ಕಕ್ಕಟಕಾಡು ರಸ್ತೆ ವಿವಾದ; ಸರ್ವೆ ಕಾರ್ಯ ಮುಂದೂಡಿಕೆ
ಕೊಡಗು

ಕಕ್ಕಟಕಾಡು ರಸ್ತೆ ವಿವಾದ; ಸರ್ವೆ ಕಾರ್ಯ ಮುಂದೂಡಿಕೆ

November 16, 2018

ಸಿದ್ದಾಪುರ: ಗುಯ್ಯ-ಕಕ್ಕಟಕಾಡು ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕು ಇರುವ ಕಾರಣ ಸರ್ವೆ ಕಾರ್ಯವನ್ನು ಮುಂದೂ ಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿ ವಿನು ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್ ನಡುವೆ ಇಂದು ಕಕ್ಕಟಕಾಡು ರಸ್ತೆ ಸರ್ವೆ ಕಾರ್ಯ ಮಾಡಲು ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖೆ ಸರ್ವೆ ಕಾರ್ಯಕ್ಕೆ ಮುಂದಾಗಿತ್ತು. ಈ ಸಂದರ್ಭ ಉಭಯ ಕಡೆಯ ವರೊಂದಿಗೆ ಮಾತುಕತೆ ನಡೆಸಿದ ಸಂದರ್ಭ ಕಾನೂನು ತೊಡಕು ಇರುವುದಾಗಿ ಕಂಡುಬಂದಿರುವ ಹಿನ್ನಲೆ ತಾತ್ಕಾಲಿಕವಾಗಿ ಸರ್ವೆ ಕಾರ್ಯವನ್ನು ಮುಂದೂಡಲಾಗಿದೆ ಎಂದರು.ಸರ್ಕಲ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ಸಿದ್ದಾ ಪುರ ಠಾಣಾಧಿಕಾರಿ ದಯಾನಂದ್ ನೇತೃತ್ವದಲ್ಲಿ ಎರಡು ತುಕಡಿಗಳೊಂದಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು

ಸರ್ವೆ ಕಾರ್ಯ ನಡೆಸಲು ಸ್ಥಳಕ್ಕೆ ತೆರಳಿದ ಕಂದಾಯ ಹಾಗೂ ಪೊಲೀಸ್ ಇಲಾಖೆ ವಾಹನ ಗಳಿಗೆ ಸಮಿತಿಯ ಕೆಲವರುನ ವಾಹನಗಳಿಗೆ ತಡೆ ಒಡ್ಡಲಾಗಿತ್ತು. ಸರ್ಕಲ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ಮಾತುಕತೆ ಮೂಲಕ ತೆರವುಗೊಳಿಸಿದರು. ವರದಿಗೆ ತೆರಳಿದ್ದ ಪತ್ರಕರ್ತರಿಗೂ ಸಮಿತಿಯ ಪ್ರಮುಖರು ಆವಾಜ್ ಹಾಕಿದ ಘಟನೆಯೂ ನಡೆಯಿತು. ಸ್ಥಳದಲ್ಲಿ ಕಕ್ಕಟಕಾಡು ನಿವಾಸಿಗಳು ಹಾಗೂ ಸ್ಥಳೀಯರು ಜಮಾಯಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಎರಡು ಪೊಲೀಸ್ ತುಕುಡಿ ಗಳನ್ನು ನಿಯೋಜಿಸಲಾಗಿದೆ.

Translate »