ನಾಳೆ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ ವಾರ್ಷಿಕೋತ್ಸವ
ಮೈಸೂರು

ನಾಳೆ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ ವಾರ್ಷಿಕೋತ್ಸವ

November 19, 2018

ಮೈಸೂರು: ಮೈಸೂರು ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿಯಲ್ಲಿ ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ನ.20ರಂದು ವಿಶೇಷ ಪೂಜಾ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 6.30 ಗಂಟೆಗೆ ಕಾಕಡಾರತಿ, 7.30ಕ್ಕೆ ಜಲಾಭಿಷೇಕ, 8.15ಕ್ಕೆ ಪುಷ್ಪಾರ್ಚನೆ ಹಾಗೂ 9 ಗಂಟೆಗೆ ಬಾಬಾರವರ ಅಷ್ಟಧಾತು ಮೂರ್ತಿಗೆ ಷೋಡಶೋಪಚಾರ, ರಜತ ನಾಣ್ಯಾರ್ಚನೆ, ಕಳಶ ಸ್ಥಾಪನೆ, ವಿವಿಧ ಪೂಜಾ ವಿಧಿಗಳು ನಡೆಯಲಿವೆ.
ಅಲ್ಲದೆ ಗಣಪತಿ ಹೋಮ, ನವಗ್ರಹ ಹೋಮ, ರುದ್ರ ಹೋಮ, ಸುಬ್ರಹ್ಮಣ್ಯ ಹೋಮ, ದುರ್ಗಾ ಹೋಮ, ಸಾಯಿ ಹೋಮ, ಕಲಾತತ್ವ ಹೋಮಗಳು ನಡೆಯಲಿದ್ದು, ಸಂಜೆ 6.30ಕ್ಕೆ ಧೂಪಾರತಿ ನಡೆಯಲಿದೆ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ತುಪ್ಪದ ಬತ್ತಿಯ 108 ಬೆಲ್ಲದ ದೀಪೋತ್ಸವ ನಡೆಯಲಿದ್ದು, ಈ ಎಲ್ಲಾ ಪೂಜಾ ಕಾರ್ಯಕ್ರಮಗಳು ಶಿರಡಿ ಸಂಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಲಾಖೆ ಶಾಸ್ತ್ರಿ ಮಹಾರಾಜ್ ಅವರ ನೇತೃತ್ವದಲ್ಲಿ ನೆರವೇರಲಿದೆ.

Translate »