ಹಾಸನ

ಸ್ವರ್ಣಗೌರಿ ಜಾತ್ರಾ ಮಹೋತ್ಸವಕ್ಕೆ ಮಾಡಾಳು ಸನ್ನದ್ಧ
ಹಾಸನ

ಸ್ವರ್ಣಗೌರಿ ಜಾತ್ರಾ ಮಹೋತ್ಸವಕ್ಕೆ ಮಾಡಾಳು ಸನ್ನದ್ಧ

September 12, 2018

ಅರಸೀಕೆರೆ:  ರಾಜ್ಯದ ಮೂಲೆ ಮೂಲೆಗಳಲ್ಲೂ ಮಾಡಾಳು ಗೌರಮ್ಮನೆಂದು ಖ್ಯಾತಿಯಾಗಿರುವ ತಾಲೂಕು ಮಾಡಾಳು ಗ್ರಾಮದ ಸ್ವರ್ಣ ಗೌರಿ ಅಮ್ಮನವರ ಒಂಭತ್ತು ದಿನಗಳ ಜಾತ್ರಾ ಮಹೋತ್ಸವ ನಾಳೆ (ಸೆ.12) ಆರಂಭವಾಗಲಿದ್ದು. ಈ 9 ದಿನಗಳಲ್ಲಿ ಆಗಮಿಸುವ ಭಕ್ತ ಸಾಗರ ಸತ್ಕರಿಸಲು ಗ್ರಾಮ ಸರ್ವ ಸನ್ನದ್ಧವಾಗಿದೆ. ಅರಸೀಕೆರೆ ಪ್ರಸನ್ನ ಗಣಪತಿ ರಾಜ್ಯಾದ್ಯಂತ ಹೆಸರುವಾಸಿಯಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಇದೇ ತಾಲೂಕಿನ ಮಾಡಾಳು ಗ್ರಾಮದ ಸ್ವರ್ಣ ಗೌರಿ ಅಮ್ಮನವರು ವಿನಾಯಕ ಚೌತಿ ಹಿಂದಿನ ದಿನ ಸ್ಥಾಪಿತವಾಗಿ ಗಣಪತಿ ಆಗಮನಕ್ಕೆ ಮುನ್ನುಡಿ ಬರೆಯುವುದು ಈ ಹಿಂದಿನಿಂದಲೂ…

ಹಾಸನ ಜಿಲ್ಲಾದ್ಯಂತ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಹಾಸನ

ಹಾಸನ ಜಿಲ್ಲಾದ್ಯಂತ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

September 11, 2018

ಹಾಸನ: ತೈಲಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ಮಾಜಿ ಪ್ರಧಾನಿಗಳ ತವರು ಜಿಲ್ಲೆಯಲ್ಲಿ ಮಿಶ್ರ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಹಿನ್ನೆಲೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕ ಪ್ರತಿಭಟನೆ ನಡೆಸಿದರೆ, ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು. ಹಾಸನ ನಗರ, ಆಲೂರು, ಸಕಲೇಶಪುರ, ಬೇಲೂರು ತಾಲೂಕುಗಳಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಚನ್ನರಾಯಪಟ್ಟಣದಲ್ಲಿ ನೀರಸ, ಹೊಳೆನರಸೀಪುರದಲ್ಲಿ ಭಾಗಶಃ ಬಂದ್ ಯಶಸ್ವಿಯಾಯಿತು. ಒಟ್ಟಾರೆಯಾಗಿ…

ಕನ್ನಡ ಭಾಷೆ-ಸಾಹಿತ್ಯ, ಕಲೆ ಉಳಿವಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ
ಹಾಸನ

ಕನ್ನಡ ಭಾಷೆ-ಸಾಹಿತ್ಯ, ಕಲೆ ಉಳಿವಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ

September 9, 2018

ಹಾಸನ: ಹತ್ತೊಂಬತ್ತನೇ ಶತಮಾನದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರಾಂತ್ಯಗಳನ್ನು ಒಗ್ಗೂಡಿಸಿದ ಮೈಸೂರು ಸಂಸ್ಥಾನ, ಭಾಷೆ-ಸಾಹಿತ್ಯ, ಕಲೆ ಉಳಿಸುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಮೈಸೂರಿನ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಾ ಪೂರ್ವ ಮತ್ತು ನಂತರದ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮೈಸೂರು ಮಹಾಸಂಸ್ಥಾನ ರಾಜ್ಯಕ್ಕೆ ಉತ್ತಮ ಆಡಳಿತ…

