ವಿರಾಜಪೇಟೆಯಲ್ಲಿ ಅಪ್ಪಚ್ಚಕವಿ ಜನ್ಮ ದಿನಾಚರಣೆ
ಕೊಡಗು

ವಿರಾಜಪೇಟೆಯಲ್ಲಿ ಅಪ್ಪಚ್ಚಕವಿ ಜನ್ಮ ದಿನಾಚರಣೆ

November 23, 2018

ವಿರಾಜಪೇಟೆ: ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಹುಟ್ಟುಹಬ್ಬ ಹಾಗೂ 75ನೇ ಪುಣ್ಯ ಸ್ಮರಣೆಯ ಅಂಗವಾಗಿ ವಿರಾಜಪೇಟೆ ಪಟ್ಟ ಣದ ದೊಡ್ಡಟ್ಟಿ ಚೌಕಿಯಲ್ಲಿರುವ ಹರದಾಸ ಅಪ್ಪಚ್ಚ ಕವಿಯ ಪ್ರತಿಮೆಗೆ ಅರಮೇರಿ ಕಳಂ ಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾಲಾರ್ಪಣೆ ಮಾಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾ ಡೆಮಿ, ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಅಪ್ಪಚ್ಚ ಕವಿ ಪ್ರತಿಮೆ ಸ್ಥಾಪಕ ಅಧ್ಯಕ್ಷ ಮುಲ್ಲೆಂಗಡ ಶಂಕರಿ ಪೊನ್ನಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ, ಅಕಾಡೆಮಿ ಸದಸ್ಯ ಉಮೇಶ್ ಕೇಚಮಯ್ಯ ಹಾಗೂ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಡಾ.ಕಾಳಿಮಾಡ ಶಿವಪ್ಪ, ಚರಮಂದಂಡ ನಾಣಯ್ಯ, ಮುಲ್ಲೆಂಗಡ ಬೇಬಿ ಚೋಂದಮ್ಮ, ಮುಲ್ಲೆಂಗಡ ಅಶೋಕ್, ಬಿ.ಎಸ್.ಕಲಿಮುಲ್ಲಕಾನ್, ನಂದಿನೆರವಂಡ ನಾಚಪ್ಪ, ಮೂಡಗದ್ದೆ ರಾಮಕೃಷ್ಣ, ಬೊಳ್ಳ ಜಿರ ಅಯ್ಯಪ್ಪ, ಪೊಲಿಯಂಡ ಪಿ.ಪೊನ್ನಪ್ಪ, ಚೆಂದಂಡ ಚುಮ್ಮಿ ಪೂವಯ್ಯ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ನಂತರ ಗಣಪತಿ ದೇವಾಲಯದವರೆಗು ಮೆರವಣಿಗೆ ನಡೆಸಿ ಬಳಿಕ ಗೋಣಿಕೊ ಪ್ಪಲು ಬಳಿಯ ಅತ್ತೂರು ಶಾಲಾ ಆವರಣ ದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

Translate »