ನ.28, ಕಾವೇರಿ ಕಾರ್ನಿವಲ್ ಫನ್‍ಫೇರ್
ಕೊಡಗು

ನ.28, ಕಾವೇರಿ ಕಾರ್ನಿವಲ್ ಫನ್‍ಫೇರ್

November 23, 2018

ವಿರಾಜಪೇಟೆ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವ್ಯವಹಾರ ಚಾತುರ್ಯ, ಸಂವ ಹನ, ಕೌಶಲ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಹಾಗೂ ಗೋಣಿಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿಯ ಸಹಯೋಗದೊಂದಿಗೆ ನ.28 ರಂದು ಪೂರ್ವಾಹ್ನ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ”ಕಾವೇರಿ ಕಾರ್ನಿವಲ್ ಫನ್‍ಫೇರ್-2018” ಎಂಬ ವಿಭಿನ್ನ ಪರಿಕಲ್ಪನೆಯ ಕಲಾ ಮತ್ತು ವೈನೋದಿಕ ಉತ್ಸವವನ್ನು ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಎನ್.ಎಂ.ನಾಣಯ್ಯ ತಿಳಿಸಿದರು.

ವಿರಾಜಪೇಟೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಣಯ್ಯ, ಕೊಡಗಿನ ಶಿಕ್ಷಣ ರಂಗದಲ್ಲಿ ತನ್ನದೇ ಅನನ್ಯತೆಯನ್ನು ಪಡೆದು ಕೊಂಡಿರುವ ಕಾವೇರಿ ಪದವಿ ಪೂರ್ವ ಕಾಲೇಜು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ನೀಡುತ್ತಾ ಬಂದಿದೆ. ಕೊಡಗು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಈ ಉತ್ಸವದಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ತಿನಿಸುಗಳು, ಪಾನೀಯಗಳು ಮತ್ತು ಅಕರ್ಷಕ ವಸ್ತು ಪ್ರದರ್ಶನ, ವಿನೋದಾತ್ಮಕ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಜಿಲ್ಲೆಯಿಂದ ಹದಿನೈದಕ್ಕೂ ಹೆಚ್ಚು ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಕಿ ಎ.ಎಂ.ಡಯಾನ, ಹಿರಿಯ ಉಪನ್ಯಾಸಕರಾದ ಎಂ.ಪಿ.ದಮಯಂತಿ, ಕೆ.ಪಿ.ಬೋಪಣ್ಣ ಹಾಗೂ ಎಂ.ಎ.ನಾಚಪ್ಪ ಇತರರು ಉಪಸ್ಥಿತರಿದ್ದರು.

Translate »