ವಿದ್ಯಾರ್ಥಿಗಳು ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಸಲಹೆ
ಹಾಸನ

ವಿದ್ಯಾರ್ಥಿಗಳು ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಸಲಹೆ

September 7, 2018

ಅರಸೀಕೆರೆ:  ‘ಶಿಕ್ಷಣ ಸಂಸ್ಕಾರ ವನ್ನು ನೀಡಿದರೆ, ಕ್ರೀಡೆ ದೈಹಿಕ ಮನೋ ಭಾವನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಕ್ರೀಡಾ ಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಹಾಸನ ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪಿಯು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು. ತಾಲೂಕು ಮಟ್ಟದ ಕ್ರೀಡೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಶಾಲೆಗೆ ಗೌರವವನ್ನು ತಂದುಕೊಟ್ಟಿದ್ದು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೂ ಆಯ್ಕೆಯಾಗುವಂತಾ ಗಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಲಿಂಗರಾಜು ಮಾತನಾಡಿ, ಶಾಲೆಯ ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಬಾಲಕರ ವಾಲಿಬಾಲ್‍ನಲ್ಲಿ ಪ್ರಥಮ, 400 ಮೀ. ರೀಲೆ ಪ್ರಥಮ, ಶಾಟ್‍ಪುಟ್ ಪ್ರಥಮ, ಡಿಸ್ಕಸ್ ಪ್ರಥಮ, ಜಾಲ್ವಿನ್ ಪ್ರಥಮ, 100 ಮೀ ಓಟ ದ್ವಿತೀಯ, 100 ಮೀ. ರಿಲೆ ದ್ವಿತೀಯ, ಎತ್ತರ ಜಿಗಿತ ದ್ವಿತೀಯ, 1500 ಮೀ. ಓಟ ದ್ವಿತೀಯ, 200 ಮೀ ಓಟ ತೃತೀಯ ಬಹುಮಾನ ಪಡೆದು ಶಾಲೆಗೆ ಗೌರವ ತಂದಿದ್ದಾರೆ ಎಂದರು.

Translate »