ಹಾಸನ

ಅರಸೀಕೆರೆ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ
ಹಾಸನ

ಅರಸೀಕೆರೆ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ

September 16, 2018

ಅರಸೀಕೆರೆ: ನಗರದ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕಾರು ಬಾರು ಹೆಚ್ಚಿದ್ದು, ಅಧಿಕಾರಿಗಳು ಕಂಡೂ ಕಾಣದಂತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಸಹಾಯಕರಾಗಿ ಕೈ ಚೆಲ್ಲುವುದರ ಮೂಲಕ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಅತೀ ಹೆಚ್ಚು ಕಂದಾಯ ವಸೂಲಿಯಾಗುವ ಪ್ರದೇಶವಾಗಿದ್ದು, ಇದಕ್ಕಾಗಿ ನಗರದಲ್ಲಿರುವ ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ಮಧ್ಯವರ್ತಿಗಳ ಕಾರುಬಾರು ಹೆಚ್ಚುವ ಮೂಲಕ ಜನ ಸಾಮಾನ್ಯರು ಅಧಿಕಾರಿ ಗಳ ಬಳಿ ಸರ್ಕಾರಿ ಕೆಲಗಳನ್ನು ಮಾಡಿಕೊಳ್ಳು ವುದೇ ದುಸ್ಸಾಹಸ. ರಾಜ್ಯ ಮತ್ತು ಕೇಂದ್ರ…

ಮುಖ್ಯಮಂತ್ರಿಗಳ ಪ್ರವಾಸ: ಪೂರ್ವ ತಯಾರಿ ಸಭೆ
ಹಾಸನ

ಮುಖ್ಯಮಂತ್ರಿಗಳ ಪ್ರವಾಸ: ಪೂರ್ವ ತಯಾರಿ ಸಭೆ

September 16, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಡಿಸಿ ಕಚೇರಿಯಲ್ಲಿಂದು ಮತ್ತೊಂದು ಸುತ್ತಿನ ಪೂರ್ವ ತಯಾರಿ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹಾಗೂ ಜಿಪಂ ಪ್ರಭಾರಿ ಮುಖ್ಯಕಾರ್ಯ ನಿರ್ವಹಕ ಅಧಿಕಾರಿ ಪುಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರಿಂದ ಶಿಲಾ ನ್ಯಾಸ, ಉದ್ಘಾಟನೆ ನೆರವೇರಿಸಲು ಸಿದ್ಧವಿ ರುವ 50 ಲಕ್ಷ ರೂ. ಮೇಲ್ಪಟ್ಟ ಕಾಮ ಗಾರಿ ಗಳನ್ನು ಸಭೆಯಲ್ಲಿ ಪಟ್ಟಿ ಮಾಡಲಾಯಿತು. ಲೋಕೋಪಯೋಗಿ ಇಲಾಖೆಯ ವಿವಿಧ ಕಟ್ಟಡ ಕಾಮಗಾರಿಗಳು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ…

ವಿವಿಧ ಬೇಡಿಕೆ ಈಡೇರಿಕೆಗೆ ಜನತೆಯ ಆಗ್ರಹ
ಹಾಸನ

ವಿವಿಧ ಬೇಡಿಕೆ ಈಡೇರಿಕೆಗೆ ಜನತೆಯ ಆಗ್ರಹ

September 16, 2018

ಬೇಲೂರು:  ಇಂದು ತಾಲೂಕಿನ ಚೀಕನಹಳ್ಳಿಯಲ್ಲಿ ಶಾಸಕ ಕೆ.ಎಸ್. ಲಿಂಗೇಶ್ ನಡೆಸಿದ ಗ್ರಾಮ ಸಭೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ಸ್ಮಶಾನದ ಸ್ಥಳ ಒತ್ತುವರಿಯಾಗಿ ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಕುಡಿ ಯುವ ನೀರಿಗೂ ಸಾಕಷ್ಟು ತೊಂದರೆ ಯಾಗಿದೆ ಎಂದು ಶಿರಗೂರು ಗ್ರಾಮಸ್ಥರು ತಮ್ಮೂರಿನ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು. ಹುನುಗನಹಳ್ಳಿಯ ಗ್ರಾಪಂ ಅಧ್ಯಕ್ಷರ ವಿವಾದವು ನ್ಯಾಯಾಲಯದಲ್ಲಿ ಇರುವು ದರಿಂದ ಅಲ್ಲಿನ ಅಧ್ಯಕ್ಷ ಹುದ್ದೆ ಖಾಲಿ ಯಿದೆ. ಇದರಿಂದ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ…

