ವಿವಿಧ ಜೈನಮಠಗಳ ಪಟ್ಟಾಚಾರ್ಯ ಶ್ರೀಗಳಿಗೆ ಅಭಿನಂದನೆ
ಹಾಸನ

ವಿವಿಧ ಜೈನಮಠಗಳ ಪಟ್ಟಾಚಾರ್ಯ ಶ್ರೀಗಳಿಗೆ ಅಭಿನಂದನೆ

September 7, 2018

ಶ್ರವಣಬೆಳಗೊಳ: ಇಲ್ಲಿನ ಚಾವುಂಡ ರಾಯ ಸಭಾ ಮಂಟಪದಲ್ಲಿ ಮಹಾಮಸ್ತ ಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ರಾಜ್ಯ ವಿವಿಧ ಜೈನಮಠಗಳ ಪಟ್ಟಾಚಾರ್ಯ ಸ್ವಾಮೀಜಿ ಗಳನ್ನು ಅಭಿನಂದಿಸಿ ಗೌರವಿಸಲಾಯಿತು.

ಜೈನಮಠದಿಂದ ಕೊಡಗು ಸಂತ್ರಸ್ತರಿಗೆ 11 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಲಾಯಿತು. ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ವರಿಗೆ ಶ್ರೀಗಳ ಸಮ್ಮುಖದಲ್ಲಿ `ಭಟ್ಟಾರಕ ಶಿರೋಮಣಿ’ ಬಿರುದು ನೀಡಿ ಗೌರವಿಸ ಲಾಯಿತು. ಕ್ಷೇತ್ರಕ್ಕೆ ಆಗಮಿಸಿದ ಎಲ್ಲಾ ಭಟ್ಟಾರಕರಿಗೆ `ಧರ್ಮ ರತ್ನಾಕರ’ ಬಿರುದು ನೀಡಿ ಗೌರವಿಸಲಾಯಿತು.

ಸಮಾರಂಭಕ್ಕೂ ಮುನ್ನ ಬೆಳಿಗ್ಗೆ ಪಟ್ಟಣದ ವಿದ್ಯಾನಂದ ನಿಲಯದಿಂದ ಸಮಸ್ತ ಶ್ರೀಗಳ ಮೆರವಣಿಗೆ ನಡೆಯಿತು. ಮೆರ ವಣಿಗೆಯಲ್ಲಿ ಮಂಗಳವಾದ್ಯ, ಚಿಟ್ಟಿಮೇಳ, ಪ್ರಭಾವನ ರಥಯಾತ್ರೆ ಮತ್ತು ಧರ್ಮಧ್ವಜಗಳನ್ನು ಹಿಡಿದ ಬಾಲಕರು ಹೆಜ್ಜೆ ಹಾಕಿದರು, ಹೂಗಳಿಂದ ಸಿಂಗರಿ ಸಲ್ಪಟ್ಟ ರಥದಲ್ಲಿ ಕುಳಿತ ಶ್ರೀಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀಮಠದ ಬಳಿ ಇರುವ ಚಾಮುಂಡ ರಾಯ ಸಭಾಮಂಟಪಕ್ಕೆ ಆಗಮಿಸಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು.

ಮಹಾರಾಷ್ಟ್ರದ ಕೊಲ್ಹಾಪುರ ಸಂಸ್ಥಾನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ತಮಿಳು ನಾಡಿನ ಮೇಲ್ ಚಿತ್ತಾಮೂರ್ ಜಿನಕಂಜಿ ಶ್ರೀಜೈನಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮಂಡ್ಯ ಜಿಲ್ಲೆ ಕಂಬದಹಳ್ಳಿ ಶ್ರೀಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಅರೆತಿಪ್ಪೂರು ಆರತಿಪುರ ಶ್ರೀ ಬಾಹುಬಲಿ ದಿಗಂಬರ ಜೈನ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ವಿಚಾರಪಟ್ಟ ಕ್ಷುಲ್ಲಕ ಶ್ರೀ ಸಿದ್ಧಾಂತಕೀರ್ತಿ ಸ್ವಾಮೀಜಿ ಇದ್ದರು.

Translate »