ಡಿಸೆಂಬರ್ 1ರಂದು ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಗೆ ಆಗ್ರಹಿಸಿ ಜನಾಗ್ರಹ ಸಭೆ
ಕೊಡಗು

ಡಿಸೆಂಬರ್ 1ರಂದು ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಗೆ ಆಗ್ರಹಿಸಿ ಜನಾಗ್ರಹ ಸಭೆ

November 26, 2018

ಮಡಿಕೇರಿ:  ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಡಿ.1 ರಂದು ಮಡಿಕೇರಿಯಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಹೆಚ್‍ಪಿಯ ಪ್ರಧಾನ ಕಾರ್ಯದರ್ಶಿ ನರಸಿಂಹ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿದ್ದು, ಇಂದಿನವರೆಗೆ 73 ಬೃಹತ್ ಹೋರಾಟ ನಡೆದಿದೆ. 1984ರಿಂದ ವಿಹೆಚ್‍ಪಿ ರಾಮಮಂದಿರ ಹೋರಾಟವನ್ನು ಕೈಗೆತ್ತಿ ಕೊಂಡಿದ್ದು, ಸಾವಿರಾರು ರಾಮಭಕ್ತರು ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಲಾಲ್‍ಕೃಷ್ಣ ಅಡ್ವಾಣಿ, ಅಶೋಕ್ ಸಿಂಘಾನಿ ಅವರ ರಥಯಾತ್ರೆಯ ಹೋರಾಟ ಹಾಗೂ ಸಹಸ್ರ ಸಂಖ್ಯೆಯ ರಾಮ ಭಕ್ತರು ಕರ ಸೇವೆಯ ಮೂಲಕ ಮಂದಿರ ನಿರ್ಮಾ ಣಕ್ಕೆ ಅಯೋಧ್ಯೆಗೆ ಇಟ್ಟಿಗೆ ಒಯ್ದಿದ್ದಾರೆ. 1992ರಲ್ಲಿ ಬಾಬರ್ ಮಸೀದಿ ಕೆಡವಲಾದ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಹೀಗಾಗಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿ ಸುವ ಮೂಲಕ ರಾಮ ಮಂದಿರ ನಿರ್ಮಾ ಣಕ್ಕೆ ಮುಂದಾಗಬೇಕಿದೆ. ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ ರಾಷ್ಟ್ರಾದ್ಯಂತ ಜನಾಗ್ರಹ ಸಭೆ ನಡೆಯಲಿದ್ದು, ಅದರಂತೆ ಮಡಿಕೇರಿಯಲ್ಲಿ ಡಿಸೆಂಬರ್ 1 ರಂದು ಸಭೆ ಮತ್ತು ಜಾಥಾ ಹಮ್ಮಿಕೊಂಡಿರುವು ದಾಗಿ ಡಿ. ನರಸಿಂಹ ತಿಳಿಸಿದರು.

ಅಂದು ಮಧ್ಯಾಹ್ನ 2 ಗಂಟೆಗೆ ನಗರದ ಬನ್ನಿಮಂಟಪದ ಬಳಿಯಿಂದ ಗಾಂಧಿ ಮೈದಾನದವರೆಗೆ ದೇವರ ಕಲಾಕೃತಿಗಳ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾ ಗಿದೆ. 4 ಗಂಟೆಗೆ ಗಾಂಧಿ ಮೈದಾನದಲ್ಲಿ ಜನಾಗ್ರಹ ಸಭೆ ನಡೆಯಲಿದೆ ಎಂದು ನರಸಿಂಹ ತಿಳಿಸಿದರು. ಸಭೆಯನ್ನು ಉದ್ದೇ ಶಿಸಿ ಉಡುಪಿಯ ಗುರುಪುರ ಶ್ರೀ ವಜ್ರದೇಹಿ ಆಶ್ರಮದ ಶ್ರೀ ರಾಜಶೇಖ ರಾನಂದ ಸ್ವಾಮೀಜಿ ದಿಕ್ಸೂಚಿ ಭಾಷಣ ಮಾಡಲಿದ್ದು, ವಿಶ್ವ ಹಿಂದೂ ಪರಿಷತ್‍ನ ರಾಷ್ಟ್ರೀಯ ಮತ್ತು ಪ್ರಾಂತ ಮುಖಂಡ ರೊಂದಿಗೆ ಸಾಧು ಸಂತರು ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬಜರಂಗದಳದ ವಿದ್ಯಾರ್ಥಿ ಪ್ರಮುಖ ರಾದ ವಿನಯ್ ಮಾತನಾಡಿ, ಸುಪ್ರೀಂ ಕೋರ್ಟ್ ಹಿಂದೂ ಧರ್ಮದ ನಂಬಿ ಕೆಗಳ ವಿರುದ್ಧವಾಗಿ ತೀರ್ಪು ನೀಡು ತ್ತಿರುವುದು ಕೋಟ್ಯಾಂತರ ಹಿಂದೂಗಳಿಗೆ ಬೇಸರ ತಂದಿದೆ. ಶಬರಿಮಲೆ ಪ್ರವೇಶ ಪ್ರಕರಣದ ತೀರ್ಪು ಒಂದು ಉದಾ ಹರಣೆಯಾಗಿದ್ದು, ರಾಮ ಮಂದಿರದ ವಿಚಾರದಲ್ಲಿ ಇಂತಹ ಪ್ರಮಾದಗಳು ನಡೆಯಬಾರದೆನ್ನುವ ಉದ್ದೇಶದಿಂದ ಸುಗ್ರೀವಾಜ್ಞೆ ತರುವಂತೆ ಕೇಂದ್ರವನ್ನು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು. ದೇಶದ ಪ್ರತಿ ಸಂಸತ್ ಕ್ಷೇತ್ರದಲ್ಲಿ ಜನಾಗ್ರಹ ಸಭೆ ನಡೆಯಲಿದ್ದು, ಆ ಕ್ಷೇತ್ರದ ಸಂಸದರಿಗೆ ಜನಾಗ್ರಹದ ಪ್ರತಿಯನ್ನು ಹಸ್ತಾಂತರಿಸಿ ಚಳಿಗಾಲದ ಅಧಿವೇ ಶನದಲ್ಲಿ ಮಂಡಿಸಲು ಆಗ್ರಹಿಸಲಾಗುತ್ತದೆ. ಹಿಂದೂ ಸಂಘಟನೆಗಳ ಹಿರಿಯರ ಮಾರ್ಗದರ್ಶನದಂತೆ ಜನಾಗ್ರಹ ಸಭೆ ನಡೆಯತ್ತಿದ್ದು, ರಾಜಕೀಯ ಪ್ರೇರಿತವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ವಿಹೆಚ್‍ಪಿಯ ಕೊಡಗು ಜಿಲ್ಲಾ ಕಾರ್ಯಾಧ್ಯಕ್ಷ ಐ.ಎಂ.ಅಪ್ಪಯ್ಯ, ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್, ಮಡಿಕೇರಿ ನಗರ ಸಂಯೋಜಕ ಮನು ರೈ, ಜಿಲ್ಲಾ ಸೇವಾ ಪ್ರಮುಖ ಕಮಲ್ ಉಪಸ್ಥಿತರಿದ್ದರು.

Translate »