ಸೋಮವಾರಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೂಪ್ ಡ್ಯಾನ್ಸ್ ಸ್ಪರ್ಧೆ
ಕೊಡಗು

ಸೋಮವಾರಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೂಪ್ ಡ್ಯಾನ್ಸ್ ಸ್ಪರ್ಧೆ

November 19, 2018

ಸೋಮವಾರಪೇಟೆ:  ಇಲ್ಲಿನ ಜೇಸಿ ಸಂಸ್ಥೆಯ 2018ರ ಸಪ್ತಾಹದ ಕಾರ್ಯಕ್ರ ಮದ ಮೂರನೆ ದಿನ ವಿದ್ಯಾರ್ಥಿಗಳಿಗೆ ಹಲವು ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 4ರಿಂದ 7 ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಂಜಮ್ಮ ಸಮು ದಾಯ ಭವನದಲ್ಲಿ ಜಾನಪದ ಲೋಕದ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ನಂತರ ಬರ ವಣಿಗೆ ಸ್ಪರ್ಧೆ ನಡೆಯಿತು. ಸಂಜೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ನಡೆಯಿತು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ. ರುಬೀನಾ, ನಾಗರಾಜು, ಸುಬ್ರಹ್ಮಣಿ, ಜಯೇಶ್ ಮತ್ತಿತರರು ಇದ್ದರು. ಮನೋಹರ್ ಡಾನ್ಸ್ ಕಾರ್ಯಕ್ರಮ ನಡೆಸಿಕೊಟ್ಟರು. ತೀರ್ಪು ಗಾರರಾಗಿ ಕೃಷಿ ಇಲಾಖೆಯ ಪಲ್ಲವಿ ಹಾಗೂ ಪೂಜಾ ಕಾರ್ಯನಿರ್ವಹಿಸಿದರು.

Translate »