ಹಾಸನ

ಡಣಾಯಕನಹಳ್ಳಿಯಲ್ಲಿ ಗ್ರಾಮಿಣ ಕೃಷಿ ಕಾರ್ಯಾನುಭವ ಶಿಬಿರ: ಹೈನುಗಾರಿಕೆಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಸಲಹೆ
ಹಾಸನ

ಡಣಾಯಕನಹಳ್ಳಿಯಲ್ಲಿ ಗ್ರಾಮಿಣ ಕೃಷಿ ಕಾರ್ಯಾನುಭವ ಶಿಬಿರ: ಹೈನುಗಾರಿಕೆಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಸಲಹೆ

September 7, 2018

ಹಾಸನ: ಹೈನುಗಾರಿಕೆಯಲ್ಲಿ ಮೊದಲು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಡಾ.ಮಂಜುನಾಥ್ ರೈತರಿಗೆ ಸಲಹೆ ನೀಡಿದರು. ತಾಲೂಕಿನ ಡಣಾಯಕನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯದ ಹಾಸನದ ಅಂತಿಮ ಬಿಎಸ್‍ಸಿ ಕೃಷಿ ವಿದ್ಯಾರ್ಥಿಗಳ ಗ್ರಾಮಿಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪಶು ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತ ನಾಡಿದರು. ಜಾನುವಾರುಗಳಲ್ಲಿ ಜಂತುಹುಳುಗಳ ನಿವಾರಣೆಗೆ 6 ತಿಂಗಳಿಗೊಮ್ಮೆ ಔಷಧಿ ಯನ್ನು ಕೊಡುತ್ತಿರಬೇಕು. ಗರ್ಭಧರಿಸಿದ ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಜಂತುಹುಳುಗಳ ನಿವಾರಣಾ ಔಷಧಿ ಯನ್ನು…

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯಲು ಸೂಚನೆ
ಹಾಸನ

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯಲು ಸೂಚನೆ

September 7, 2018

ಹಾಸನ:ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಡಿ 14 ದವಸ-ಧಾನ್ಯಗಳು, ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳಿಗೆ ಬೆಂಬಲ ಬೆಲೆ ಘೋಷಿಸಿದ್ದು, ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮ ಸೂಚಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಖರೀದಿ ಕೇಂದ್ರಗಳು ಸ್ಥಾಪನೆ ಕುರಿತಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸರ್ಕಾರ ನಿಗದಿ ಪಡಿಸಿರುವ ದವಸ ಧಾನ್ಯಗಳ ಪೈಕಿ ಜಿಲ್ಲೆಯಲ್ಲಿ ಭತ್ತ, ರಾಗಿ ಮತ್ತು ಮೆಕ್ಕೆ ಜೋಳ…

ಬೆಂಗಳೂರು ರಸ್ತೆ ವಿಸ್ತರಣೆ ಮುನ್ನವೇ ಡಾಂಬರೀಕರಣ ಕಾಮಗಾರಿ ಪ್ರಾರಂಭ
ಹಾಸನ

ಬೆಂಗಳೂರು ರಸ್ತೆ ವಿಸ್ತರಣೆ ಮುನ್ನವೇ ಡಾಂಬರೀಕರಣ ಕಾಮಗಾರಿ ಪ್ರಾರಂಭ

September 7, 2018

ವಿವಿಧ ಸಂಘಟನೆಗಳಿಂದ ರಸ್ತೆತಡೆ, ಪ್ರತಿಭಟನೆ ಶ್ರವಣಬೆಳಗೊಳ:  ಪಟ್ಟಣದ ಬೆಂಗಳೂರು ರಸ್ತೆಯ ವಿಸ್ತರಣೆ ಕಾಮ ಗಾರಿ ಪ್ರಾರಂಭಿಸುವ ಮುನ್ನವೇ ಡಾಂಬರೀ ಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿ ರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಬುಧವಾರ ರಾಜ್ಯ ರೈತ ಸಂಘ, ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಪಟ್ಟಣದ ಬೆಂಗಳೂರು ವೃತ್ತದಲ್ಲಿ ಸಮಾ ವೇಶಗೊಂಡ ಪ್ರತಿಭಟನಕಾರರು ಪುರ ಸಭೆಯ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲೇ ರಸ್ತೆ ವಿಸ್ತರಣೆ ಮಾಡ ಬೇಕಿತ್ತು. ಆದರೆ,…

ವಿದ್ಯಾರ್ಥಿಗಳು ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಸಲಹೆ
ಹಾಸನ

ವಿದ್ಯಾರ್ಥಿಗಳು ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಸಲಹೆ

September 7, 2018

ಅರಸೀಕೆರೆ:  ‘ಶಿಕ್ಷಣ ಸಂಸ್ಕಾರ ವನ್ನು ನೀಡಿದರೆ, ಕ್ರೀಡೆ ದೈಹಿಕ ಮನೋ ಭಾವನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಕ್ರೀಡಾ ಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಹಾಸನ ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು. ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪಿಯು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು. ತಾಲೂಕು ಮಟ್ಟದ ಕ್ರೀಡೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಶಾಲೆಗೆ ಗೌರವವನ್ನು ತಂದುಕೊಟ್ಟಿದ್ದು, ಜಿಲ್ಲಾ ಮಟ್ಟದಿಂದ ರಾಜ್ಯ…