ರಾಜಕೀಯ ಪ್ರವೇಶ ಊಹಾಪೋಹಕ್ಕೆ ತೆರೆ ಎಳೆದ ಯುವರಾಜ
ಹಾಸನ

ರಾಜಕೀಯ ಪ್ರವೇಶ ಊಹಾಪೋಹಕ್ಕೆ ತೆರೆ ಎಳೆದ ಯುವರಾಜ

September 9, 2018

ಹಾಸನ:  ಮೈಸೂರು ಯುವರಾಜರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಕ್ಕೆ ಸ್ವತಃ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ತೆರೆ ಎಳೆದಿದ್ದಾರೆ. ಜಿಲ್ಲಾ ಕಸಾಪದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲು ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರಿಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟು ಇದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗೋದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು. ಮಂಡ್ಯದಿಂದ ಲೋಕಸಭೆಗೆ…

ಸಚಿವ ಹೆಚ್.ಡಿ.ರೇವಣ್ಣ ತಾಲೂಕಿಗೆ ಮಾತ್ರ ಉಸ್ತುವಾರಿ
ಹಾಸನ

ಸಚಿವ ಹೆಚ್.ಡಿ.ರೇವಣ್ಣ ತಾಲೂಕಿಗೆ ಮಾತ್ರ ಉಸ್ತುವಾರಿ

September 9, 2018

ಹೊಳೆನರಸೀಪುರ:  ಲೋಕೋ ಪಯೋಗಿ ಸಚಿವರು ಕೇವಲ ಅವರ ತಾಲೂಕಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾರಮೇಶ್ ಟೀಕಿಸಿದರು. ತಾಲೂಕಿನ ಗುಡ್ಡೇನಹಳ್ಳಿ ಏತನೀರಾ ವರಿ ಯೋಜನಾ ಯಂತ್ರಾಗಾರದ ಬಳಿ ವಿದ್ಯುತ್ ಟಿಸಿ ದುರಸ್ತಿಗಾಗಿ ಹಳ್ಳಿಮೈಸೂರು ಹೋಬಳಿ ಕಾರ್ಯಕರ್ತರು ಹಮ್ಮಿಕೊಂ ಡಿದ್ದ ಪ್ರತಿಭಟನೆ ನೇತೃತ್ವ ವಹಿಸಿದ್ದ ಅವರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು. ಏತನೀರಾವರಿ ಯೋಜನೆ ಮೂಲಕ ಹಳ್ಳಿಮೈಸೂರು ಹೋಬಳಿಯ ಎಲ್ಲಾ ಕೆರೆ ಗಳಿಗೂ ನೀರು ತುಂಬಿಸುವ ಯೋಜನೆಗೆ…

ತೈಲಬೆಲೆ ಏರಿಕೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ
ಹಾಸನ

ತೈಲಬೆಲೆ ಏರಿಕೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ

September 9, 2018

ಹಾಸನ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಹೇಮಾವತಿ ಪ್ರತಿಮೆ ಬಳಿ ಜಮಾ ಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಬೆಲೆಯೊಂದಿಗೆ ಹೋಲಿಸಿದರೆ ಭಾರ ತೀಯರು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಮಾಡುತ್ತಿರುವ ವೆಚ್ಚ ಹೆಚ್ಚಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪೆಟ್ರೋ ಲಿಯಂ ಉತ್ಪನ್ನ ಬೆಲೆ ಹೆಚ್ಚುವ ಮೂಲಕ ಬೊಕ್ಕಸಕ್ಕೆ…

ಕೌಶಲ್ಯ ಕರ್ನಾಟಕ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ
ಹಾಸನ

ಕೌಶಲ್ಯ ಕರ್ನಾಟಕ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

September 8, 2018

ಹಾಸನ: ಯುವ ಸಮುದಾಯಕ್ಕೆ ಹೊಸ ಆಶಾ ಕಿರಣವಾಗಿರುವ ಕೌಶಲ್ಯ ಕರ್ನಾಟಕ ಯೋಜನೆ ಸಮಪರ್ಕವಾಗಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ನಡೆದ ಪ್ರಥಮ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ವೃತ್ತಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಹಲವು ಯೋಜನೆಗಳನ್ನು…