ಹಾಸನ ನೂತನ ಎಸ್ಪಿಯಾಗಿ ಎ.ಎನ್.ಪ್ರಕಾಶ್‍ಗೌಡ
ಹಾಸನ

ಹಾಸನ ನೂತನ ಎಸ್ಪಿಯಾಗಿ ಎ.ಎನ್.ಪ್ರಕಾಶ್‍ಗೌಡ

September 16, 2018

ಹಾಸನ: ಜಿಲ್ಲಾ ಪೆÇಲೀಸ್ ವರಿ ಷ್ಠಾಧಿಕಾರಿ ರಾಹುಲ್ ಕುಮಾರ್ ಶಹ ಪುರವಾಡ್ ಅವರನ್ನು ರಾಜ್ಯ ಸರ್ಕಾರ ಶನಿವಾರ ವರ್ಗಾವಣೆಗೊಳಿಸಿ ಎ.ಎನ್. ಪ್ರಕಾಶ್‍ಗೌಡನ್ನು ಆ ಸ್ಥಾನಕ್ಕೆ ನೇಮಿಸಿ ಆದೇಶ ಹೊರಡಿಸಿದೆ. ಎ.ಎನ್.ಪ್ರಕಾಶ್‍ಗೌಡ ಅವರು ಬೆಂಗಳೂರಿನ ಮೆಟ್ರೋ ಪಾಲಿಟಿನ್ ಟಾಸ್ಕ್ ಪೆÇೀರ್ಸ್‍ನ ಪೆÇಲೀಸ್ ವರಿಷ್ಠಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕಳೆದ ಎರಡೂವರೇ ವರ್ಷಗಳಿಂದ ಹಾಸನ ಜಿಲ್ಲಾ ಪೆÇಲೀಸ್ ವರಿಷ್ಠಾಧಿ ಕಾರಿಯಾಗಿ ಸೇವೆ ಸಲ್ಲಿಸಿದ ರಾಹುಲ್ ಕುಮಾರ್ ಶಹಪುರ ವಾಡ್ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೇ ಖಾಲಿ ಉಳಿಸಲಾಗಿದೆ.

ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸಚಿವ ಹೆಚ್.ಡಿ ರೇವಣ್ಣ ಸೂಚನೆ
ಹಾಸನ

ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸಚಿವ ಹೆಚ್.ಡಿ ರೇವಣ್ಣ ಸೂಚನೆ

September 15, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೆ.21ರಂದು ಜಿಲ್ಲೆಗೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತು ವಾರಿ ಸಚಿವ ಹೆಚ್.ಡಿ.ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿಂದು ವಿವಿಧ ಇಲಾಖಾಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಿ, ಜಿಲ್ಲೆಯಲ್ಲಿ ಶಂಕುಸ್ಥಾಪನೆ, ಉದ್ಘಾಟನೆಗೆ ಸಿದ್ಧವಿರುವ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದಿರುವ ಕಾಮಗಾರಿಗಳ ಪಟ್ಟಿ ಮಾಡಿ, ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿ ಕಾರಿಗಳಿಗೆ ನಿರ್ದೇಶನ ನೀಡಿದರು. ಲೋಕೋಪಯೋಗಿ…

ಬಾಹುಬಲಿ ಸ್ವಾಮಿ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಅದ್ಧೂರಿ ತೆರೆ
ಹಾಸನ