ರಸ್ತೆ ಕಾಮಗಾರಿ ಸ್ಥಗಿತ: ಸಾರ್ವಜನಿಕರ ಪರದಾಟ
ಹಾಸನ

ರಸ್ತೆ ಕಾಮಗಾರಿ ಸ್ಥಗಿತ: ಸಾರ್ವಜನಿಕರ ಪರದಾಟ

September 7, 2018

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ, ಶೀಘ್ರದಲ್ಲಿಯೇ ಪ್ರತಿಭಟನೆ ನಡೆಸುವ ಎಚ್ಚರಿಕೆ ಬೇಲೂರು:ಎಂಟು ತಿಂಗಳ ಹಿಂದೆ ಆರಂಭಗೊಂಡಿದ್ದ ಪಟ್ಟಣದ ಕನಕದಾಸರ ಬೀದಿಯ 4ನೇ ಅಡ್ಡರಸ್ತೆ ಕಾಮಗಾರಿ ಪುರಸಭೆ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಸ್ಥಗಿತಗೊಂಡಿದ್ದು ಬಡಾವಣೆಯ ನಿವಾಸಿ ಗಳ ಓಡಾಟಕ್ಕೆ ಅಡ್ಡಿಯಾಗಿದೆ. ಪುರಸಭೆಯ ಅನುದಾನದಲ್ಲಿ ಚರಂಡಿ ನಿರ್ಮಿಸುವುದು ಹಾಗೂ ರಸ್ತೆಯಲ್ಲಿನ ಚಪ್ಪಡಿಗಳ ತೆರವುಗೊಳಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ 8 ತಿಂಗಳ ಹಿಂದೆಯೇ ತೀರ್ಥಹಳ್ಳಿಯ ಅತೀಫ್ ಎನ್ನುವವರು ಗುತ್ತಿಗೆ ಪಡೆದಿದ್ದರು. ಈ ಸಂಬಂಧ ಕೆಲಸ ಆರಂಭಿಸಿದ ಅವರು…

ವಿವಿಧ ಜೈನಮಠಗಳ ಪಟ್ಟಾಚಾರ್ಯ ಶ್ರೀಗಳಿಗೆ ಅಭಿನಂದನೆ
ಹಾಸನ

ವಿವಿಧ ಜೈನಮಠಗಳ ಪಟ್ಟಾಚಾರ್ಯ ಶ್ರೀಗಳಿಗೆ ಅಭಿನಂದನೆ

September 7, 2018

ಶ್ರವಣಬೆಳಗೊಳ: ಇಲ್ಲಿನ ಚಾವುಂಡ ರಾಯ ಸಭಾ ಮಂಟಪದಲ್ಲಿ ಮಹಾಮಸ್ತ ಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ರಾಜ್ಯ ವಿವಿಧ ಜೈನಮಠಗಳ ಪಟ್ಟಾಚಾರ್ಯ ಸ್ವಾಮೀಜಿ ಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಜೈನಮಠದಿಂದ ಕೊಡಗು ಸಂತ್ರಸ್ತರಿಗೆ 11 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಲಾಯಿತು. ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ವರಿಗೆ ಶ್ರೀಗಳ ಸಮ್ಮುಖದಲ್ಲಿ `ಭಟ್ಟಾರಕ ಶಿರೋಮಣಿ’ ಬಿರುದು ನೀಡಿ ಗೌರವಿಸ ಲಾಯಿತು. ಕ್ಷೇತ್ರಕ್ಕೆ ಆಗಮಿಸಿದ ಎಲ್ಲಾ ಭಟ್ಟಾರಕರಿಗೆ `ಧರ್ಮ ರತ್ನಾಕರ’ ಬಿರುದು ನೀಡಿ ಗೌರವಿಸಲಾಯಿತು. ಸಮಾರಂಭಕ್ಕೂ…

ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಚುರುಕುಗೊಳಿಸಿ: ಹೆಚ್.ಡಿ.ದೇವೇಗೌಡ
ಹಾಸನ

ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಚುರುಕುಗೊಳಿಸಿ: ಹೆಚ್.ಡಿ.ದೇವೇಗೌಡ

