ವಿರಾಜಪೇಟೆ ಕೊಡವ ಸಮಾಜದಿಂದ ಹುತ್ತರಿ ಆಚರಣೆ
ಕೊಡಗು

ವಿರಾಜಪೇಟೆ ಕೊಡವ ಸಮಾಜದಿಂದ ಹುತ್ತರಿ ಆಚರಣೆ

November 26, 2018

ವಿರಾಜಪೇಟೆ: ವಿರಾಜಪೇಟೆ ಕೊಡವ ಸಮಾಜದಿಂದ ಹುತ್ತರಿ ಹಬ್ಬ ವನ್ನು ಸಾಂಪ್ರ ದಾಯಿಕವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನ.23 ರಂದು ರಾತ್ರಿ 7.30 ಗಂಟೆಗೆ ಕೊಡವ ಸಮಾಜದ ನೆಲ್ಲಕ್ಕಿಯಲ್ಲಿ ನೆರೆ ಕಟ್ಟಲಾಯಿತು. ರಾತ್ರಿ 8.30ಗಂಟೆಗೆ ಕೊಡವ ಸಮಾಜದ ಗದ್ದೆಯಲ್ಲಿ ಸಮುದಾಯದ ಹಿರಿಯರಾದ ಕೂತಂಡ ನಾಣಯ್ಯ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಕದಿರು ತೆಗೆಯಲಾಯಿತು. ನಂತರ ಮೆರವಣಿಗೆ ಯಲ್ಲಿ ಸಾಮೂಹಿಕವಾಗಿ ಕೊಡವ ಸಮಾ ಜದ ಸಭಾಂಗಣಕ್ಕೆ ಆಗಮಿಸಿದ ಸಮು ದಾಯದವರು ನೆಲ್ಲಕ್ಕಿಯಲ್ಲಿ ಕದಿರಿಗೆ ಪೂಜೆ ಸಲ್ಲಿಸಿದ ಬಳಿಕ ಕದಿರನ್ನು ಎಲ್ಲ ರಿಗೂ ವಿತರಿಸಲಾಯಿತು. ಈ ಸಂದರ್ಭ ಪಾಯಸ, ತಂಬಿಟ್ಟು ವಿಶೇಷ ತಿನಿಸು ಗಳನ್ನು ವಿತರಿಸಲಾಯಿತು. ಹುತ್ತರಿ ಆಚರಣೆ ಸಂದರ್ಭದಲ್ಲಿ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಗೌರವ ಕಾರ್ಯದರ್ಶಿ ಕುಲ್ಲಚಂಡ ಪೂಣಚ್ಚ, ಸಹ ಕಾರ್ಯದರ್ಶಿ ಕನ್ನಂಬೀರ ಚಿಣ್ಣಪ್ಪ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಮುದಾ ಯದ ಕುಟುಂಬಗಳು ಹಾಜರಿದ್ದರು.

Translate »