ಸೋಮವಾರಪೇಟೆ: ಚಿತ್ರನಟ ಅಂಬರೀಶ್ ಅವರ ನಿಧನಕ್ಕೆ ಇಲ್ಲಿನ ಅಂಬರೀಶ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಶ್ರದ್ಧಾಂಜಲಿ ಅರ್ಪಿ ಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾ ಣದ ಪುಟ್ಟಪ್ಪ ವೃತ್ತದಲ್ಲಿ ಅಂಬರೀಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ.ಸಿ.ಶಶಿ ಕುಮಾರ್, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜು, ಆಟೋ ಚಾಲಕ ಹಸನಬ್ಬ, ಸಂಘದ ಸದಸ್ಯರುಗಳಾದ ಆನಂದ, ರವಿ, ಸ್ವಾಮಿ, ಸುರೇಂದ್ರ, ಜಮೀಲ್ ಮತ್ತಿತರರು ಇದ್ದರು.
ಡಿಸೆಂಬರ್ 3, ಕೂಡುಗದ್ದೆ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಆಗ್ರಹಿಸಿ ಸಿದ್ದಾಪುರ ಗ್ರಾಪಂ ಮುಂದೆ ಪ್ರತಿಭಟನೆ
November 26, 2018ಸಿದ್ದಾಪುರ: ಸ್ಥಳೀಯ ಗ್ರಾಮ ಪಂಚಾಯತಿ ಮೂಲಭೂತ ಸೌಲಭ್ಯ ಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಡಿ. 3 ರಂದು ಗ್ರಾಮ ಪಂಚಾಯತಿ ಎದುರು ಸಿಪಿಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಪಕ್ಷದ ಕೂಡುಗದ್ದೆ ಶಾಖೆಯ ಕಾರ್ಯ ದರ್ಶಿ ಅನಿಲ್ ಕುಟ್ಟಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ದಡದಲ್ಲಿರುವ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಕೂಡಲೇ ಅವರನ್ನು ಸ್ಥಳಾಂತರಿಸಬೇಕಾಗಿದೆ. ಗ್ರಾಮ ಪಂಚಾ ಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಪೈಸಾರಿ ಜಾಗಗಳಿದ್ದು, ನದಿ ದಡದ ನಿವಾಸಿಗಳಿಗೆ…
ಡಾ. ಚೇತನ್ ಮೇಡತನ ಅವರಿಗೆ ವೈದ್ಯಶ್ರೀ ಪ್ರಶಸ್ತಿ
November 26, 2018ಗುಡ್ಡೆಹೊಸೂರು: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇ ಳನದಲ್ಲಿ ಸಂಚಾರಿ ಆರೋಗ್ಯ ಘಟಕ ಕುಶಾಲನಗರದಲ್ಲಿ ಹಿರಿಯ ವೈದ್ಯಾ ಧಿಕಾರಿಗಳಾಗಿ ಕರ್ತವ್ಯ ನಿರ್ವಹಿ ಸುತ್ತಿರುವ ಡಾ.ಚೇತನ್ ಮೇಡ ತನ ಅವರಿಗೆ ಗ್ರಾಮೀಣ ಪ್ರದೇ ಶದಲ್ಲಿ ಸಲ್ಲಿಸಿದ ಸೇವೆಗಾಗಿ ವೈದ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿ ಸಲಾಯಿತು. ಇವರು ಮೂಲತಃ ಮೂರ್ನಾ ಡಿನ ಬಲಮುರಿಯಲ್ಲಿ ನೆಲೆಸಿರುವ ಮೇಡ ತನ ಉಲ್ಲಾಸ್ ಹಾಗೂ ಶ್ರೀಮತಿ ಚಂದ್ರಮ್ಮನವರ ಪುತ್ರ.
