ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವಕ್ಕೆ ನಿರ್ಧಾರ
ಕೊಡಗು

ವಿರಾಜಪೇಟೆಯಲ್ಲಿ ಸರಳ ರೀತಿ ಗಣೇಶೋತ್ಸವಕ್ಕೆ ನಿರ್ಧಾರ

September 7, 2018

ವಿರಾಜಪೇಟೆ: ವಿರಾಜಪೇಟೆ ಯಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಗೌರಿ-ಗಣೇ ಶೊತ್ಸವನ್ನು ಸರಳ ರೀತಿಯಾಗಿ ಭಕ್ತಿ ಮತ್ತು ಶಾಂತಿಯುತವಾಗಿ ಆಚರಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹ ಕರಿಸಬೇಕು ಎಂದು ವಿರಾಜಪೇಟೆ ಡಿವೈ ಎಸ್‍ಪಿ ನಾಗಪ್ಪ ಹೇಳಿದರು.

ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡ ಹಬ್ಬದ ಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಪುರಭವನದಲ್ಲಿ ಗಣಪತಿ ಪ್ರತಿಷ್ಠಾಪನ ಸಮಿತಿ ಗಳು ಹಾಗೂ ಇಲಾಖೆಗಳ ಅಧಿ ಕಾರಿಗಳಿಗೆ ಆಯೋಜಿಸಲಾಗಿದ್ದ ಸಭೆ ಯಲ್ಲಿ ನಾಗಪ್ಪ ಅವರು ಮಾತನಾಡಿ, ಪ್ರತಿ ವರ್ಷವು ಗೌರಿ-ಗಣೇಶೋತ್ಸವವನ್ನು ವಿರಾಜಪೇಟೆಯಲ್ಲಿ ಅದ್ದೂರಿಯಿಂದ ಆಚ ರಿಸಿಕೊಂಡು ಬರುತ್ತಿದ್ದು ಆದರೆ ಕಳೆದ ತಿಂಗಳು ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಆಡಂಬರದ ಉತ್ಸವ ಬಿಟ್ಟು, ಅರ್ಥ ಪೂರ್ಣವಾಗಿ ಹಬ್ಬ ವನ್ನು ಆಚರಿಸುವುದ ರೊಂದಿಗೆ ಕೊಡಗಿನ ಸಂತ್ರಸ್ತರಿಗೆ ಸಹಾಯ ಧನ ನೀಡುವಂತಾಗ ಬೇಕು ಎಂದರು. ಒಕ್ಕೂಟದ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ ಮಾತನಾಡಿ, ಶತಮಾನಗಳಿಂದಲೂ ವೀರಾಜಪೇಟೆ ಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆ ಯಿಂದ ಆಚರಿಸಿಕೊಂಡು ಬರು ತ್ತಿದ್ದೆವು. ಈ ವರ್ಷ ಪೂಜೆ ಸೇವೆಗಳಿಗೆ ಕಡಿಮೆ ಮಾಡೋದಿಲ್ಲ. ಆದರೆ ಉತ್ಸವವನ್ನು ಸರಳವಾಗಿ ಆಚರಿಸಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ದಿಂದಾಗಿ ಆಸ್ತಿಯನ್ನು ಕಳೆದು ಕೊಂಡಿರುವ ಸಂತ್ರಸ್ತರಿಗೆ ಉಳಿದ ಹಣವನ್ನು ನೀಡ ಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಬಸವೇಶ್ವರ ದೇವಾಲ ಯದ ಗೌರಿ-ಗಣೇಶೋತ್ಸವ ಸಮಿತಿಯ ಪುಷ್ಪರಾಜು ಮಾತನಾಡಿ, ಈ ವರ್ಷ ಗಣೇ ಶೋತ್ಸವದ ಕಾರ್ಯಕ್ರಮಗಳಿಗಾಗಿ ಮೂರು ತಿಂಗಳ ಮುಂಚಿತವಾಗಿಯೇ ಮುಂಗಡ ಹಣವನ್ನು ನೀಡಲಾಗಿದೆ. ಆದರೂ ಈ ವರ್ಷ ರಸಮಂಜರಿ, ಸಾಂಸ್ಕøತಿಕ ಎಲ್ಲಾ ಕಾರ್ಯಕ್ರಮಗಳನ್ನು ಕಡಿಮೆ ಮಾಡು ವುದಾಗಿ ಹೇಳಿದರು.

