ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸಹಕರಿಸಲು ಮನವಿ
ಕೊಡಗು

ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸಹಕರಿಸಲು ಮನವಿ

November 19, 2018

ವಿರಾಜಪೇಟೆ: ವಿರಾಜಪೇಟೆ ಮಾರ್ಗವಾಗಿ ಹಾದು ಹೋಗುವ ಕೊಣ ನೂರು-ಮಾಕುಟ್ಟ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲು ಸರಕಾರ ಮುಂದೆ ಬಂದಿದ್ದು, ಕಾಮಗಾರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ದಿಂದ ವಿರಾಜಪೇಟೆ ಪಟ್ಟಣ ಪಂಚಾ ಯಿತಿ ಹಾಗೂ ಆರ್ಜಿ ಗ್ರಾಮ ಪಂಚಾಯಿತಿ ಮಧ್ಯ ಭಾಗದಲ್ಲಿರುವ ಅನ್ವಾರುಲ್ ಹುದಾ ಸೆಂಟರ್ ಬಳಿಯ ಕೊಡಗು-ಕೇರಳ ಹೆದ್ದಾ ರಿಯಲ್ಲಿ ರೂ,2,34 ಕೋಟಿ ಅನುದಾನ ದಲ್ಲಿ ನೂತನ ಸೇತುವೆ ನಿರ್ಮಾಣ ಮತ್ತು ಅಪ್ರೋಚ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇರಳದ ಮಟನೂರು ಏರ್‍ಪೋರ್ಟ್ ಕೆಲವು ದಿನ ಗಳಲ್ಲಿಯೇ ಉದ್ಘಾಟನೆಗೊಳ್ಳಲಿದ್ದು ಕೊಣ ನೂರು-ಮಾಕುಟ್ಟ ರಸ್ತೆ ಅಗಲಿಕರಣ ದಿಂದ ಸಾರ್ವಜನಿಕರಿಗೆ ಅನುಕೂಲವಾ ಗಲಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಅನೇಕ ವರ್ಷಗಳಿಂದಲೂ ಮಳೆ ಬಂದಾಗ ಈ ಸೇತುವೆಯಲ್ಲಿ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿದ್ದ ರಿಂದ ಈ ಹೆದ್ದಾರಿಯಲ್ಲಿ ಅಗಾಗ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಇಗ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ದವರು ಈ ಸೇತುವೆ ನಿರ್ಮಾಣದಿಂದ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ.

ಮತ್ತು ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಕೊಡಗು-ಕೇರಳ ಸಂಪರ್ಕ ಮತ್ತಷ್ಟು ಹೆಚ್ಚಲಿದೆ ಎಂದರು. ಭೂಮಿ ಪೂಜೆ ಸಂದರ್ಭ ತಾಲೂಕು ಪಂಚಾ ಯಿತಿ ಸದಸ್ಯ ಬಿ.ಎಂ.ಗಣೇಶ್, ಎಲ್‍ಓಎಫ್ ಕನ್ಸೆಕ್ಷನ್ ಕಂಪನಿಯ ಗುತ್ತಿಗೆ ಅಭಿಯಂತರ ಚಂಗಪ್ಪ, ಕರ್ನಾಟಕ ರಸ್ತೆ ಅಭಿವೃದ್ಧಿ ಕಾರ್ಪೋರೆಷನ್‍ನ ಅಭಿಯಂತರ ಪದ್ಮನಾಭ, ಬೇಟೋಳಿ ಗ್ರಾಪಂ ಅಧ್ಯಕ್ಷೆ ಚೋಂದಮ್ಮ, ಪಪಂ ಸದಸ್ಯ ಹರ್ಷವರ್ದನ್, ಆರ್ಜಿ ಗ್ರಾಪಂ ಅಧ್ಯಕ್ಷೆ ಗಾಯಿತ್ರಿ, ಉಪಾಧ್ಯಕ್ಷ ರಮೇಶ್ ಗಿರಿ, ಸದಸ್ಯರಾದ ಉದಯ ಕುಮಾರ್, ಶ್ರೀಜಾ, ಮಾಜಿ ಸದಸ್ಯ ಬಾಬು ಹಾಗೂ ಗ್ರಾಮಾಸ್ಥರುಗಳು ಹಾಜರಿದ್ದರು.

Translate »