ಬಾಹುಬಲಿ ಸ್ವಾಮಿ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಅದ್ಧೂರಿ ತೆರೆ
ಹಾಸನ

ಬಾಹುಬಲಿ ಸ್ವಾಮಿ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಅದ್ಧೂರಿ ತೆರೆ

September 15, 2018

ಶ್ರವಣಬೆಳಗೊಳ:  ಜೈನಕಾಶಿ ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊಮ್ಮೆ ಬಾಹುಬಲಿ ಸ್ವಾಮಿಗೆ ನಡೆಯುವ ಮಹಾಮಸ್ತಕಾಭಿಷೇಕದ 88ನೇ ಮಹೋತ್ಸವಕ್ಕೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ಅದ್ಧೂರಿ ತೆರೆ ಬಿದ್ದಿತು.

ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರು ಮಾರ್ಗದರ್ಶನ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳ ನೇತೃತ್ವದಲ್ಲಿ ಪ್ರಥಮ ಜಲಕಳಶದೊಂದಿಗೆ ಫೆಬ್ರವರಿ ಯಲ್ಲಿ ಆರಂಭಗೊಂಡಿದ್ದ ಮಹಾಮಸ್ತಕಾಭಿಷೇಕ ಮಹೋತ್ಸವ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ಅಧಿಕೃತವಾಗಿ ಸಮಾಪ್ತಿಯಾಯಿತು.

ವಿಂಧ್ಯಗಿರಿ ಬೆಟ್ಟದ ಮೇಲೆ ಶಾಂತಿದಾನ ಮಾಡುವುದರೊಂದಿಗೆ ಮಹಾಮಂಗಳಾರತಿ ಮಾಡಿ ಬಾಹುಬಲಿ ಪಾದದಿಂದ ಶಿರದವರೆಗೆ ಬೃಹತ್ ಏಲಕ್ಕಿ ಹಾರ ಅರ್ಪಿಸಲಾಯಿತು. ನಂತರ ಧಾರ್ಮಿಕ ವಿಧಿಯಂತೆ ಪಾದಪೂಜೆ ಪ್ರಾರಂಭವಾಗಿ ಅಕ್ಷತೆ, ಧೂಪ, ದೀಪ, ಭಸ್ಮ, ಕುಂಭದೊಂದಿಗೆ ಪಂಚವರ್ಣ, ಜಲದೊಂದಿಗೆ ಪುಷ್ಪ ಹಾಗೂ ಅನೇಕ ಶ್ರೀಫಲ ಗಳನ್ನು ಬಾಹುಬಲಿ ಸ್ವಾಮಿಗೆ ಅರ್ಪಿಸಿ ಜಲ, ಎಳನೀರು, ಇಕ್ಷುರಸ, ಕ್ಷೀರ, ಕಲ್ಕಚೂರ್ಣ, ಅರಿಶಿಣ, ಕಷಾಯ, ಚತುಷ್ಕೋನ ಕಳಶ, ಕೇಸರಿ, ಶ್ರೀಗಂಧ, ಅಷ್ಟಗಂಧ ಮತ್ತು ಪಂಚಾಮೃತ ಕೂಡಿದ ಅಭಿಷೇಕಗಳು ನೇರ ವೇರಿದವು. ಬಳಿಕ ಧಾರ್ಮಿಕ ವಿಸರ್ಜನಾ ಜಯಮಂಗಲ ಘೋಷಣೆ ಗಳನ್ನು ಮೊಳ ಗಿಸುತ್ತಾ ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರು ಲೋಕ ಕಲ್ಯಾಣಾರ್ಥ ಎಲ್ಲರಿಗೂ ಸುಖ ಶಾಂತಿ ಆರೋಗ್ಯ ದೊರೆಯಲಿ ಎಂದು ಆಶೀರ್ವದಿಸಿದರು.

ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದ ಎಲ್ಲಾ ಆಚಾರ್ಯರ ಆಶೀರ್ವಾದದಿಂದ ಮಹಮಸ್ತಕಾಭೀಷೇಕ ಮಹೋತ್ಸವ ಯಶಸ್ವಿಯಾಗಿದೆ ಎಂದು ಘೋಷಿಸಿದರು.

ಮಹಮಸ್ತಕಾಭಿಷೇಕ ಮಹೋತ್ಸವದ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರಿಗೆ ಇದೇ ವೇಳೆ ಕ್ಷೇತ್ರದ ಪರವಾಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಅಭಿನಂದಿಸಿದರು.

ವಿಂಧ್ಯಗಿರಿ ಪರ್ವತದ ಮೇಲಿರುವ 24 ತೀರ್ಥಂಕರರ ಮೂರ್ತಿಗಳು ಮತ್ತು ಭಗವಾನ್ ಬಾಹುಬಲಿ ಸ್ವಾಮಿಗೆ ಏಕಕಾಲ ದಲ್ಲಿ 108 ಕಳಶಗಳಿಂದ ಜಲಾಭಿಷೇಕ ಜರುಗಿದ ನಂತರ ಚತ್ರತ್ರಯವಾದ ಕಳಸವನ್ನು ತೆರವುಗೊಳಿಸುವುದರ ಮೂಲಕ ಧಾರ್ಮಿಕ ವಿಸರ್ಜನೆ ಮಾಡಲಾಯಿತು. ನಂತರ ಮಧ್ಯಾಹ್ನ 3ರಿಂದ ಪಾದಪೂಜೆ ಮತ್ತು ಓಕುಳಿಯ ವಸಂತೋತ್ಸವಕ್ಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಚಾಲನೆ ನೀಡಿದರು. ಶ್ರಾವಕ-ಶ್ರಾವಕಿ ಯರು ಬಾಹುಬಲಿ ಸ್ವಾಮಿಯ ಜಯ ಘೋಷಗಳನ್ನು ಮೊಳಗಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಆಚಾರ್ಯ ಶ್ರೀ ಪಂಚಕಲ್ಯಾಣ ಸೂಜಿ ಸಾಗರ, ಆಚಾರ್ಯ ಶ್ರೀ ಸೂಜಿಸಾಗರ ಮಹಾರಾಜರು, ಆಚಾರ್ಯ ಶ್ರೀ ಶ್ರೇಯ ಸಾಗರ ಮಹಾರಾಜರು, ಆಚಾರ್ಯ ಶ್ರೀ ಉಪಾಧ್ಯೇ ಉಜ್ಜವಂತ ಸಾಗರ ಮಹಾರಾಜರು, ಆರ್ಯಿಕಾ ಮಾತಾಜಿಯವರು. ಮಹಮಸ್ತಕಾಭೀಷೇಕ ಮಹೋತ್ಸವ ರಾಷ್ಟ್ರೀಯ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಆಶೋಕ್‍ಕುಮಾರ್ ಜೈನ್, ವಿನೋದ್ ಕುಮಾರ್ ಬಾಕ್ಳಿವಾಲ್, ವಿನೋದ್ ದೊಡ್ಡಣವರ್ ಇತರರು ಉಪಸ್ಥಿತರಿದ್ದರು.

Translate »