ಮಂಜಿನ ನಗರಿಯಲ್ಲಿ ಅಂಬರೀಶ್ ಹೆಜ್ಜೆ…
ಕೊಡಗು

ಮಂಜಿನ ನಗರಿಯಲ್ಲಿ ಅಂಬರೀಶ್ ಹೆಜ್ಜೆ…

November 26, 2018

ಮಡಿಕೇರಿ:  ಕನ್ನಡ ಚಿತ್ರೋದ್ಯ ಮದ ಹೆಸರಾಂತ ಹಿರಿಯ ನಟ, ಮಾಜಿ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ, ಮಂಡ್ಯದ ಗಂಡು ಅಂಬರೀಷ್ ಅವರ ಅಗಲಿಕೆಗೆ ಕೊಡಗು ಜಿಲ್ಲೆ ಕೂಡ ಕಂಬನಿ ಮಿಡಿದಿದೆ. ಕೊಡಗು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬ ರೀಷ್ ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜಿಲ್ಲೆಯನ್ನೇ ಆಯ್ಕೆ ಮಾಡಿ ಕೊಳ್ಳುತ್ತಿದ್ದರು.

ಸುಂಟಿಕೊಪ್ಪ ನಿವಾಸಿ, ಉಪಾಸಿ ಸಂಸ್ಥೆಯ ಮಾಜಿ ಅಧ್ಯಕ್ಷ, ಉದ್ಯಮಿ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಅವರ ಸಹೋ ದರ ಆನಂದ್ ಬಸಪ್ಪ, ಕೆಪಿಸಿಸಿ ಮುಖಂಡ ಮಿಟ್ಟು ಚಂಗಪ್ಪ ಅವರೊಂದಿಗೆ ಆತ್ಮೀಯ ಸ್ನೇಹ ಹೊಂದಿದ್ದ ಅಂಬರೀಷ್, ವಿನೋದ್ ಶಿವಪ್ಪ, ಆನಂದ್ ಬಸಪ್ಪ ಮಾಲೀಕತ್ವದ ಬೆಟ್ಟಗೇರಿ ಎಸ್ಟೇಟ್ ಗ್ರೂಪ್‍ನ ಬಂಗಲೆ ಯಲ್ಲೆ ವಾಸ್ತವ್ಯ ಹೂಡುತ್ತಿದ್ದರು. ಮಡಿ ಕೇರಿಯ ಗಾಲ್ಫ್ ಗ್ರೌಂಡ್‍ಗೂ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ಗಾಲ್ಫ್ ಕ್ರೀಡೆ ಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಕುಟುಂಬ ಬೆಸುಗೆ: ಅಂಬರೀಷ್ ಮಾತ್ರ ವಲ್ಲದೆ ಅವರ ಕುಟುಂಬ ಕೂಡ ಕೊಡಗು ಜಿಲ್ಲೆಯೊಂದಿಗೆ ಅವಿನಾವಭಾವ ಸಂಬಂಧ ಬೆಸೆದುಕೊಂಡಿದೆ. ಅಂಬರೀಷ್ ಅವರ ಹಿರಿಯ ಸಹೋದರ ಶಿವಕುಮಾರ್ ಅವ ರಿಗೆ ದಂಬೆಕೋಡಿ ಹರೀಶ್ ಅವರ ಅಕ್ಕ ಭಾಗೀರಥಿ ಅವರನ್ನು ವಿವಾಹ ಮಾಡಿ ಕೊಡಲಾಗಿದೆ. ಹೀಗಾಗಿ ಅಂಬರೀಷ್ ಕುಟುಂ ಬಕ್ಕೆ ಹಾಗೂ ಕೊಡಗಿಗೆ ವೈವಾಹಿಕ ಸಂಬಂ ಧವು ಕೂಡಿಕೊಂಡಿದೆ. 1980ರ ದಶಕ ದಲ್ಲಿ ಶಿವಕುಮಾರ್ ಕೊಡಗು ಜಿಲ್ಲಾ ಲೋಕೋ ಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿಯೂ ಕರ್ತವ್ಯ ನಿರ್ವ ಹಿಸಿರುವುದು ಮತ್ತೊಂದು ವಿಶೇಷ.

ಸಿನಿಮಾ ಪಯಣ: ಅಂಬರೀಷ್ ಮತ್ತು ಸುಧಾರಾಣಿ ಅವರು ನಾಯಕ ನಾಯಕಿ ಯಾಗಿ ನಟಿಸಿದ “ಮಣ್ಣಿನ ದೋಣಿ” ಚಲನ ಚಿತ್ರದ ಶೇಕಡಾ 90ರಷ್ಟು ಚಿತ್ರೀಕರಣ ಕೂಡ ನಡೆದದ್ದು ಕೊಡಗು ಜಿಲ್ಲೆಯ ಲ್ಲಿಯೇ. ಕುಶಾಲನಗರದ ಹಾರಂಗಿ, ದುಬಾರೆ, ಕಾವೇರಿ ನಿಸರ್ಗಧಾಮ, ಮಡಿಕೇರಿಯ ರಾಜಾಸೀಟು, ಅಬ್ಬಿಫಾಲ್ಸ್ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮಣ್ಣಿನ ದೋಣಿ ಚಲನಚಿತ್ರ ಚಿತ್ರೀಕರಣಗೊಂಡಿತ್ತು. ಇದೀಗ ಅಂಬರೀಷ್ ತಮ್ಮ ಬದುಕಿನ ಅಂತಿಮ ಪಯಣ ಮುಗಿಸಿದ್ದು, ಕೊಡಗು ಜಿಲ್ಲೆಯ ಅವಿನಾಭಾವದ ನಂಟು ಕೂಡ ಕಳಚಿದಂತಾಗಿದೆ.

Translate »