ಜೀಪು ಡಿಕ್ಕಿ; ಓರ್ವ ಸಾವು
ಕೊಡಗು

ಜೀಪು ಡಿಕ್ಕಿ; ಓರ್ವ ಸಾವು

September 7, 2018

ಮಡಿಕೇರಿ: ಚಾಲಕನ ನಿಯಂ ತ್ರಣ ಕಳೆದುಕೊಂಡು ಜೀಪೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ನಗರದ ದೇಚೂರು ರಸ್ತೆಯ ಇಳಿ ಜಾರಿನಲ್ಲಿ ವೇಗವಾಗಿ ಬಂದ ಜೀಪು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ತೆರಳುತ್ತಿದ್ದ ಪಶ್ಚಿಮ ಬಂಗಾಳ ಮೂಲಕ ತೌಫಲ್ (45) ಎಂಬುವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ತೌಫಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಜೀಪು ಮಗುಚಿ ಕೊಂಡಿದೆ. ಜೀಪು ಚಾಲಕನ ವಿರುದ್ದ ಅಜಾಗರೂಕತೆಯ ಚಾಲನೆ ಪ್ರಕರಣ ದಾಖಲಿಸಿ ಕೊಂಡಿರುವ ನಗರ ಸಂಚಾರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »