ಕೇರಳ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ
ಚಾಮರಾಜನಗರ

ಕೇರಳ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ

September 7, 2018

ಗುಂಡ್ಲುಪೇಟೆ:  ಪಟ್ಟಣವನ್ನು ಕೇರಳ ತ್ಯಾಜ್ಯ ಮತ್ತು ಫ್ಲೆಕ್ಸ್ ಹಾಗೂ ಬ್ಯಾನರ್ ಮುಕ್ತ ಪಟ್ಟಣವನ್ನಾಗಿಸ ಲಾಗುವುದು ಎಂದು ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ನೆರೆಯ ಕೇರಳದಿಂದ ಕಸ ಹಾಗೂ ಕ್ಲಿನಿಕಲ್ ತ್ಯಾಜ್ಯಗಳನ್ನು ಪಟ್ಟಣದ ಸಮೀಪದ ಜಮೀನಿನಲ್ಲಿ ಸುರಿಯುತ್ತಿರುವ ದಂಧೆಯ ಬಗ್ಗೆ ವಿಶೇಷ ನಿಗಾ ಇಡಲಾಗಿದೆ. ಪೆÇಲೀಸ್ ಇಲಾಖೆ, ಅರಣ್ಯ ಇಲಾಖೆ, ಪುರಸಭೆ ಮತ್ತು ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಈ ದಂಧೆ ಯನ್ನು ಸಂಪೂರ್ಣವಾಗಿ ತಡೆಯ ಲಾಗುವುದು ಎಂದರು.

ಪಟ್ಟಣದ ಅಂದವನ್ನು ಹಾಳು ಮಾಡು ತ್ತಿರುವ ಮತ್ತು ಕೆಲವೊಮ್ಮೆ ಅಶಾಂತಿಗೆ ಕಾರಣವಾಗುತ್ತಿರುವ ಫ್ಲೆಕ್ಸ್ ಮತ್ತು ಬ್ಯಾನ ರ್‍ಗಳನ್ನು ಹಾಕುವುದನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದ್ದು, ಅದನ್ನು ಮೀರಿ ಫ್ಲೆಕ್ಸ್ ಹಾಕುವವರ ವಿರುದ್ಧ ದೂರು ದಾಖ ಲಿಸಲಾಗುವುದು ಎಂದು ಎಚ್ಚರಿಸಿದರು.

ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿ ಮಾರಾಟ ಮಾಡುವವರ ವಿರುದ್ಧ ಶಿಸ್ತುಕ್ರಮಕ್ಕೆ ಪೆÇಲೀಸ್ ಇಲಾಖೆಯೊಂ ದಿಗೆ ಪುರಸಭೆ ಸಿದ್ಧವಾಗಿದ್ದು, ಪಿ.ಒ.ಪಿ. ಗಣಪತಿ ಮಾರಾಟಗಾರರ ವಿರುದ್ಧ ಪ್ರಕ ರಣ ದಾಖಲಿಸಲಾಗುವುದು ಎಂದರು.
ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವ ಜನಿಕರಿಗೆ ತೊಂದರೆಯಾಗದಂತೆ ಗಣಪತಿ ಯನ್ನು ಪ್ರತಿಷ್ಠಾಪಿಸಬೇಕು. ವಿಷಕಾರಿ ರಾಸಾ ಯನಿಕ, ಬಣ್ಣದ ಲೇಪನವುಳ್ಳ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಮಾಡಿದ ಗಣಪತಿ ವಿಗ್ರಹಗಳ ಮಾರಾಟ ಹಾಗೂ ಬಳಕೆ ಯನ್ನು ನಿಷೇಧಿಸಲಾಗಿದ್ದು, ಪರಿಸರ ಸ್ನೇಹಿ ಜೇಡಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ವಿಗ್ರಹಗಳನ್ನು ಬಳಸಬೇಕು. ಎಲ್ಲರೂ ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿ ರಲು ಸಹಕಾರ ನೀಡಬೇಕು ಎಂದರು.

ವೃತ್ತ ನಿರೀಕ್ಷಕ ಬಾಲಕೃಷ್ಣ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಕೇರಳ ತ್ಯಾಜ್ಯ ಸುರಿಯುತ್ತಿರುವ ಕಿಡಿಗೇಡಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಪುರ ಸಭೆ ಸಹಯೋಗದೊಂದಿಗೆ ಸಿದ್ಧವಾಗಿ ದ್ದೇವೆ. ಇದಲ್ಲದೇ ಫ್ಲೆಕ್ಸ್ ಮತ್ತು ಬ್ಯಾನರ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಪಿ.ಒ.ಪಿ.ಗಣಪತಿ ಮಾರಾಟ ಮಾಡಿದರೇ ದಾಳಿ ನಡೆಸಿ ಮೂರ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಸ ಸಾಗಣೆ ಮಾಡು ವವರ ವಿರುದ್ಧ ಮತ್ತು ತ್ಯಾಜ್ಯ ವಿಲೇವಾರಿ ಮಾಡಿಸಿಕೊಳ್ಳುವ ಸ್ಥಳೀಯ ಜಮೀನಿನ ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳ ಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯ ಸುರೇಶ್‍ಕುಮಾರ್, ಪುಷ್ಪಾವೆಂಕಟೇಶ್, ಮುಖ್ಯಾಧಿಕಾರಿ ಎ.ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಕರವೇ ತಾಲೂಕು ಅಧ್ಯಕ್ಷ ಸುರೇಶ್ ನಾಯ್ಕ, ಪದಾಧಿಕಾರಿಗಳಾದ ಜಗದೀಶ್, ಶ್ರೀನಿವಾಸ್, ನಾಗರಾಜು, ಉಸ್ಮಾನ್, ಕಾವಲು ಪಡೆಯ ಅಧ್ಯಕ್ಷ ಅಬ್ದುಲ್ ಮಾಲೀಕ್, ಪುರಸಭೆ ಆರೋಗ್ಯ ನಿರೀಕ್ಷಕ ಗೋಪಿ ಸೇರಿದಂತೆ ಹಲವರು ಇದ್ದರು.

Translate »