ಡಣಾಯಕನಹಳ್ಳಿಯಲ್ಲಿ ಗ್ರಾಮಿಣ ಕೃಷಿ ಕಾರ್ಯಾನುಭವ ಶಿಬಿರ: ಹೈನುಗಾರಿಕೆಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಸಲಹೆ
ಹಾಸನ

ಡಣಾಯಕನಹಳ್ಳಿಯಲ್ಲಿ ಗ್ರಾಮಿಣ ಕೃಷಿ ಕಾರ್ಯಾನುಭವ ಶಿಬಿರ: ಹೈನುಗಾರಿಕೆಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಸಲಹೆ

September 7, 2018

ಹಾಸನ: ಹೈನುಗಾರಿಕೆಯಲ್ಲಿ ಮೊದಲು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಡಾ.ಮಂಜುನಾಥ್ ರೈತರಿಗೆ ಸಲಹೆ ನೀಡಿದರು.

ತಾಲೂಕಿನ ಡಣಾಯಕನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯದ ಹಾಸನದ ಅಂತಿಮ ಬಿಎಸ್‍ಸಿ ಕೃಷಿ ವಿದ್ಯಾರ್ಥಿಗಳ ಗ್ರಾಮಿಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪಶು ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತ ನಾಡಿದರು.

ಜಾನುವಾರುಗಳಲ್ಲಿ ಜಂತುಹುಳುಗಳ ನಿವಾರಣೆಗೆ 6 ತಿಂಗಳಿಗೊಮ್ಮೆ ಔಷಧಿ ಯನ್ನು ಕೊಡುತ್ತಿರಬೇಕು. ಗರ್ಭಧರಿಸಿದ ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಜಂತುಹುಳುಗಳ ನಿವಾರಣಾ ಔಷಧಿ ಯನ್ನು ಕೊಡಬಾರದು. ಗರ್ಭಧರಿಸಿದ ಜಾನು ವಾರುಗಳ ಉತ್ತಮ ಬೆಳವಣಿಗೆಗೆ ಮೊಳಕೆ ಯೊಡೆದ ದ್ವಿದಳದಾನ್ಯಗಳನ್ನು ನೀಡು ವುದು ಒಳಿತು. ಕುರಿ ಸಾಕಾಣಿಕೆಯಲ್ಲಿ ಹಂತ ಹಂತವಾಗಿ ಉಣ್ಣೆಯನ್ನು ತೆಗೆಯುತ್ತಿ ರಬೇಕು. ಹಾಲು ನೀಡುವ ಹಸುಗಳನ್ನು ರೋಗಗಳಿಂದ ಮುಕ್ತವಾಗಿರಿಸಬೇಕು. ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿರಿಸಿಕೊಳ್ಳಬೇಕು. ಹಸುವಿಗೆ ಉತ್ತಮವಾದ ಮೇವು ಹಾಗೂ ಹಿಂಡಿ ಗಳನ್ನು ಒದಗಿಸಬೇಕು ಎಂದರು.

ಹಸುವಿನ ಮೇವಿನ ಬೆಳೆಗಳು ಶೇ. 50 ರಷ್ಟು ಹೂವು ಬಿಟ್ಟ ನಂತರ ಕಟಾವು ಮಾಡಿ, ಮೇವು ಹಾಕುವ ಮುನ್ನ 1-2 ಇಂಚು ಉದ್ದದಷ್ಟು ಕತ್ತರಿಸಬೇಕು. 1-2 ಚಮಚ ಅಡುಗೆ ಸೋಡವನ್ನು ಹಿಂಡಿಯ ಜೊತೆ ಹಾಕಿದರೆ ಹಾಲಿನ ಡಿಗ್ರಿಯ ಸಮಸ್ಯೆಯನ್ನು ಸಮತೂಗಿಸಬಹುದು ಎಂದು ತಿಳಿಸಿದರು.

ಶಿಬಿರದಲ್ಲಿ ಗ್ರಾಮದ ರಾಜಮ್ಮ ಎಂಬು ವವರು ಸಾಕಿದ ಕುರಿಯು ನಾಯಿ ದಾಳಿ ಯಿಂದ ಗಾಯಗೊಂಡು ಹೊಟ್ಟೆಯಲ್ಲಿ ಗೆಡ್ಡೆಯು ಬೆಳೆದು ಸಾಯುವ ಸ್ಥಿತಿಯ ಲ್ಲಿತ್ತು. ಕುರಿಯನ್ನು 3 ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮಾಡಿ ಗೆಡ್ಡೆಯನ್ನು ತೆಗೆದರು.
ಉಳಿದಂತೆ ರೈತರು ಕರೆತಂದ ದನ, ಕರು, ಎಮ್ಮೆ, ಕುರಿ, ಆಡು ಮತ್ತು ನಾಯಿ ಗಳಿಗೆ ವೈದರು ಹಾಗೂ ವಿದ್ಯಾರ್ಥಿಗಳ ತಂಡದಿಂದ ಚಿಕಿತ್ಸಾ ಶಿಬಿರವು ಯಶಸ್ವಿ ಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಮಂಜುನಾಥ, ಡಾ. ರಂಗನಾಥ, ವಿದ್ಯಾರ್ಥಿಗಳು, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್.ದೇವ ಕುಮಾರ್, ಡಾ.ಒ.ಆರ್.ನಟರಾಜ, ಡಾ.ಆರ್. ವಿನಯಕುಮಾರ್, ರೈತರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Translate »