ಮಡಿಕೇರಿಯಲ್ಲಿ ಸಂಭ್ರಮದ ಪುತ್ತರಿ ಅರಮನೆ ಕೋಲಾಟ್
November 25, 2018ಮಡಿಕೇರಿ: ಕೃಷಿಯನ್ನು ಬದು ಕಿನ ಭಾಗವಾಗಿಸಿಕೊಂಡಿರುವ ಕೊಡಗಿ ನಲ್ಲಿ ಹುತ್ತರಿ ಹಬ್ಬದ ಸಂಭ್ರಮಾಚರಣೆಯ ಮರುದಿನವಾದ ಶನಿವಾರ ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣ ದಲ್ಲಿ ‘ಪುತ್ತರಿ ಅರಮನೆ ಕೋಲಾಟ್’ ಅತ್ಯು ತ್ಸಾಹದಿಂದ ನಡೆಯುವ ಮೂಲಕ ಶ್ರೀಮಂತ ಸಂಸ್ಕøತಿಯನ್ನು ಅನಾವರಣಗೊಳಿಸಿತು. ಜಿಲ್ಲಾಡಳಿತ, ಶ್ರೀ ಓಂಕಾರೇಶ್ವರ ದೇವ ಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ದೇಶ ತಕ್ಕ ಸ್ಥಾನದಲ್ಲಿರುವ ಪಾಂಡೀರ ಕುಟುಂಬ ಸ್ಥರ ವತಿಯಿಂದ, ಮಡಿಕೇರಿ ಕೊಡವ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಹುತ್ತರಿ ಹಬ್ಬದ…
ದಕ್ಷಿಣ ಕೊಡಗಿನಲ್ಲಿ ಸಂಭ್ರಮದ ಪುತ್ತರಿ ಆಚರಣೆ
November 25, 2018ಗೋಣಿಕೊಪ್ಪಲು: ದಕ್ಷಿಣ ಕೊಡ ಗಿನಲ್ಲಿ ಪುತ್ತರಿ ನಮ್ಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನದಲ್ಲಿ ಸಾಮೂಹಿಕವಾಗಿ ದೇವಕದ್, ಮನೆಯ ಗದ್ದೆಗಳಲ್ಲಿ ಗುರು ಕದ್ ಹೀಗೆ ಕದಿರು ತೆಗೆದು ಧಾನ್ಯ ಲಕ್ಷ್ಮಿಯನ್ನು ಬರಮಾಡಿಕೊಳ್ಳಲಾಯಿತು. ಆಚರಣೆಯಂತೆ ಕದಿರು ತೆಗೆಯುವ ಮುನ್ನ ಗಾಳಿಯಲ್ಲಿ ಗುಂಡು ಹೊಡೆದು ನಂತರ ಕದಿರು ತೆಗೆಯಲಾಯಿತು. ವಿವಿಧ ಗ್ರಾಮಗಳಲ್ಲಿ ಪದ್ದತಿಯಂತೆ ಹಗಲು ಹಾಗೂ ರಾತ್ರಿ ಕದಿರು ತೆಗೆ ಯಲಾಯಿತು. ಮಳೆಯ ಚಿಂಚನದ ನಡುವೆ ಧಾನ್ಯಲಕ್ಷ್ಮಿ ಯನ್ನು ಮನೆ ಮನೆಗೆ ಬರಮಾಡಿಕೊಳ್ಳ ಲಾಯಿತು. ಶ್ರೀ ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ…
ಜೀಪ್‍ನಿಂದ ಜಿಗಿದು ಕಾರ್ಮಿಕ ಮಹಿಳೆ ಸಾವು
November 25, 2018ಸೋಮವಾರಪೇಟೆ: ಜೀಪಿನಿಂದ ಜಿಗಿದು ಕಾರ್ಮಿಕ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ನಂದಿಮೊಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ಅಸ್ಸಾಂ ಮೂಲದ ಸಲ್ಮ(30) ಮೃತಪಟ್ಟ ದುರ್ದೈವಿ. ನಂದಿಮೊಟ್ಟೆ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮಹೇಂದ್ರ ಕ್ಯಾಂಟರ್‍ನಲ್ಲಿ ಕುಳಿತುಕೊಂಡ ಸಂದರ್ಭ ಚಾಲಕ ಕ್ಯಾಂಟರ್‍ನ ಹ್ಯಾಂಡ್ ಬ್ರೇಕನ್ನು ಸರಿಯಾಗಿ ಹಾಕದೆ ನಿಲ್ಲಿಸಿದ್ದರು ಎನ್ನಲಾಗಿದೆ. ಏಕಾ ಏಕಿ ವಾಹನ ಹಿಂದಕ್ಕೆ ಚಲಿಸಿದ್ದು ಕ್ಯಾಂಟರ್‍ನಲ್ಲಿ ಕುಳಿತಿದ್ದ ಸಲ್ಮ ಹೊರಗೆ ಜಿಗಿದ ಪರಿಣಾಮ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ…
ಪೆರೂರಿನಲ್ಲಿ ಕಾಡಾನೆ ದಾಳಿ; ಕದಿರು ತೆಗೆಯುವ ಗದ್ದೆ ನಾಶ
November 24, 2018ನಾಪೋಕ್ಲು: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರೂರು ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಹುತ್ತರಿ ಆಚರಣೆಗೆ ಆತಂಕ ತಂದೊಡ್ಡಿವೆ. ಹುತ್ತರಿ ಕದಿರು ತೆಗೆಯುವ ಗದ್ದೆಗೆ ಕಾಡಾನೆಗಳು ದಾಳಿ ಇಟ್ಟು ಧ್ವಂಸ ಮಾಡಿದ ಘಟನೆ ಕಳೆದ ರಾತ್ರಿ ಜರುಗಿದೆ. ಕೊಡಗಿನ ರೈತಾಪಿ ಜನರು ಧಾನ್ಯ ಲಕ್ಷ್ಮಿಯನ್ನು ಬರ ಮಾಡಿ ಕೊಳ್ಳುವ ಸಂಭ್ರಮದಲ್ಲಿದ್ದುರು. ಆದರೆ ಪೇರೂರು ಗ್ರಾಮಸ್ಥರಿಗೆ ಆತಂಕ ಎದುರಾ ಗಿದೆ. ಪೆರೂರು ಗ್ರಾಮದ ತಾಪಂಡ ಕುಟುಂಬಸ್ಥರು ತಮ್ಮ ಹಿರಿಯರ ಕಾಲದಿಂದ ಹುತ್ತರಿ ಕದಿರು ತೆಗೆಯುವ ಗದ್ದೆಗೆ…
