿ ಜಾರಿಗೆ ಚಿಂತನೆ
ಹಾಸನ

ರಾಜ್ಯರಾಜ್ಯದಲ್ಲಿ-7ನೇ-ತರಗತಿವರೆಗದಲ್ಲಿ 7ನೇ ತರಗತಿವರೆಗೆ ಸಿಬಿಎಸ್‌ಸಿ ಜಾರಿಗೆ ಚಿಂತನೆ

September 17, 2018

ಹಾಸನ: ರಾಜ್ಯದ ಪ್ರತಿ ತಾಲೂಕಿನಲ್ಲೂ 1ರಿಂದ 7ನೇ ತರಗತಿವರೆಗೆ ಕನಿಷ್ಠ ಒಂದು ಶಾಲೆಯಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಜಾರಿಗೊಳಿಸಲು ಚಿಂತಿಸಲಾಗಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಲಾಗುವುದು ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮಾಹಿತಿ ನೀಡಿದರು. ರವೀಂದ್ರ ನಗರದಲ್ಲಿ ಈಡಿಗರ ಸಂಘದ ನೂತನ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಜಾಲಪ್ಪ ಸೇರಿ ಈ ಸಮಾಜದ ವಿದ್ಯಾರ್ಥಿನಿಲಯಕ್ಕೆ ಬೆಂಗಳೂರಿನ ಬಳಿ 14 ಎಕರೆ ಜಾಗ…

ಸಿಎಂ ಹೆಚ್‍ಡಿಕೆ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ, ನನ್ನೆಲ್ಲಾ ಆಸ್ತಿ ಕೊಡಗು ಸಂತ್ರಸ್ತರಿಗೆ: ನಾರ್ವೆ ಸೋಮಶೇಖರ್
ಹಾಸನ

ಸಿಎಂ ಹೆಚ್‍ಡಿಕೆ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ, ನನ್ನೆಲ್ಲಾ ಆಸ್ತಿ ಕೊಡಗು ಸಂತ್ರಸ್ತರಿಗೆ: ನಾರ್ವೆ ಸೋಮಶೇಖರ್

September 17, 2018

ಅರಸೀಕೆರೆ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನನ್ನ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಹಾಗೇನಾದರೂ ಅವರು ಸಾಕ್ಷಿ ಸಮೇತ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆದು, ತನ್ನೆಲ್ಲಾ ಆಸ್ತಿಯನ್ನು ಕೊಡಗು ಸಂತ್ರಸ್ತರಿಗೆ ನೀಡುವುದಾಗಿ ಸಕಲೇಶಪುರ ವಿಧಾನಸಭೆ ಪರಾಜಿತ ಅಭ್ಯರ್ಥಿ ನಾರ್ವೆ ಸೋಮಶೇಖರ್ @ ಜಿಮ್ ಸೋಮ ಸವಾಲು ಹಾಕಿದರು. ಪಟ್ಟಣದಲ್ಲಿ ನಡೆದ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದ ನಾರ್ವೆ ಸೋಮಶೇಖರ್, ಸಿಎಂ ಮಾಡಿರುವ ಅಕ್ರಮ ಆಸ್ತಿ ಗಳಿಕೆ, ಶಾಸಕರ ಖರೀದಿ ಆರೋಪಗಳಿಗೆ ಪ್ರತಿಕ್ರಿಯಿಸಿದರು. ಸಿಎಂ…

1 89 90 91 92 93 133
Translate »