ಸೋಮವಾರಪೇಟೆಯಲ್ಲಿ ಅಂಬಿಗೆ ಶ್ರದ್ಧಾಂಜಲಿ
ಕೊಡಗು

ಸೋಮವಾರಪೇಟೆಯಲ್ಲಿ ಅಂಬಿಗೆ ಶ್ರದ್ಧಾಂಜಲಿ

November 26, 2018

ಸೋಮವಾರಪೇಟೆ: ಚಿತ್ರನಟ ಅಂಬರೀಶ್ ಅವರ ನಿಧನಕ್ಕೆ ಇಲ್ಲಿನ ಅಂಬರೀಶ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಶ್ರದ್ಧಾಂಜಲಿ ಅರ್ಪಿ ಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾ ಣದ ಪುಟ್ಟಪ್ಪ ವೃತ್ತದಲ್ಲಿ ಅಂಬರೀಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ.ಸಿ.ಶಶಿ ಕುಮಾರ್, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜು, ಆಟೋ ಚಾಲಕ ಹಸನಬ್ಬ, ಸಂಘದ ಸದಸ್ಯರುಗಳಾದ ಆನಂದ, ರವಿ, ಸ್ವಾಮಿ, ಸುರೇಂದ್ರ, ಜಮೀಲ್ ಮತ್ತಿತರರು ಇದ್ದರು.

Translate »