ಆಕಸ್ಮಿಕ ಬೆಂಕಿ ನಾಲ್ಕು ಮನೆಗಳು ಭಸ್ಮ
ಹಾಸನ

ಆಕಸ್ಮಿಕ ಬೆಂಕಿ ನಾಲ್ಕು ಮನೆಗಳು ಭಸ್ಮ

September 8, 2018

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ತಿಮ್ಮಲಾಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ನಾಲ್ಕು ಮನೆಗಳು ಸಂಪೂರ್ಣ ಭಸ್ಮವಾಗಿ, ಸುಮಾರು ರೂ.15 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಗುರುವಾರ ಸಂಜೆ ಗ್ರಾಮದ ಅಪ್ಪಣ್ಣಿ ಅವರ ಸೋಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ನಂತರ ಪಕ್ಕದ ವೆಂಕಟಾಚಲಯ್ಯ, ರಘು ಹಾಗೂ ಶಿಕ್ಷಕ ವೆಂಕಟಲಚಲ ಅವರ ಮನೆಗಳಿಗೆ ತಗುಲಿದೆ. ಪರಿಣಾಮ ನಾಲ್ಕೂ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಬೆಂಕಿ ಅವಘಡದಿಂದ ಮನೆಯಲ್ಲಿ ಇದ್ದ ದವಸ-ಧಾನ್ಯಗಳು, ಹೊಲಿಗೆ ಯಂತ್ರಗಳು, ಟಿವಿ ಸೇರಿದಂತೆ ವಿದ್ಯುತ್ ಉಪಕರಣ ಗಳು,…

ಹಾಸನದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವೃದ್ಧ ಸಾವು
ಹಾಸನ

ಹಾಸನದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವೃದ್ಧ ಸಾವು

September 8, 2018

ಹಾಸನ: ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಗರ ಹೊರವಲಯದಲ್ಲಿ ನಡೆದಿದೆ. ಸುಮಾರು 62 ವರ್ಷದ ವಯೋವೃದ್ಧ ಸಾವನ್ನಪ್ಪಿದ್ದು, ಮೃತರ ಚಹರೆ ತಿಳಿದು ಬಂದಿಲ್ಲ. ಹಾಸನ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಿದ್ದ ವೃದ್ಧ ಬಾಗಿಲಿನ ಬಳಿ ಬಂದು ನಿಂತಿದ್ದ ಎನ್ನಲಾಗಿದ್ದು, ಭೂವನಹಳ್ಳಿ ಬ್ರಿಡ್ಜ್ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ರೈಲ್ವೆ ಪೆÇಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ನಗರದ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ್ಡಿ ವ್ಯವಹಾರ ವೈಷಮ್ಯ; ವ್ಯಕ್ತಿಗೆ ಚಾಕು ಇರಿತ
ಹಾಸನ

ಬಡ್ಡಿ ವ್ಯವಹಾರ ವೈಷಮ್ಯ; ವ್ಯಕ್ತಿಗೆ ಚಾಕು ಇರಿತ

September 8, 2018

ಅರಕಲಗೂಡು: ಬಡ್ಡಿ ವ್ಯವಹಾರದ ವೈಷಮ್ಯ ಹಿನ್ನೆಲೆ ಹಾಡಹಗಲೇ ವ್ಯಕ್ತಿಗೆ ಚಾಕುವಿನಿಂದ ಇರಿದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಕನಕ ನಗರದ ನಿವಾಸಿ ಶ್ಯಾಮ್ ಚಾಕು ಇರಿತಕ್ಕೊಳಗಾದವರು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಶಾಹಿನ್ ಎಂಬಾತ ಕೃತ್ಯವೆಸಗಿದವ ಎನ್ನಲಾಗಿದೆ. ಶ್ಯಾಮ್ ಅವರು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಬಡ್ಡಿ ವ್ಯವಾಹರವಾಗಿ ವೈಷಮ್ಯ ಹಿನ್ನೆಲೆ ಶಾಮ್ ಮನೆಗೆ ನುಗ್ಗಿ ಶಾಹಿನ್ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಪರಿಣಾಮ ಹೊಟ್ಟೆ, ಕತ್ತಿನ ಭಾಗಕ್ಕೆ ತೀವ್ರ ಗಾಯವಾಗಿದೆ. ಸ್ಥಳೀಯರು ಶಾಹಿನ್‍ನನ್ನು ಹಿಡಿದು ಪೆÇಲೀಸರಿಗೆ…

1 91 92 93 94 95 133
Translate »