ಬಾಹುಬಲಿ ಸ್ವಾಮಿ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಅದ್ಧೂರಿ ತೆರೆ

September 15, 2018

ಶ್ರವಣಬೆಳಗೊಳ:  ಜೈನಕಾಶಿ ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊಮ್ಮೆ ಬಾಹುಬಲಿ ಸ್ವಾಮಿಗೆ ನಡೆಯುವ ಮಹಾಮಸ್ತಕಾಭಿಷೇಕದ 88ನೇ ಮಹೋತ್ಸವಕ್ಕೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ಅದ್ಧೂರಿ ತೆರೆ ಬಿದ್ದಿತು. ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರು ಮಾರ್ಗದರ್ಶನ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳ ನೇತೃತ್ವದಲ್ಲಿ ಪ್ರಥಮ ಜಲಕಳಶದೊಂದಿಗೆ ಫೆಬ್ರವರಿ ಯಲ್ಲಿ ಆರಂಭಗೊಂಡಿದ್ದ ಮಹಾಮಸ್ತಕಾಭಿಷೇಕ ಮಹೋತ್ಸವ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ಅಧಿಕೃತವಾಗಿ ಸಮಾಪ್ತಿಯಾಯಿತು. ವಿಂಧ್ಯಗಿರಿ ಬೆಟ್ಟದ ಮೇಲೆ ಶಾಂತಿದಾನ ಮಾಡುವುದರೊಂದಿಗೆ ಮಹಾಮಂಗಳಾರತಿ ಮಾಡಿ ಬಾಹುಬಲಿ ಪಾದದಿಂದ ಶಿರದವರೆಗೆ ಬೃಹತ್ ಏಲಕ್ಕಿ ಹಾರ…

ಜಿಲ್ಲೆಯೆಲ್ಲೆಡೆ ಸ್ವರ್ಣಗೌರಿ ವ್ರತ ಸಂಭ್ರಮದ ಆಚರಣೆ: ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ತಯಾರಿ
ಹಾಸನ

ಜಿಲ್ಲೆಯೆಲ್ಲೆಡೆ ಸ್ವರ್ಣಗೌರಿ ವ್ರತ ಸಂಭ್ರಮದ ಆಚರಣೆ: ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ತಯಾರಿ

September 13, 2018

ಹಾಸನ: ಜಿಲ್ಲೆಯೆಲ್ಲೆಡೆ ಇಂದು ಶ್ರದ್ಧಾಭಕ್ತಿಯಿಂದ ಸ್ವರ್ಣಗೌರಿ ಹಬ್ಬ ಆಚರಿ ಸಲಾಯಿತು. ವಿಘ್ನನಿವಾರಕನ ಪ್ರತಿಷ್ಠಾಪ ನೆಗೆ ಅಗತ್ಯ ತಯಾರಿ ನಡೆದಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ನಗರದ ಅರಳೇ ಪೇಟೆಯ ಶ್ರೀ ಬಸವೇಶ್ವರ ದೇಗುಲದಲ್ಲಿ ಸ್ವರ್ಣಗೌರಿಯನ್ನು ಪ್ರತಿಷ್ಠಾ ಪಿಸಲಾಗಿತ್ತು. ಬೆಳಗ್ಗಿನಿಂದಲೇ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಇದೇ ವೇಳೆ ಪ್ರಸಾದ ವಿತರಣೆ ಏರ್ಪಡಿ ಸಲಾಗಿತ್ತು. ಹಲವು ಮನೆಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಭರ್ಜರಿ ತಯಾರಿ: ನಾಳೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣಪತಿ ಕೂರಿಸಲು ಮಕ್ಕಳು,…