September 5, 2018

ಹಾಸನ: ಎತ್ತಿನ ಹೊಳೆ ಸೇರಿದಂತೆ ಪ್ರಗತಿಯಲ್ಲಿರುವ ನೀರಾವರಿ ಯೋಜನೆ ಹಾಗೂ ಜಿಲ್ಲಾ ವ್ಯಾಪ್ತಿಯ ರೈಲ್ವೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಮಾಜಿ ಪ್ರಧಾನಿ, ಸಂಸದ ಹೆಚ್.ಡಿ. ದೇವೇಗೌಡ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಿಗೆ ವಶಪಡಿ ಸಿಕೊಳ್ಳುವ ಭೂಮಿಗೆ ಸಕಾಲದಲ್ಲಿ ರೈತ ರಿಗೆ ಪರಿಹಾರ ನೀಡಿ, ಕಾಮಗಾರಿಗಳನ್ನು ತ್ವರಿತವಾಗಿ…

ಅತಿವೃಷ್ಟಿ, ಅನಾವೃಷ್ಟಿಯಿಂದ ಅಂದಾಜು 300 ಕೋಟಿ ರೂ. ಹಾನಿ
ಹಾಸನ

ಅತಿವೃಷ್ಟಿ, ಅನಾವೃಷ್ಟಿಯಿಂದ ಅಂದಾಜು 300 ಕೋಟಿ ರೂ. ಹಾನಿ

September 5, 2018

ಬೇಲೂರು: ಈ ಬಾರಿಯ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾಲೂಕಿನಲ್ಲಿ ಕಾಫಿ, ಮೆಣಸು ಹಾಗೂ ಇನ್ನಿತರೆ ಬೆಳೆ ಸೇರಿದಂತೆ ರಸ್ತೆ, ಸೇತುವೆ ಸರ್ಕಾರಿ ಕಟ್ಟಡ, ಮನೆಗಳು ಹಾನಿಯಾಗಿ 300 ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದ್ದು, ನಷ್ಟ ಭರಿಸುವುದಕ್ಕೆ ಕೇಂದ್ರ, ರಾಜ್ಯ ಸರ್ಕಾರ ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಒತ್ತಾಯಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗ ಸಭೆ ನಡೆಸಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಭವಿಸಿದ ನಷ್ಟದ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು….

ಬಿಜೆಪಿ ಹೊರಗಿಡಲು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಪ್ರಯತ್ನ: ಹೆಚ್‍ಡಿಡಿ
ಹಾಸನ

ಬಿಜೆಪಿ ಹೊರಗಿಡಲು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಪ್ರಯತ್ನ: ಹೆಚ್‍ಡಿಡಿ

September 5, 2018

ಹಾಸನ: ಅತಂತ್ರವಾಗಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲಾಗುವುದು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ನಮ್ಮ ಪಕ್ಷ ಬಹುಮತ ಹೊಂದಿದೆ. ಮೈಸೂರು ಮತ್ತು ತುಮಕೂರಿನಲ್ಲಿ ಇಬ್ಬರೂ ಸೇರಿ ಬಿಜೆಪಿಯನ್ನು ಹೊರಗಿಡ ಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಬಗ್ಗೆ ಯಾರೊಂದಿಗೂ ಇನ್ನೂ ಮಾತುಕತೆ ನಡೆಸಿಲ್ಲ. ಸದ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿದೇಶಕ್ಕೆ ಹೋಗಿದ್ದಾರೆ. ಮೈಸೂರಲ್ಲಿ ಬಿಜೆಪಿಯವರನ್ನು ಹೊರಗಿಡಲು ನಾವು…

ಕಾಡಾನೆಗಳ ಪುಂಡಾಟ: ಬೆಳೆ ನಾಶ
ಹಾಸನ

ಕಾಡಾನೆಗಳ ಪುಂಡಾಟ: ಬೆಳೆ ನಾಶ

September 5, 2018

ಸಕಲೇಶಪುರ:  ತಾಲೂಕಿನ ವಿವಿದ ಗ್ರಾಮಗಳಲ್ಲಿ ಕಾಡಾನೆಗಳ ಪುಂಡಾಟ ದಿಂದ ಬೆಳೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ತಾಲೂಕು ಸುಳ್ಳಕ್ಕಿ ಗ್ರಾಮದ ಬೈರಯ್ಯ ಹಾಗೂ ಕಾಳಯ್ಯ ಅವರ ಕಾಫಿ ತೋಟದಲ್ಲಿ ಎರಡು ದಿನದಿಂದ ಬೀಡು ಬಿಟ್ಟಿರುವ ಸುಮಾರು 30 ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಇದರಿಂದ ಲಕ್ಷಾಂತರ ಮೌಲ್ಯದ ಕಾಫಿ, ಮೆಣಸು, ಬಾಳೆ, ತೆಂಗಿನ ಮರಗಳನ್ನು ನಾಶವಾಗಿವೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿ ರೈತರ ಭತ್ತದ ಗದ್ದೆಗಳಲ್ಲಿ ಬೆಳೆ ನಾಶ ಮಾಡಿವೆ. ಸುಳ್ಳಕ್ಕಿ,…

1 92 93 94 95 96 133
Translate »