ಬೆಂಗಳೂರು ರಸ್ತೆ ವಿಸ್ತರಣೆ ಮುನ್ನವೇ ಡಾಂಬರೀಕರಣ ಕಾಮಗಾರಿ ಪ್ರಾರಂಭ
ಹಾಸನ

ಬೆಂಗಳೂರು ರಸ್ತೆ ವಿಸ್ತರಣೆ ಮುನ್ನವೇ ಡಾಂಬರೀಕರಣ ಕಾಮಗಾರಿ ಪ್ರಾರಂಭ

September 7, 2018

ವಿವಿಧ ಸಂಘಟನೆಗಳಿಂದ ರಸ್ತೆತಡೆ, ಪ್ರತಿಭಟನೆ
ಶ್ರವಣಬೆಳಗೊಳ:  ಪಟ್ಟಣದ ಬೆಂಗಳೂರು ರಸ್ತೆಯ ವಿಸ್ತರಣೆ ಕಾಮ ಗಾರಿ ಪ್ರಾರಂಭಿಸುವ ಮುನ್ನವೇ ಡಾಂಬರೀ ಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿ ರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಬುಧವಾರ ರಾಜ್ಯ ರೈತ ಸಂಘ, ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು ವೃತ್ತದಲ್ಲಿ ಸಮಾ ವೇಶಗೊಂಡ ಪ್ರತಿಭಟನಕಾರರು ಪುರ ಸಭೆಯ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲೇ ರಸ್ತೆ ವಿಸ್ತರಣೆ ಮಾಡ ಬೇಕಿತ್ತು. ಆದರೆ, ಆ ವೇಳೆ ಸಮಯದ ಅಭಾವದ ನೆಪವೊಡ್ಡಿ ಕಾಮಗಾರಿಯನ್ನು ಮುಂದೂಡಲಾಯಿತು. ಆದರೆ ಈಗಲೂ ಬೆಂಗಳೂರು ರಸ್ತೆ ವಿಸ್ತರಣೆ ಮಾಡದೆ ಡಾಂಬ ರೀಕರಣ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯ ದರ್ಶಿ ಆನೆಕೆರೆ ರವಿ ಮಾತನಾಡಿ, ರಸ್ತೆ ವಿಸ್ತರಣೆ ಮಾಡದೆ ಏಕಾಏಕಿ ಚರಂಡಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾ ಅನಿವಾಸಿ ಸಂಘದ ಅಧ್ಯಕ್ಷ ಎ.ಎಸ್.ಕೆಂಪೇಗೌಡ ಮಾತನಾಡಿ, ಮಹಾಮಸ್ತಕಾಭಿಷೇಕದ ನಿಮಿತ್ತ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ರಸ್ತೆ ವಿಸ್ತರಣೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಮೀಸೆ ಮಂಜೇಗೌಡ, ಬಿಜೆಪಿ ಮುಖಂಡ ವಾಸುದೇವ, ಮುಖಂಡರಾದ ಪರಮ ಗಂಗಾಧರ, ಮಹೇಂದ್ರ, ಸತೀಶ್, ಕೃಷ್ಣ ಮೂರ್ತಿ, ಯೋಗೇಶ್, ಶಂಕರೇಗೌಡ, ನಾಗೇಗೌಡ, ಭಾಗ್ಯಮ್ಮ ಪಾಲ್ಗೊಂಡಿದ್ದರು

Translate »