ಕೊಡಗು

ಕೊಡವ ಸಮಾಜಗಳಿಂದ ಭಾಷೆ, ಸಂಸ್ಕøತಿ ರಕ್ಷಣೆ
ಕೊಡಗು

ಕೊಡವ ಸಮಾಜಗಳಿಂದ ಭಾಷೆ, ಸಂಸ್ಕøತಿ ರಕ್ಷಣೆ

November 21, 2018

ವಿರಾಜಪೇಟೆ: ಕೊಡವ ಭಾಷೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಹಲವಾರು ವರ್ಷಗಳಿಂದಲೂ ಅಖಿಲ ಕೊಡವ ಸಮಾಜ ಉಳಿಸಿ ಬೆಳೆಸುವಂ ತಹ ಕಾರ್ಯವನ್ನು ಮಾಡುತ್ತ ಬಂದಿದ್ದು, ಮುಂದೆಯೂ ಹೆಚ್ಚಿನ ಕಾರ್ಯಗಳಿಗೆ ಜನರ ಸಹಕಾರ ಅಗತ್ಯ ಎಂದು ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದರು. ವಿರಾಜಪೇಟೆ ಅಖಿಲ ಕೊಡವ ಸಮಾ ಜದ ಸಭಾಂಗಣದಲ್ಲಿ ಆಯೋಜಿಸಲಾ ಗಿದ್ದ ಸಮಾಜದ 41ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನ ಸಮಸ್ಯೆಗಳ ಬಗ್ಗೆ ಅಖಿಲ ಕೊಡವ ಸಮಾಜ ಪ್ರಾಥಮಿಕವಾಗಿ ಧ್ವನಿ ಎತ್ತುತ್ತದೆ. ಕೊಡಗಿನವರ ಭಾವನೆಗೆ ಧಕ್ಕೆ…

ಉಚಿತ ವೈದ್ಯಕೀಯ ತಪಾಸಣೆಗೆ ಚಾಲನೆ
ಕೊಡಗು

ಉಚಿತ ವೈದ್ಯಕೀಯ ತಪಾಸಣೆಗೆ ಚಾಲನೆ

November 21, 2018

ಸೋಮವಾರಪೇಟೆ:  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ 2018-19ನೇ ಸಾಲಿನ ಒಂದರಿಂದ ಹತ್ತನೆ ತರಗತಿವರೆಗಿನ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಹಾಗೂ ಮೌಲ್ಯಾಂಕನ ಶಿಬಿರ ಮಂಗಳವಾರ ಚನ್ನ ಬಸಪ್ಪ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆರಯುವುದರ ಮೂಲಕ ಚಾಲನೆ ನೀಡಿದ ಬಿಇಒ ನಾಗರಾಜಯ್ಯ ಮಾತನಾಡಿ, ವಿಶೇಷ ಚೇತನ ಮಕ್ಕಳನ್ನು ನಮ್ಮವರಂತೆ ಕಾಣಬೇಕು. ಅವರಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಇಂತಹ ಮಕ್ಕಳು ಯಾವುದೇ ಸೌಲಭ್ಯಗಳಿಂದ ವಂಚಿತರಾಗದಂತೆ ಪೋಷಕರು ಮತ್ತು ಶಿಕ್ಷಕರು ಎಚ್ಚರಿಕೆ ವಹಿಸಬೇಕೆಂದರು….

ಪಾಲಿಬೆಟ್ಟದಲ್ಲಿ ಈದ್ ಮಿಲಾದ್ ಸಂದೇಶ ಮೆರವಣಿಗೆ
ಕೊಡಗು

ಪಾಲಿಬೆಟ್ಟದಲ್ಲಿ ಈದ್ ಮಿಲಾದ್ ಸಂದೇಶ ಮೆರವಣಿಗೆ

November 21, 2018

ಸಿದ್ದಾಪುರ:  ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1493ನೇ ಜನ್ಮ ದಿನಾ ಚರಣೆಯ ಅಂಗ ವಾಗಿ ಈದ್ ಮಿಲಾದ್ ಸಂದೇಶ ಮೆರವಣಿಗೆ ಪಾಲಿಬೆಟ್ಟದಲ್ಲಿ ನಡೆಯಿತು. ಮುಸ್ಲಿಂ ಬಾಂಧ ವರು ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆಯಲ್ಲಿ ಸಾಗಿ ಪ್ರವಾದಿ ಸಂದೇಶ ಸಾರಿದರು. ಈ ಸಂದರ್ಭ ಮುಸ್ಲಿಂ ಜಮಾಯತ್ ಅಧ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್, ಮಸೀದಿಯ ಖತೀಬ್ ಅಲಿ ಸಖಾಫಿ, ಸೈಯದ್ ಅಬ್ದುಲ್ ರೆಹ್ಮಾನ್ ತಂಙಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪಟಾಕಿ ಸಿಡಿತದಿಂದ ವಿದ್ಯಾರ್ಥಿನಿಗೆ ಗಾಯ
ಕೊಡಗು

