ಕೊಡಗು

ದ್ವಿರಾಷ್ಟ್ರ ಕರಾಟೆ ಚಾಂಪಿಯನ್‍ಶಿಪ್: ಕೊಡಗಿನ ಮೂವರಿಗೆ ಪ್ರಶಸ್ತಿ
ಕೊಡಗು

ದ್ವಿರಾಷ್ಟ್ರ ಕರಾಟೆ ಚಾಂಪಿಯನ್‍ಶಿಪ್: ಕೊಡಗಿನ ಮೂವರಿಗೆ ಪ್ರಶಸ್ತಿ

November 18, 2018

ಪೊನ್ನಂಪೇಟೆ: ದ್ವಿರಾಷ್ಟ್ರ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಂಡಿದ್ದ ಕೊಡಗಿನ ಮೂವರು ಯುವ ಕರಾಟೆ ಪಟುಗಳಿಗೆ ಪ್ರಶಸ್ತಿ ಲಭಿಸಿದೆ.ಇತ್ತೀಚೆಗೆ ಕೇರಳದ ಕಲ್ಲಿಕೋಟೆ ಸಮೀ ಪದ ನಾದಪುರಂನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2ನೇ ಇಂಡೋ- ಶ್ರೀಲಂಕ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಆಲೀರ ಯು. ನಾಫೀಯಾ, ದುದ್ದಿಯಂಡ ಹೆಚ್. ಉವೈಸ್ ಮತ್ತು ದುದ್ದಿಯಂಡ ಹೆಚ್. ಮುರ್ಶಿದಾ ಅವರ ಅತ್ಯುತ್ತಮ ಸಾಧನೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ದೊರೆತಿದೆ. ಚಾಂಪಿಯನ್‍ಶಿಪ್‍ನ 32ರಿಂದ 35 ಕೆ.ಜಿ. ಯವರೆಗಿನ ವಿಭಾಗದಲ್ಲಿ ಆಲೀರ ನಾಫೀಯಾ ಪ್ರಥಮ…

ಶ್ರೀ ಜಗದಾತ್ಮಾನಂದಜೀ ಪಂಚಭೂತಗಳಲ್ಲಿ ಲೀನ
ಕೊಡಗು

ಶ್ರೀ ಜಗದಾತ್ಮಾನಂದಜೀ ಪಂಚಭೂತಗಳಲ್ಲಿ ಲೀನ

November 17, 2018

ಮಡಿಕೇರಿ: ಹಲವು ವರ್ಷಗಳಿಂದ ಭಗವಂತನ ಸಾನಿಧ್ಯವೇ ದೊರೆತ ಆನಂದದಲ್ಲಿದ್ದ ಪೊನ್ನಂಪೇಟೆ ರಾಮ ಕೃಷ್ಣ ಶಾರದಾಶ್ರಮ ಸ್ವಾಮಿ ಜಗದಾತ್ಮನಂದಜಿ ಅವರು ಸಹಸ್ರಾರು ಭಕ್ತಾಧಿಗಳ ಅಶ್ರುತರ್ಪಣೆಯ ನಡುವೆ ಪಂಚಭೂತಗಳಲ್ಲಿ ಲೀನವಾದರು. ಬದುಕಲು ಕಲಿಯಿರಿ ಕೃತಿಯ ಮೂಲಕ ಯುವ ಸಮುದಾಯವನ್ನು ಬಡಿದೆಚ್ಚರಿಸಿ ಸ್ಫೂರ್ತಿಯಾಗಿಸಿದ್ದ ಸ್ವಾಮೀಜಿ ದೈವಾಧೀನರಾಗಿದ್ದು ಪೊನ್ನಂಪೇಟೆ ಪಟ್ಟಣ್ಣವನ್ನೇ ದುಖಃದ ಮಡುವಿಗೆ ತಳ್ಳಿತ್ತು. ಶುಕ್ರವಾರ ಬೆಳಿಗಿನಿಂದಲೇ ಪೊನ್ನಂಪೇಟೆ, ಗೋಣಿಕೊಪ್ಪ ಪಟ್ಟಣ್ಣಗಳು ಮೋಡ ಕವಿದ ವಾತಾವರಣದಿಂದ ಪ್ರಕೃತಿ ಕೂಡ ಸ್ವಾಮಿಯ ಅಗಲಿಕೆಗೆ ಮಿಡಿದು ಕಂಬನಿ ಹರಿಸಿತ್ತು. ಸನ್ಯಾಸಿ ಜೀವನ ಪ್ರಾರಂಭಿಸಿ 58 ವರ್ಷಗಳ…

ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಪಪಂ ಸದಸ್ಯರು
ಕೊಡಗು

ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಪಪಂ ಸದಸ್ಯರು

November 17, 2018

ಕುಶಾಲನಗರ: ಇಲ್ಲಿನ ಪ.ಪಂ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಸದಸ್ಯರ ನಿಯೋಗವು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ನೇತೃತ್ವದಲ್ಲಿ ಪ.ಪಂ. ಸದಸ್ಯರಾದ ಪ್ರಮೋದ್ ಮುತ್ತಪ್ಪ, ಸುಂದರೇಶ್, ಜಯಲಕ್ಷ್ಮಿ, ಜಯಲಕ್ಷಮ್ಮ, ಹಾಗೂ ಕಾಂಗ್ರೆಸ್ ಮುಖಂಡರು ಬೆಂಗ ಳೂರಿಗೆ ತೆರಳಿದ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು…

ಜೈಲು ಸೇರಿದ ಮಾಯಾದೇವಿ ಗಲಗಲಿ
ಕೊಡಗು

ಜೈಲು ಸೇರಿದ ಮಾಯಾದೇವಿ ಗಲಗಲಿ

November 17, 2018

ಮಡಿಕೇರಿ: ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹದಳದಿಂದ ಬಂಧಿಸಲ್ಪಟ್ಟ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಅವರು ತನಗೆ ಕಡಿಮೆ ರಕ್ತದೊತ್ತಡ ಇರುವುದಾಗಿ ಹೇಳಿ ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ಗುಣಮುಖ ಆಗಿರುವುದನ್ನು ಧೃಡಪಡಿಸಿಕೊಂಡ ಎಸಿಬಿ ಅಧಿಕಾರಿಗಳ ತಂಡ ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಪರಾಮರ್ಶೆ ನಡೆಸಿದರು. ಮಾಯಾದೇವಿ ಗಲಗಲಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದನ್ನು ಖಚಿತಪಡಿಸಿ ಕೊಂಡ ಅಧಿಕಾರಿಗಳ ತಂಡ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜಿಲ್ಲಾ…

ಕೊಟ್ಟಗೇರಿಯಲ್ಲಿ ಹುಲಿ ಹೆಜ್ಜೆ ಪತ್ತೆ ಗ್ರಾಮಸ್ಥರಲ್ಲಿ ಆತಂಕ
ಕೊಡಗು

ಕೊಟ್ಟಗೇರಿಯಲ್ಲಿ ಹುಲಿ ಹೆಜ್ಜೆ ಪತ್ತೆ ಗ್ರಾಮಸ್ಥರಲ್ಲಿ ಆತಂಕ

November 17, 2018

ಗೋಣಿಕೊಪ್ಪಲು: ಕೊಟ್ಟಗೇರಿ ಗ್ರಾಮದ ಗದ್ದೆಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಅರಮಣಮಾಡ ಸತೀಶ್ ದೇವಯ್ಯ ಎಂಬುವರ ಗದ್ದೆಯಲ್ಲಿ ಕಳೆದ ರಾತ್ರಿ ಹುಲಿ ಓಡಾಟ ನಡೆಸಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ಹಲವು ತಿಂಗಳಿನಿಂದ ಈ ಭಾಗದಲ್ಲಿ ಹುಲಿಯ ಓಡಾಟ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಾ ಬರು ತ್ತಿದೆ. ಮತ್ತೆ ಹೆಜ್ಜೆ ಗುರುತು ಪತ್ತೆಯಾ ಗಿರುವುದು ಗ್ರಾಮಸ್ಥರಲ್ಲಿ ಭಯ ಮೂಡಿ ಸಿದೆ. ಈ ಬಗ್ಗೆ ಪೊನ್ನಂಪೇಟೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಬಾಲ್ಯಾವಸ್ಥೆಯಲ್ಲಿ ಎಚ್ಚರ ಅಗತ್ಯ
ಕೊಡಗು

ಬಾಲ್ಯಾವಸ್ಥೆಯಲ್ಲಿ ಎಚ್ಚರ ಅಗತ್ಯ

November 17, 2018

ವಿರಾಜಪೇಟೆ: ಮಕ್ಕಳು ಬಾಲ್ಯಾವಸ್ಥೆಯ ಸುಮಧುರ ಕ್ಷಣಗಳನ್ನು ಕಳೆಯುವಾಗ ಎಚ್ಚರಿಕೆ ವಹಿಸುವುದು ಅಗತ್ಯ, ಮಕ್ಕಳಿಗಾಗಿ ವಿಶೇಷ ಕಾನೂನುಗಳಿವೆ. ಅದನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ ವಿರಾಜಪೇಟೆ, ಮಕ್ಕಳ ಸಹಾಯ ವಾಣಿ 1098 ಸಂಯುಕ್ತ ಆಶ್ರಯದಲ್ಲಿ ”ಚೈಲ್ಡ್ ಲೈನ್ ಸೇ ದೋಸ್ತಿ” ಮತ್ತು ಬಾಲ್ಯಾ ವಸ್ಥೆ ಕಾನೂನುಗಳು ಹಾಗೂ ಮಕ್ಕಳ ನಿಗಾ ಕೇಂದ್ರಗಳ ಬಗ್ಗೆ ವಿರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ…

ಶ್ರೀರಂಗಪಟ್ಟಣ ಬಳಿ ಅಪಘಾತ; ಸುಂಟಿಕೊಪ್ಪ ವ್ಯಕ್ತಿಗೆ ಗಾಯ
ಕೊಡಗು

ಶ್ರೀರಂಗಪಟ್ಟಣ ಬಳಿ ಅಪಘಾತ; ಸುಂಟಿಕೊಪ್ಪ ವ್ಯಕ್ತಿಗೆ ಗಾಯ

November 16, 2018

ಸುಂಟಿಕೊಪ್ಪ: ಶ್ರೀರಂಗಪಟ್ಟಣ ಸಮೀಪ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ಸುಂಟಿಕೊಪ್ಪದ ವ್ಯಕ್ತಿ ಯೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಡವಾಗಿ ವರದಿಯಾಗಿದೆ. ಅದೃಷ್ಟ ವಶಾತ್ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾ ಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ನಿವಾಸಿ, ಗ್ರಾಮ ಪಂಚಾ ಯಿತಿಯ ಸ್ವಚ್ಚತಾಗಾರರಾಗಿರುವ ಎನ್. ರಾಮ ಚಂದ್ರ ಅವರು ಪತ್ನಿ ಯಶೋದ ಅವರೊಂದಿಗೆ ಶ್ರೀರಂಗ ಪಟ್ಟಣದ ನಗುವನಳ್ಳಿಯಲ್ಲಿರುವ ನಾದಿನಿಯ ಮನೆಗೆ ಹೋಗಿದ್ದು, ನ. 13 ರಂದು ಸಂಜೆ 4…

ಮಕ್ಕಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ
ಕೊಡಗು

ಮಕ್ಕಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ

November 16, 2018

ಮಡಿಕೇರಿ: ಪ್ರತಿಯೊಬ್ಬ ಮಕ್ಕ ಳಲ್ಲಿಯೂ ಸಹ ಒಂದೊಂದು ರೀತಿಯ ಪ್ರತಿಭೆ ಇದ್ದು, ಪ್ರತಿಭೆಯನ್ನು ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ಪೋಷಕರು ಉತ್ತೇಜನ ನೀಡುವಂತಾಗಬೇಕು ಎಂದು ಜಿಪಂ ಉಪಾ ಧ್ಯಕ್ಷೆ ಲೋಕೇಶ್ವರಿ ಗೋಪಾಲ್ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ಮಾಧ್ಯಮಿಕ ಶಿಕ್ಷಣ ಅಭಿಯಾನ ಸಂಯುಕ್ತ ಆಶ್ರ ಯದಲ್ಲಿ ಗುರುವಾರ ನಗರದ ಸಂತ ಮೈಕ ಲರ ಪ್ರೌಢಶಾಲೆಯಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿ ಪೂರ್ವ…

