ಕುಡಿದ ಅಮಲಿನಲ್ಲಿ ಸರಣಿ ಅಪಘಾತ; ಸುಮೋ ಚಾಲಕ ಪೊಲೀಸ್ ವಶಕ್ಕೆ
ಕೊಡಗು

ಕುಡಿದ ಅಮಲಿನಲ್ಲಿ ಸರಣಿ ಅಪಘಾತ; ಸುಮೋ ಚಾಲಕ ಪೊಲೀಸ್ ವಶಕ್ಕೆ

November 19, 2018

ಮಡಿಕೇರಿ: ಪಶುಪಾಲನಾ ಇಲಾಖೆಯ ಹೊರಗುತ್ತಿಗೆ ವಾಹನ ಚಾಲಕ ನೋರ್ವ ಮದ್ಯದ ಅಮಲಿನಲ್ಲಿ ಸರಕಾರಿ ವಾಹನ ಚಲಾಯಿಸಿ 2 ದ್ವಿಚಕ್ರ ವಾಹನ ಗಳಿಗೆ ಡಿಕ್ಕಿ ಘಟನೆ ಶನಿವಾರ ರಾತ್ರಿ ನಗರದಲ್ಲಿ ನಡೆದಿದೆ. ಅರವಿಂದ್ ಎಂಬಾತನೆ ಅಪಘಾತ ಎಸಗಿದ ವ್ಯಕ್ತಿಯಾಗಿದ್ದು, ನಗರ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ 8.30ರ ಸಮಯದಲ್ಲಿ ಪಶುಪಾಲನಾ ಇಲಾಖೆಯ ಟಾಟಾ ಸುಮೋ (ಕೆಎ.12.ಜಿ.726) ವಾಹನವನ್ನು ಹೊರ ಗುತ್ತಿಗೆ ಚಾಲಕ ಅರವಿಂದ್ ಎಂಬಾತ ಕಂಠ ಪೂರ್ತಿ ಮದ್ಯ ಸೇವಿಸಿಕೊಂಡು ಅಶೋಕಪುರ ರಸ್ತೆಯಲ್ಲಿ ಚಲಾಯಿಸಿಕೊಂಡು ಕಡಗದಾಳು ಕಡೆ ತೆರಳಿದ್ದಾನೆ. ಈ ಸಂದರ್ಭ ಎದುರುಗಡೆ ಸಿಕ್ಕಿದ ನಿಶಾಂತ್ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನಕ್ಕೆ (ಕೆಎ.12 ಎಸ್.2592) ಡಿಕ್ಕಿ ಹೊಡೆದಿ ದ್ದಾನೆ. ಡಿಕ್ಕಿಯ ರಭಸಕ್ಕೆ ಹೊಂಡಾ ಏಕ್ಸಸ್ ವಾಹನ ಮತ್ತೊಂದು ಬೈಕ್‍ಗೆ (ಕೆಎ.51. ಸಿ.8586) ಡಿಕ್ಕಿ ಹೊಡೆದಿದೆ. ಅಪ ಘಾತದಲ್ಲಿ ನಿಶಾಂತ್ ಎಂಬಾತ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ದ್ವಿಚಕ್ರ ವಾಹನ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಹಾರ್ಲಿ ಡೇವಿಡ್ ಸನ್ ಬೈಕ್ ಬಾಡಿಗೆ ಸಂಸ್ಥೆಯೊಂದಕ್ಕೆ ಸೇರಿದ್ದು, ಬೈಕ್‍ನ ಕ್ರ್ಯಾಷ್ ಗಾರ್ಡ್ ತುಂಡಾಗಿ ಬೈಕ್‍ನಲ್ಲಿದ್ದ ಬೆಂಗಳೂರು ಮೂಲದ ಬಿಜಯ್ ಎಂಬುವರ ಕೈಗೆ ಗಾಯಗಳಾಗಿದೆ. ಸರಣಿ ಅಪಘಾತದ ತೀವ್ರತೆಗೆ ಪಶು ಪಾಲನಾ ಇಲಾಖೆಯ ಟಾಟಾ ಸುಮ್ಮೋದ ಮುಂಬದಿಯ ಚಕ್ರದ ಆಕ್ಸಲ್ ತುಂಡರಿಸಲ್ಟಟ್ಟಿದ್ದು ಚಕ್ರ ಕಳಚಿ ಕೊಂಡಿದೆ. ಸಾರ್ವಜನಿಕರು ಮದ್ಯ ಸೇವಿಸಿ ಅಪಘಾತ ಎಸಗಿದ ಹೊರಗುತ್ತಿಗೆ ಚಾಲ ಕನಿಗೆ ಧರ್ಮದೇಟು ನೀಡಿ ಪೊಲೀ ಸರಿಗೆ ಒಪ್ಪಿಸಿದ್ದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 3 ವಾಹನಗಳನ್ನು ನಗರ ಸಂಚಾರಿ ಪೊಲೀ ಸರು ವಶಕ್ಕೆ ಪಡೆದುಕೊಂಡಿದ್ದಾರೆ.

Translate »