ಪಟಾಕಿ ಸಿಡಿತದಿಂದ ವಿದ್ಯಾರ್ಥಿನಿಗೆ ಗಾಯ

November 21, 2018

ಗುಡ್ಡೆಹೊಸೂರು:  ಇಲ್ಲಿಗೆ ಸಮೀಪದ ಬಸವನಹಳ್ಳಿ ಹೊಸಕಾಡುಗ್ರಾಮದ ಆಟೋಚಾಲಕ ಮಂಜು ಎಂಬುವರ ಪುತ್ರಿ ಸಂಜನಾ ಪಟಾಕಿ ಸಿಡಿಸುವ ಸಂದರ್ಭ ತನ್ನ ಕೈ, ಮುಖದ ಭಾಗಕ್ಕೆ ಗಾಯ ಮಾಡಿಕೊಂಡಿದ್ದಾಳೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾಳೆ.  

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕೊಡಗು

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

November 21, 2018

ಮಡಿಕೇರಿ: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 2018-19ನೇ ಸಾಲಿನಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ ರೂ.25 ಸಾವಿರಗಳ ವಿಶೇಷ ಪ್ರೋತ್ಸಾಹಧನ ಯೋಜನೆಯಡಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆನ್‍ಲೈನ್‍ನಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ನ.30 ರೊಳಗೆ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್ www.gokdom.kar.nic.in ಹಾಗೂ ಕಚೇರಿ ದೂ.ಸಂಖ್ಯೆ: 08272-220214 ನ್ನು ಸಂಪರ್ಕಿಸಹುದು ಎಂದು…

ಹಳೇ ಖಾಸಗಿ ಬಸ್ ನಿಲ್ದಾಣ ಸ್ಥಳದಲ್ಲಿ ತಲೆ ಎತ್ತಲಿದೆ ಪಾರಂಪರಿಕ ತಾಣ
ಕೊಡಗು

ಹಳೇ ಖಾಸಗಿ ಬಸ್ ನಿಲ್ದಾಣ ಸ್ಥಳದಲ್ಲಿ ತಲೆ ಎತ್ತಲಿದೆ ಪಾರಂಪರಿಕ ತಾಣ

November 20, 2018

ಮಡಿಕೇರಿ: ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಕಟ್ಟಡ ಕೆಡವಲಾದ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶವನ್ನು ಕೈ ಬಿಡಲಾಗಿದ್ದು, ಆ ಸ್ಥಳದಲ್ಲಿ ವಿದೇಶಿ ಮಾದರಿಯ ಪಾರಂಪರಿಕ ತಾಣವೊಂದು ತಲೆ ಎತ್ತಲಿದೆ. ಈ ಸ್ಥಳವನ್ನು ಪ್ರವಾಸೋದ್ಯಮಕ್ಕೆ ಪೂರಕ ವಾದ ತಾಣವನ್ನಾಗಿಸಿ ನಗರದ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆಯವಂತೆ “ಮೈಸೂರು ಮಿತ್ರ” ಮತ್ತು “ಸ್ಟಾರ್ ಆಫ್ ಮೈಸೂರು” ಪತ್ರಿಕೆಯ ಪ್ರಧಾನ ಸಂಪಾದಕರಾದ ಕಲ್ಯಾಟಂಡ ಬಿ. ಗಣಪತಿ ಅವರು ತಮ್ಮ ಪ್ರಖ್ಯಾತ ಅಂಕಣ “ಛೂ ಮಂತ್ರ”ದ ಮೂಲಕ ಸಲಹೆ ಮತ್ತು…

ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಕೊಲೆ ಬೆದರಿಕೆ; ಭದ್ರತೆಗೆ ಆಗ್ರಹ
ಕೊಡಗು

ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಕೊಲೆ ಬೆದರಿಕೆ; ಭದ್ರತೆಗೆ ಆಗ್ರಹ

November 20, 2018

ಪೊನ್ನಂಪೇಟೆ: ಟಿಪ್ಪುವಿನ ಕ್ರೌರ್ಯದ ಬಗ್ಗೆ ಇತಿಹಾಸದ ವಾಸ್ತವಂಶವನ್ನು ತೆರೆದಿಟ್ಟ ಪತ್ರಕರ್ತ ಹಾಗೂ ಅಂಕಣಕಾರ ಸಂತೋಷ್‍ತಮ್ಮಯ್ಯನವರಿಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದ್ದು ಸರ್ಕಾರವು  ಕೂಡಲೇ ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿ ಸಂತೋಷ್‍ತಮ್ಮಯ್ಯನವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಯುಕೊ ಸಂಸ್ಥೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಒತ್ತಾಯಿಸಿದರು. ಗೋಣಿಕೊಪ್ಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ 19(1)ಎ ವಿಧಿಯಂತೆ ಈ ದೇಶದ ಎಲ್ಲಾ ನಾಗರಿಕರಿಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮದ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾದ…

