ಮೈಸೂರು ಕೊಡವ ಸಮಾಜ, ಕೊಡಗು ಗೌಡ ಸಮಾಜದಿಂದ ಇಂದು ಹುತ್ತರಿ ಹಬ್ಬ
ಕೊಡಗು

ಮೈಸೂರು ಕೊಡವ ಸಮಾಜ, ಕೊಡಗು ಗೌಡ ಸಮಾಜದಿಂದ ಇಂದು ಹುತ್ತರಿ ಹಬ್ಬ

November 23, 2018

ಮೈಸೂರು: ಮೈಸೂರು ಕೊಡವ ಸಮಾಜ ಮತ್ತು ಕೊಡಗು ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಾಳೆ (ನ. 23) ಸಂಜೆ 5.30 ಗಂಟೆ ನಂತರ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀಕಾವೇರಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುವುದು.

ಇದರ ಅಂಗವಾಗಿ ಕೊಡವ ಸಾಂಪ್ರದಾಯಿಕ ನೃತ್ಯ ಪ್ರದರ್ಶನವಿದೆ. ಸಂಜೆ 7.30 ಗಂಟೆಗೆ ನೆರೆ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ಹೊಸ ಭತ್ತದ ಕೊಯ್ಲು (ಕದಿರು), 9.30ಕ್ಕೆ ತಂಬಟ್ಟು ಪ್ರಸಾದ ವಿತರಣೆ ನಡೆಯಲಿದೆ.
ಕಳೆದ ವರ್ಷ ವಿಜಯನಗರದ ಸಮಾಜದ ಆವರಣದಲ್ಲಿ ಪುತೇರಿ ಈಡು ಕಾರ್ಯ ಕ್ರಮ ನ. 18 ಸಂಜೆ 6 ಗಂಟೆಗೆ ನಡೆದು ಕೊಡವ ನೃತ್ಯ ತರಬೇತಿ ನೀಡಲಾಯಿತು. ಮೈಸೂರಿನ ವಿವಿಧ ಕೊಡವ ಸಮಾಜಗಳ ಪ್ರಾಯೋಜಕತ್ವದಲ್ಲಿ ಈಡು ಕಾರ್ಯಕ್ರಮ ಸಂಜೆ ನಡೆಯಲಿದೆ. ಕೆಟೋಲಿರಾ ರವಿ ಬೆಳ್ಳಿಯಪ್ಪ ಅವರು ಬೊಳಕಾಟ್, ಕೋಲಾಟ, ಕಾತಿಯಾಟ್ ಮತ್ತು ಪರೆಉಕಳಿ ನೃತ್ಯ ತರಬೇತಿ ನೀಡಿದ್ದು, ಕುಳ್ಳಚಂಡ ವಿನುತಾ ಕೇಸರಿ ಅವರು ಮಹಿಳೆಯರಿಗೆ ಉಮ್ಮತಾಟ್ ನೃತ್ಯ ತರಬೇತಿ ನೀಡಿದ್ದಾರೆ.

ಮೈಸೂರಿನಲ್ಲಿ ಕೊಡವ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಬಲಪಡಿಸಿ ಉಳಿಸಿ ಕೊಂಡು, ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡುತ್ತಿರುವ ಮೈಸೂರು ಕೊಡವ ಸಮಾಜ ಕಾರ್ಯ ಶ್ಲಾಘಿನೀಯ.
ಕೊಡವರು ಸಾಂಪ್ರದಾಯಿಕ ಉಡುಗೆ ತೊಟ್ಟು ನಾಳೆ ನಡೆಯುವ ಹುತ್ತರಿ ಹಬ್ಬದಲ್ಲಿ ಭಾಗವಹಿಸುವುದು ಹುತ್ತರಿ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.

ಕೊಡಗು ಗೌಡ ಸಮಾಜ: ಮೈಸೂರಿನ ವಿಜಯನಗರದಲ್ಲಿರುವ ಕೊಡಗು ಗೌಡ ಸಮಾಜದ ವತಿಯಿಂದ ಸಮಾಜದ ಆವರಣದಲ್ಲೂ ಕೂಡ ಹುತ್ತರಿ ನಾಳೆ ಸಂಜೆ 7 ಗಂಟೆಯ ನಂತರ ನಡೆಯಲಿದೆ. ಸಂಜೆ 7.45ಕ್ಕೆ ನೆರೆ ಕಟ್ಟುವ ಕಾರ್ಯ, ರಾತ್ರಿ 8.45ಕ್ಕೆ ಹೊಸ ಭತ್ತದ ಕೊಯ್ಲು (ಕದಿರು) ನಡೆಯಲಿದೆ. ಕದಿರು ವಿತರಣಾ ಸಮಾರಂಭವೂ ಕೂಡ ನಡೆಯಲಿದೆ ಎಂದು ಸಮಾಜದ ಗೌರವ ಕಾರ್ಯದರ್ಶಿ ಕೆ.ಎಸ್. ಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »