ಅಕ್ರಮ ಬೀಟೆ ನಾಟಾ ಸಾಗಾಟ: ಮಾಲು ಸಮೇತ ವಾಹನ ವಶ
ಕೊಡಗು

ಅಕ್ರಮ ಬೀಟೆ ನಾಟಾ ಸಾಗಾಟ: ಮಾಲು ಸಮೇತ ವಾಹನ ವಶ

November 16, 2018

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಆನೆಕಾಡು ಬಳಿ ಅಕ್ರಮವಾಗಿ ಬೀಟೆ ನಾಟಾ ಸಾಗಾಟ ಮಾಡುತ್ತಿದ್ದ ಸಂದರ್ಭ ಮಡಿಕೇರಿ ಅರಣ್ಯ ಇಲಾಖೆ ಸಂಚಾರಿದಳದ ಸಿಬ್ಬಂದಿ ದಾಳಿ ನಡೆಸಿ ರೂ.3 ಲಕ್ಷ ಬೆಲೆಬಾಳು ಬೀಟೆ ಮರ ನಾಟಾಗಳೊಂದಿಗೆ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಅರಣ್ಯ ಇಲಾಖೆಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್.ಸುಬ್ರಮಣಿ ಮಾರ್ಗದರ್ಶನ ದಲ್ಲಿ ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪ ಮಾರ್ಗವಾಗಿ ಕುಶಾಲನಗರದ ಕಡೆ ಮಿನಿ ವಾಹನದಲ್ಲಿ ಮರ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಸಂಚಾರಿದಳ ಮಾಲು ಸಮೇತ ವಾಹನ ವಶಪಡಿಸಿಕೊಂಡಿದೆ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮಡಿಕೇರಿ ಅರಣ್ಯ ಸಂಚಾರದಳದ ಎಸಿಎಫ್, ಜೀವನ್ ಕುಮಾರ್, ವಲಯ ಅರಣ್ಯಾಧಿಕಾರಿ ಹೆಚ್.ಜೆ.ದೇವರಾಜು, ಉಪವಲಯ ಅರಣ್ಯಾಧಿಕಾರಿ ಕೆ.ಸಿ.ನಾರಯಣ್, ಕೆ.ಎನ್.ದೇವಯ್ಯ, ಸಿಬ್ಬಂದಿ ಗಣೇಶ ಕುಮಾರ್, ಪೂವಯ್ಯ, ಪ್ರವೀಣ್‍ರಾವ್ ಪಾಲ್ಗೊಂಡಿದ್ದರು.

Translate »