ಜಿಲ್ಲೆಯಾದ್ಯಂತ ಸಾಂಪ್ರದಾಯಕ ಹುತ್ತರಿ ಆಚರಣೆ: ಪಟಾಕಿಗಳ ಸದ್ದಿಲ್ಲ, ಪ್ರಕೃತಿ ವಿಕೋಪ ವ್ಯಾಪ್ತಿಯಲ್ಲಿ ಸಂಭ್ರಮವಿಲ್ಲ
November 24, 2018ಮಡಿಕೇರಿ: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬವನ್ನು ಜಿಲ್ಲೆಯಾದ್ಯಂತ ಈ ಬಾರಿ ಸಂಪ್ರದಾಯ ದಂತೆ ಸರಳವಾಗಿ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾ ಲಯದಲ್ಲಿ ರೋಹಿಣಿ ನಕ್ಷತ್ರದಲ್ಲಿ ರಾತ್ರಿ 7.15ಕ್ಕೆ ನೆರೆಕಟ್ಟಿ, ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ 8.15ಕ್ಕೆ ಕದಿರು ತೆಗೆಯಲಾಯಿತು. ಆ ಮೂಲಕ ಜಿಲ್ಲೆ ಯಲ್ಲಿ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಮೊದಲು ಹುತ್ತರಿ ಹಬ್ಬವನ್ನು ಆಚರಿಸಲಾಯಿತು. ತದನಂತರ ಜಿಲ್ಲೆಯ ವಿವಿಧೆಡೆ ಹಬ್ಬಾ ಚರಣೆ ನಡೆಸಲಾಯಿತು. ನಗರದ ಓಂಕಾರೇಶ್ವರ ದೇವಾಲಯ, ಕೊಡವ ಸಮಾಜ, ಗೌಡ…
ನ.28ಕ್ಕೆ ವಿ.ಪೇಟೆ ಡಿವೈಎಸ್ಪಿ ಕಛೇರಿಗೆ ಮುತ್ತಿಗೆ
November 24, 2018ಪೊನ್ನಂಪೇಟೆ: ಟಿಪ್ಪು ಜಯಂತಿ ವಿರೋಧಿಸುತ್ತಿರುವ ಕೊಡಗಿನ ಹಿಂದೂ ಸಮು ದಾಯವನ್ನು ನಿಂದಿಸಿ, ಅವಹೇಳನ ಹಾಗೂ ಕೋಮು ಭಾವನೆಗೆ ಧಕ್ಕೆ ತಂದಿರುವ, ಪ್ರಚೋದನಕಾರಿ ಸಂದೇಶ ನೀಡಿರುವ ಆರೋಪದಡಿ ಕೊಡಗಿನ ನಾಪೊಕ್ಲು ನಿವಾಸಿ ಆಸೀಫ್ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೆ ಬಂಧಿಸದೆ ಇರುವುದನ್ನು ಖಂಡಿಸಿ ನ.28 ರಂದು ವಿರಾಜಪೇಟೆ ಡಿವೈಎಸ್‍ಪಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಹಿಂದೂ ಪರ ಸಂಘಟನೆಗಳು ನಿರ್ಣಯ ಕೈಗೊಂಡಿದೆ. ಪೊನ್ನಂಪೇಟೆ ಕೊಡವ ಸಮಾಜ ರಿಕ್ರಿಯೆಷನ್ ಕ್ಲಬ್ ಸಭಾಂಗಣದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ…
ಆರ್ಜಿ ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಕ್ಕೆ ಕ್ರಮ
November 24, 2018ವಿರಾಜಪೇಟೆ: ವಿರಾಜಪೇಟೆ ಬಳಿಯ ಆರ್ಜಿ ಗ್ರಾಪಂ ಫಲಾನುಭವಿಗಳಿಗೆ ವಿದ್ಯುತ್ ದೀಪ, ಕುಡಿಯುವ ನೀರು, ಕಟ್ಟಡ ಮತ್ತು ವಾಣಿಜ್ಯ ಪರವಾನಗಿ, ಖಾತೆ ವರ್ಗಾವಣೆ ಹಾಗೂ ನಿರಾಕ್ಷೇಪಣಾ ಪತ್ರ ಸೇರಿದಂತೆ ಮೂಲ ಭೂತ ಸೌಲಭ್ಯಗಳಿಗೆ ಅರ್ಜಿ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಹೆಚ್.ಎನ್.ಗಾಯಿತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾ ಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ಸತೀಶ್ ಕುಮಾರ್, ಕಳೆದ 2-3 ತಿಂಗಳಿಂದಲೂ ಸಭೆಯನ್ನು ನಡೆಸಿಲ್ಲ ಎಂದು ಪಂಚಾಯಿತಿ ಅಧ್ಯಕ್ಷೆ ಮತ್ತು ಕೆಲವು ಸದಸ್ಯರುಗಳು ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಜಯಣ್ಣ ಅವರಿಗೆ ದೂರು…