ಕುಡಿಯುವ ನೀರು ಸ್ವಚ್ಛತೆಗೆ ಹೆಚ್ಚು ಆದ್ಯತೆ
ಕೊಡಗು

ಕುಡಿಯುವ ನೀರು ಸ್ವಚ್ಛತೆಗೆ ಹೆಚ್ಚು ಆದ್ಯತೆ

November 16, 2018

ವಿರಾಜಪೇಟೆ:  ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ದೀಪ, ಸಾರ್ವಜನಿಕರಿಗೆ ಕುಡಿಯುವ ನೀರು, ಚರಂಡಿ ಮತ್ತು ಸ್ವಚ್ಚತೆಯ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಹೇಳಿದರು. ವಿರಾಜಪೇಟೆ ಪಟ್ಟಣದ ಅನೇಕ ವಾರ್ಡ್‍ಗಳಿಗೆ ಅಲ್ಲಿನ ಸದಸ್ಯರುಗಳೊಂದಿಗೆ ಬೇಟಿ ನೀಡಿ ವೀಕ್ಷಣೆ ನಡೆಸಿದ ನಂತರ ಅರಸು ನಗರಕ್ಕೆ ಅಲ್ಲಿನ ಸದಸ್ಯ ರಂಜಿ ಪೂಣಚ್ಚ ಅವರೊಂದಿಗೆ ಬೇಟಿ ನೀಡಿದ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಬೆಟ್ಟ ಪ್ರದೇಶವಾದ ಅರಸು ನಗರ ಮತ್ತು ಇತರ ಕಡೆಗಳಲ್ಲಿ ಕಾಲು ದಾರಿಗಳನ್ನು ದುರಸ್ತಿ…

ಕಕ್ಕಟಕಾಡು ರಸ್ತೆ ವಿವಾದ; ಸರ್ವೆ ಕಾರ್ಯ ಮುಂದೂಡಿಕೆ
ಕೊಡಗು

ಕಕ್ಕಟಕಾಡು ರಸ್ತೆ ವಿವಾದ; ಸರ್ವೆ ಕಾರ್ಯ ಮುಂದೂಡಿಕೆ

November 16, 2018

ಸಿದ್ದಾಪುರ: ಗುಯ್ಯ-ಕಕ್ಕಟಕಾಡು ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕು ಇರುವ ಕಾರಣ ಸರ್ವೆ ಕಾರ್ಯವನ್ನು ಮುಂದೂ ಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿ ವಿನು ತಿಳಿಸಿದ್ದಾರೆ. ಬಿಗಿ ಬಂದೋಬಸ್ತ್ ನಡುವೆ ಇಂದು ಕಕ್ಕಟಕಾಡು ರಸ್ತೆ ಸರ್ವೆ ಕಾರ್ಯ ಮಾಡಲು ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖೆ ಸರ್ವೆ ಕಾರ್ಯಕ್ಕೆ ಮುಂದಾಗಿತ್ತು. ಈ ಸಂದರ್ಭ ಉಭಯ ಕಡೆಯ ವರೊಂದಿಗೆ ಮಾತುಕತೆ ನಡೆಸಿದ ಸಂದರ್ಭ ಕಾನೂನು ತೊಡಕು ಇರುವುದಾಗಿ ಕಂಡುಬಂದಿರುವ ಹಿನ್ನಲೆ ತಾತ್ಕಾಲಿಕವಾಗಿ ಸರ್ವೆ ಕಾರ್ಯವನ್ನು ಮುಂದೂಡಲಾಗಿದೆ ಎಂದರು.ಸರ್ಕಲ್ ಇನ್ಸ್‍ಪೆಕ್ಟರ್ ಅನೂಪ್…

1 102 103 104 105 106 187
Translate »