ಅಕ್ರಮ ಮರಳು ಗಣಿಗಾರಿಕೆಗೆ ತಡೆಗೆ ಆಗ್ರಹ
ಹಾಸನ

ಅಕ್ರಮ ಮರಳು ಗಣಿಗಾರಿಕೆಗೆ ತಡೆಗೆ ಆಗ್ರಹ

September 13, 2018

ರಾಮನಾಥಪುರ: ಇಲ್ಲಿನ ಕಾವೇರಿ ನದಿ ಪಾತ್ರದ ಹಿನ್ನೀರು ಪ್ರದೇಶ ಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯಿಂದ ಜಿಲ್ಲಾ ಮತ್ತು ತಾಲೂಕು ಆಡಳಿತ ನಿರ್ಲ ಕ್ಷ್ಯದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಪ್ರಮಾಣದ ನಷ್ಟ ಉಂಟಾ ಗುತ್ತಿದ್ದು, ನದಿ ವ್ಯಾಪ್ತಿಯ ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಇಲ್ಲಿಯ ಶ್ರೀ ರಾಮೇ ಶ್ವರಸ್ವಾಮಿ ಅಘಸ್ತ್ಯೇಶ್ವರಸ್ವಾಮಿ ಸೇರಿದಂತೆ ಮುಂತಾದ ದೇವಸ್ಥಾನದ ಬಳಿ ಪ್ರತಿನಿತ್ಯ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ದಂಧೆ…

ಹಾಸನ:ಆರೋಗ್ಯ ಕರ್ನಾಟಕ ಜಾರಿ
ಹಾಸನ

ಹಾಸನ:ಆರೋಗ್ಯ ಕರ್ನಾಟಕ ಜಾರಿ

September 13, 2018

ಹಾಸನ: ಹಲವು ಯೋಜನೆಗಳ ವಿಲೀನದೊಂದಿಗೆ ಪ್ರಸ್ತುತ ಆರೋಗ್ಯ ಕರ್ನಾ ಟಕ ಯೋಜನೆ ಜಾರಿಗೆ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ತಿಳಿಸಿದರು. ನಗರದ ಸಾಲಗಾಮೆ ರಸ್ತೆ ಬಳಿಯ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿನಿ, ವಾಜಪೇಯಿ ಆರೋ ಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಹಿರಿಯ ನಾಗರಿಕರಿಗೆ ರೆಸ್ಬಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ, ರಾಷ್ಟ್ರೀಯ ಬಾಲ ಸ್ವಾಸ್ಥ್ಯಾ ಯೋಜನೆ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ ಸೇರಿದಂತೆ ಇಂದಿರಾ ಸುರಕ್ಷಾ ಯೋಜನೆಗಳೊಂದಿಗೆ ಪ್ರಸ್ತುತ…

ಟೀಕೆ ಸಹಿಸಿದವ ಉನ್ನತ ಮಟ್ಟಕ್ಕೇರುವ:ಹೆಚ್‍ಡಿಡಿ
ಹಾಸನ

ಟೀಕೆ ಸಹಿಸಿದವ ಉನ್ನತ ಮಟ್ಟಕ್ಕೇರುವ:ಹೆಚ್‍ಡಿಡಿ

September 12, 2018

ಹೊಳೆನರಸೀಪುರ: ಟೀಕೆಗಳನ್ನು ಸಹಿಸಿಕೊಂಡು ವ್ಯಕ್ತಿತ್ವ ಹಾಗೂ ಗೌರವ ಉಳಿಸಿಕೊಳ್ಳುವ ವ್ಯಕ್ತಿ ಮುಂದೊಂದು ದಿನ ಉನ್ನತ ಮಟ್ಟಕ್ಕೇರುತ್ತಾನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಫೈಯಾಜ್ ಪಾಷ ರಚಿಸಿರುವ ಹೆಚ್.ಡಿ.ದೇವೇಗೌಡರ ಜೀವನ ಆಧಾರಿತ (ದೊಡ್ಡಗೌಡರ ಜೀವನಗಾಥೆ) `ನಮ್ಮೂರ ದ್ಯಾವಪ್ಪ’ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಭಾಗವಹಿಸಿ ಅವರು ತಮ್ಮ ಜೀವನ ಅನುಭವ ಹಂಚಿಕೊಂಡರು. ನನ್ನ ಜೀವನ ಚರಿತ್ರೆಯನ್ನು ರಚಿಸಿದ ವ್ಯಕ್ತಿ ರಾಜಕೀಯ ಜಂಜಾಟ ಮತ್ತು ಜೀವನದ ಆಗುಹೋಗುಗಳ…

1 90 91 92 93 94 133
Translate »