ರಚನ್ ಮೇದಪ್ಪ ಮಾತನಾಡಿ, ಕಳೆದ ತಿಂಗಳು ಸುರಿದ ಮಹಾಮಳೆಯಿಂದಾಗಿ ಎಲ್ಲಾ ರಸ್ತೆಗಳು ಹೊಂಡ ಗುಂಡಿಗಳಾ ಗಿದ್ದು, ವಾಹನ ಸಂಚಾರವಿರಲಿ. ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಗಣೇಶೋತ್ಸ ವಕ್ಕಾದರೂ ಲೋಕೋಪಯೋಗಿ ಇಲಾ ಖೆಯ ರಸ್ತೆಗಳನ್ನು ಸರಿಪಡಿಸಬೇಕು ಎಂಬ ಮನವಿಗೆ ಉಳಿದ ಕೆಲವು ಸಮಿತಿಯವರು ಕಳೆದ ವರ್ಷನು ರಸ್ತೆ ಸರಿಪಡಿಸುವುದಾಗಿ ಹೇಳಿ ಕೊನೆಗಳಿಗೆಯಲ್ಲಿ ಗುಂಡಿಗಳಿಗೆ ಕಲ್ಲುಹಾಕಿ ಹೋದರು. ಈ ವರ್ಷ ಹಾಗೆ ಆಗದಂತೆ ಎಚ್ಚರ ವಹಿಸಬೇಕು. ಇನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿದರು.

ಸೆಸ್ಕಾಂ ಇಲಾಖೆಯ ವಿರಾಜಪೇಟೆ ವಿಭಾ ಗದ ಸಹಾಯಕ ಕಾರ್ಯಪಾಲಕ ಸುರೇಶ್ ಮಾತನಾಡಿ, ಗಣಪತಿ ಪ್ರತಿಷ್ಠಾಪನೆ ಮಾಡವ ಸಮಿತಿಗಳು ಕಚೇರಿಯಿಂದ ಅನುಮತಿ ಪಡೆ ದುಕೊಳ್ಳಬೇಕು. ಹಾಗೂ ವಿದ್ಯುತ್ ಸಂಪರ್ಕ ನೀಡಿದಾಗ ಯಾವುದೇ ಘಟನೆಗಳು ನಡೆಯ ದಂತೆ ಸಮಿತಿಗಳು ಎಚ್ಚರ ವಹಿಸಬೇಕು ಎಂದರು. ಪಟ್ಟಣ ಪಂಚಾಯಿತಿಯ ಸುಧಾರಾಣಿ ಮಾತ ನಾಡಿ, ಪಟ್ಟಣ ವ್ಯಾಪ್ತಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅನ್ನದಾನ ಮಾಡುವವರು ಸ್ವಚ್ಚತೆಯನ್ನು ಕಾಪಾಡುವಂತೆಯು ಕಸದ ತೊಟ್ಟಿಗಳು ಅವಶ್ಯವಿದಲ್ಲಿ ಪಂಚಾಯಿತಿ ಯನ್ನು ಸಂಪ ರ್ಕಿಸುವಂತೆ ತಿಳಿಸಿದರು.

ಸರ್ಕಲ್ ಇನ್ಸ್‍ಪ್ಯೆಕ್ಟರ್ ಕುಮಾರ್ ಆರಾಧ್ಯ ಮಾತನಾಡಿ, ಪಟ್ಟಣದಲ್ಲಿ ಕಿರಿದಾದ ರಸ್ತೆ ಇದ್ದು ಗಣೇಶ ಸಮಿತಿಯ ಮಂಟಪಗಳು ಸರತಿ ಸಾಲಿನಲ್ಲಿ ಸಾಗುವಾಗ ಯಾವುದೇ ಘಟನೆಗಳು ನಡೆಯದಂತೆ ಸಮಿತಿ ಸದ ಸ್ಯರು ಎಚ್ಚರ ವಹಿಸಬೇಕು ಎಂದರು.
ವೇದಿಕೆಯಲ್ಲಿ ನಗರ ಮತ್ತು ಗ್ರಾಮಾಂ ತರ ಠಾಣಾಧಿಕಾರಿಗಳಾದ ಸಂತೋಷ್ ಕಶ್ಯಪ್, ಸುರೇಶ್ ಬೋಪಣ್ಣ, ಸಾರ್ವಜನಿಕ ಆಸ್ಪತ್ರೆಯ ಧನಲಕ್ಷ್ಮಿ ಮುಂತಾದವರು ಉಪ ಸ್ಥಿತರಿದ್ದರು. ನಾಡ ಹಬ್ಬ ಒಕ್ಕೂಟದ ಸಹ ಕಾರ್ಯದರ್ಶಿ ವಿ.ಆರ್.ರಜನಿಕಾಂತ್ ಸ್ವಾಗ ತಿಸಿದರೆ, ಖಜಾಂಚಿ ಬಿ.ಎಸ್.ಪ್ರದೀಪ್ ರೈ ವಂದಿಸಿದರು. ಸಭೆಯಲ್ಲಿ 19 ಗಣಪತಿ ಸೇವಾಸಮಿತಿಯ ಸದಸ್ಯರು ಭಾಗವಹಿಸಿದ್ದರು.

Translate »