ಶ್ರೀಗಂಧ ಮರ ಕಡಿದು ಸಾಗಾಟಕ್ಕೆ ಯತ್ನ; ಇಬ್ಬರ ಬಂಧನ
ಕೊಡಗು

ಶ್ರೀಗಂಧ ಮರ ಕಡಿದು ಸಾಗಾಟಕ್ಕೆ ಯತ್ನ; ಇಬ್ಬರ ಬಂಧನ

November 20, 2018

ಸಿದ್ದಾಪುರ: ಕಾಫಿ ತೋಟದಲ್ಲಿದ್ದ ಶ್ರೀಗಂಧ ಮರವನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಮಾಯಮುಡಿ ವ್ಯಾಪ್ತಿಯ ರುದ್ರಬೀಡು ಗ್ರಾಮದ ಕಾಫಿತೋಟವೊಂದರಲ್ಲಿ ಇದ್ದ ಶ್ರೀಗಂಧದ ಮರವನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ ರುದ್ರಬೀಡು ಗ್ರಾಮದ ಮಾರ, ಸಿದ್ದ ಎಂಬುವರನ್ನು ತಿತಿಮತಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಇಪ್ಪತ್ತೈದು ಸಾವಿರ ಮೌಲ್ಯದ ಶ್ರೀಗಂಧ ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ವಲಯ ಅರಣ್ಯಾಧಿಕಾರಿ ಅಶೋಕ್, ಉಪವಲಯ ಅರಣ್ಯಾಧಿಕಾರಿ ಗಣಪತಿ, ಅರಣ್ಯ ರಕ್ಷಕರಾದ ದೇವರಾಜು,…

ಕುಡಿದ ಅಮಲಿನಲ್ಲಿ ಸರಣಿ ಅಪಘಾತ; ಸುಮೋ ಚಾಲಕ ಪೊಲೀಸ್ ವಶಕ್ಕೆ
ಕೊಡಗು

ಕುಡಿದ ಅಮಲಿನಲ್ಲಿ ಸರಣಿ ಅಪಘಾತ; ಸುಮೋ ಚಾಲಕ ಪೊಲೀಸ್ ವಶಕ್ಕೆ

November 19, 2018

ಮಡಿಕೇರಿ: ಪಶುಪಾಲನಾ ಇಲಾಖೆಯ ಹೊರಗುತ್ತಿಗೆ ವಾಹನ ಚಾಲಕ ನೋರ್ವ ಮದ್ಯದ ಅಮಲಿನಲ್ಲಿ ಸರಕಾರಿ ವಾಹನ ಚಲಾಯಿಸಿ 2 ದ್ವಿಚಕ್ರ ವಾಹನ ಗಳಿಗೆ ಡಿಕ್ಕಿ ಘಟನೆ ಶನಿವಾರ ರಾತ್ರಿ ನಗರದಲ್ಲಿ ನಡೆದಿದೆ. ಅರವಿಂದ್ ಎಂಬಾತನೆ ಅಪಘಾತ ಎಸಗಿದ ವ್ಯಕ್ತಿಯಾಗಿದ್ದು, ನಗರ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ರಾತ್ರಿ 8.30ರ ಸಮಯದಲ್ಲಿ ಪಶುಪಾಲನಾ ಇಲಾಖೆಯ ಟಾಟಾ ಸುಮೋ (ಕೆಎ.12.ಜಿ.726) ವಾಹನವನ್ನು ಹೊರ ಗುತ್ತಿಗೆ ಚಾಲಕ ಅರವಿಂದ್ ಎಂಬಾತ ಕಂಠ ಪೂರ್ತಿ ಮದ್ಯ ಸೇವಿಸಿಕೊಂಡು ಅಶೋಕಪುರ ರಸ್ತೆಯಲ್ಲಿ…

ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸಹಕರಿಸಲು ಮನವಿ
ಕೊಡಗು

ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸಹಕರಿಸಲು ಮನವಿ

November 19, 2018

ವಿರಾಜಪೇಟೆ: ವಿರಾಜಪೇಟೆ ಮಾರ್ಗವಾಗಿ ಹಾದು ಹೋಗುವ ಕೊಣ ನೂರು-ಮಾಕುಟ್ಟ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲು ಸರಕಾರ ಮುಂದೆ ಬಂದಿದ್ದು, ಕಾಮಗಾರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ದಿಂದ ವಿರಾಜಪೇಟೆ ಪಟ್ಟಣ ಪಂಚಾ ಯಿತಿ ಹಾಗೂ ಆರ್ಜಿ ಗ್ರಾಮ ಪಂಚಾಯಿತಿ ಮಧ್ಯ ಭಾಗದಲ್ಲಿರುವ ಅನ್ವಾರುಲ್ ಹುದಾ ಸೆಂಟರ್ ಬಳಿಯ ಕೊಡಗು-ಕೇರಳ ಹೆದ್ದಾ ರಿಯಲ್ಲಿ ರೂ,2,34 ಕೋಟಿ ಅನುದಾನ ದಲ್ಲಿ ನೂತನ ಸೇತುವೆ ನಿರ್ಮಾಣ ಮತ್ತು ಅಪ್ರೋಚ್ ರಸ್ತೆ ನಿರ್ಮಾಣ…

1 100 101 102 103 104 187
Translate »